2ನೇ ಬಾರಿಗೆ ಮುಖ್ಯಮಂತ್ರಿ: ಪ್ರಮಾಣ ವಚನಕ್ಕೆ ಖಟ್ಟರ್ ಸಿದ್ಧತೆ
ಚಂಡೀಗಢ: ಮನೋಹರ ಲಾಲ್ ಖಟ್ಟರ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಮರುಆಯ್ಕೆಯಾಗಿದ್ದು, ಹರಿಯಾಣ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಖಟ್ಟರ್ಗೆ ದುಷ್ಯಂತ್ ಚೌಟಾಲ ಸಾಥ್ ನೀಡಿದ್ದಾರೆ. ನಾಳೆ ಮಧ್ಯಾಹ್ನ 1.15ಕ್ಕೆ ಸಿಎಂ ಆಗಿ ಖಟ್ಟರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಕಳೆದ ಬಾರಿಗಿಂತ 7 ಸೀಟು ಕಡಿಮೆ ಗಳಿಸಿದ್ದು, ಸರಳ ಬಹುಮತಕ್ಕಿಂತ 6 ಸೀಟು ಕಡಿಮೆಯಾಗಿದೆ. ಈ ಮಧ್ಯೆ, ಜನನನಾಯಕ್ ಜನತಾ ಪಾರ್ಟಿ 10 ಸ್ಥಾನ […]
ಚಂಡೀಗಢ: ಮನೋಹರ ಲಾಲ್ ಖಟ್ಟರ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಮರುಆಯ್ಕೆಯಾಗಿದ್ದು, ಹರಿಯಾಣ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಖಟ್ಟರ್ಗೆ ದುಷ್ಯಂತ್ ಚೌಟಾಲ ಸಾಥ್ ನೀಡಿದ್ದಾರೆ.
ನಾಳೆ ಮಧ್ಯಾಹ್ನ 1.15ಕ್ಕೆ ಸಿಎಂ ಆಗಿ ಖಟ್ಟರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಕಳೆದ ಬಾರಿಗಿಂತ 7 ಸೀಟು ಕಡಿಮೆ ಗಳಿಸಿದ್ದು, ಸರಳ ಬಹುಮತಕ್ಕಿಂತ 6 ಸೀಟು ಕಡಿಮೆಯಾಗಿದೆ. ಈ ಮಧ್ಯೆ, ಜನನನಾಯಕ್ ಜನತಾ ಪಾರ್ಟಿ 10 ಸ್ಥಾನ ಗಳಿಸಿದ್ದು, ಬಿಜೆಪಿಗೆ ಬೆಂಬಲ ಘೋಷಿಸಿದೆ. ದುಷ್ಯಂತ್ ಚೌಟಾಲ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹರಿಯಾಣದಲ್ಲಿ ಸ್ಥಿರತೆಯನ್ನು ಗಟ್ಟಿಗೊಳಿಸಲು ಬಿಜೆಪಿಗೆ ಬೆಂಬಲ ಘೋಷಿಸಿರುವುದಾಗಿ ದುಷ್ಯಂತ್ ಚೌಟಾಲ ತಿಳಿಸಿದ್ದಾರೆ. ದುಷ್ಯಂತ್, ದಿವಂಗತ ಮಾಜಿ ಪ್ರಧಾನಿ ಚೌಧರಿ ದೇವಿಲಾಲ್ ಅವರ ಮರಿಮೊಮ್ಮಗ.
ಹರಿಯಾಣ ಒಟ್ಟು 90 ಸ್ಥಾನ ಮ್ಯಾಜಿಕ್ ನಂಬರ್ 46 ಬಿಜೆಪಿ 40 + ಜೆಜೆಪಿ 10 ಕಾಂಗ್ರೆಸ್ 41 ಇತರೆ 19
Published On - 4:40 pm, Sat, 26 October 19