ರಾಹುಲ್ ಗಾಂಧಿಯ ನಾಲಗೆ ಕತ್ತರಿಸುವುದಲ್ಲ, ಸುಡಬೇಕು ಎಂದ ಬಿಜೆಪಿ ಸಂಸದ
ಮಂಗಳವಾರ ಮಹಾರಾಷ್ಟ್ರದ ಅಮರಾವತಿಯಲ್ಲಿ ಬಿಜೆಪಿ ಮುಖಂಡ ಬೋಂಡೆ, ನಾಲಗೆ ಕತ್ತರಿಸುವ ಭಾಷೆ ಸರಿಯಲ್ಲ, ಆದರೆ ಮೀಸಲಾತಿ ವಿರುದ್ಧ ರಾಹುಲ್ ಜಿ ಹೇಳಿರುವುದು ಅಪಾಯಕಾರಿ. "ಹಾಗಾಗಿ, ಯಾರಾದರೂ ವಿದೇಶದಲ್ಲಿ ಏನಾದರೂ ಅಸಂಬದ್ಧವಾಗಿ ಮಾತನಾಡಿದರೆ, ನಂತರ ಅವರ ನಾಲಗೆಯನ್ನು ಕತ್ತರಿಸುವುದಕ್ಕಿಂತ, ಅದನ್ನು ಸುಟ್ಟುಬಿಡಬೇಕು ಎಂದು ಹೇಳಿದ್ದಾರೆ.
ದೆಹಲಿ ಸೆಪ್ಟೆಂಬರ್ 18: ಬಿಜೆಪಿಯ ರಾಜ್ಯಸಭಾ ಸಂಸದ ಅನಿಲ್ ಬೋಂಡೆ (Anil Bonde) ಮಂಗಳವಾರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ನಾಲಗೆಯನ್ನು ಕತ್ತರಿಸಬಾರದು ಆದರೆ ಮೀಸಲಾತಿ ವ್ಯವಸ್ಥೆ ಕುರಿತು ಅವರ ಹೇಳಿಕೆಗಾಗಿ ನಾಲಗೆ ಸುಡಬೇಕು ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ನಾಲಗೆ ಕತ್ತರಿಸುವ ವ್ಯಕ್ತಿಗೆ ₹11 ಲಕ್ಷ ನೀಡುವುದಾಗಿ ಶಿವಸೇನಾ ಶಾಸಕರೊಬ್ಬರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬೋಂಡೆ ಈ ಹೇಳಿಕೆ ನೀಡಿದ್ದಾರೆ.
ಭಾರತವು “ನ್ಯಾಯಯುತವಾದ ಸ್ಥಳ” ಆದ ನಂತರ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ತಮ್ಮ ಪಕ್ಷವು ಯೋಚಿಸಲಿದೆ ಎಂದು ರಾಹುಲ್ ಗಾಂಧಿ ಯುನೈಟೆಡ್ ಸ್ಟೇಟ್ಸ್‌ನ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೇಳಿದರು. ಇತ್ತೀಚೆಗಷ್ಟೇ ಶಿವಸೇನೆ ಶಾಸಕ ಸಂಜಯ್ ಗಾಯಕ್‌ವಾಡ್ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.
Mumbai: BJP MP Anil Bonde says, “Instead of chopping off LoP Rahul Gandhi’s tongue, it should be inflicted burns (‘chatka’), as he had gone abroad and allegedly insulted the country” pic.twitter.com/nOpOxWxxOw
— IANS (@ians_india) September 18, 2024
ಮಂಗಳವಾರ ಮಹಾರಾಷ್ಟ್ರದ ಅಮರಾವತಿಯಲ್ಲಿ ಬಿಜೆಪಿ ಮುಖಂಡ ಬೋಂಡೆ, ನಾಲಗೆ ಕತ್ತರಿಸುವ ಭಾಷೆ ಸರಿಯಲ್ಲ, ಆದರೆ ಮೀಸಲಾತಿ ವಿರುದ್ಧ ರಾಹುಲ್ ಜಿ ಹೇಳಿರುವುದು ಅಪಾಯಕಾರಿ. “ಹಾಗಾಗಿ, ಯಾರಾದರೂ ವಿದೇಶದಲ್ಲಿ ಏನಾದರೂ ಅಸಂಬದ್ಧವಾಗಿ ಮಾತನಾಡಿದರೆ, ನಂತರ ಅವರ ನಾಲಗೆಯನ್ನು ಕತ್ತರಿಸುವುದಕ್ಕಿಂತ, ಅದನ್ನು ಸುಟ್ಟುಬಿಡಬೇಕು. ಅದು ರಾಹುಲ್ ಗಾಂಧಿ, ಜ್ಞಾನೇಶ್ ಮಹಾರಾವ್ ಅಥವಾ ಶ್ಯಾಮ್ ಮಾನವ್ ಯಾರೇ ಆಗಿರಲಿ ಅವರು ‘ಬಹುಜನ’ ಮತ್ತು ಬಹುಸಂಖ್ಯಾತರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ” ಎಂದು ಬೋಂಡೆ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರ ಭದ್ರತೆಗೆ ಧಕ್ಕೆ ತರುವ ಮತ್ತು ಶಾಂತಿ ಕದಡುವ ಉದ್ದೇಶ ಹೊಂದಲಾಗಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ಇಂದು ಪೊಲೀಸ್ ದೂರು ದಾಖಲಿಸಿದೆ. ಎಐಸಿಸಿ ಖಜಾಂಚಿ ಮತ್ತು ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರು ತುಘಲಕ್ ರೋಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಸಲ್ಲಿಸಿದ ದೂರಿನಲ್ಲಿ, ಬಿಜೆಪಿ ನಾಯಕರಾದ ತರ್ವಿಂದರ್ ಸಿಂಗ್ ಮರ್ವಾ, ರವನೀತ್ ಸಿಂಗ್ ಬಿಟ್ಟು ಮತ್ತು ರಘುರಾಜ್ ಸಿಂಗ್ ಮತ್ತು ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರ ಇತ್ತೀಚಿನ ಹೇಳಿಕೆಗಳನ್ನು ಕಾಂಗ್ರೆಸ್ ಉಲ್ಲೇಖಿಸಿದೆ.
ದೂರು ದಾಖಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಕೆನ್, ದಿವಂಗತ ಇಂದಿರಾ ಗಾಂಧಿ ಮತ್ತು ದಿವಂಗತ ರಾಜೀವ್ ಜಿ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವುದು ನಮಗೆಲ್ಲರಿಗೂ ತಿಳಿದಿದೆ. ಆ ನಂತರವೂ ಇಂತಹ ಬೆದರಿಕೆಗಳನ್ನು ಹಾಕುತ್ತಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಖರ್ಗೆ ಪತ್ರ ಬರೆದ ನಂತರವೂ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಗೇಲಿ ಮಾಡಿದ ಕೇಂದ್ರ ಸಚಿವ
ಬಿಜೆಪಿ ಸಂಸದ ರವನೀತ್ ಬಿಟ್ಟು ರಾಹುಲ್ ಗಾಂಧಿ ಅವರನ್ನು ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಕರೆದಿದ್ದಾರೆ. ಬಿಟ್ಟು ಅವರ ಹೇಳಿಕೆಯು ರಾಹುಲ್ ಗಾಂಧಿ ವಿರುದ್ಧ ಸಾರ್ವಜನಿಕ ದ್ವೇಷ ಮತ್ತು ಆಕ್ರೋಶವನ್ನು ಕೆರಳಿಸುವ ಮತ್ತು ಅವರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ