Himachal Pradesh Blast: ಹಿಮಾಚಲ ಪ್ರದೇಶದ ಪೊಲೀಸ್ ಸ್ಟೇಷನ್ ಬಳಿ ಭಾರೀ ಸ್ಫೋಟ
ಹಿಮಾಚಲ ಪ್ರದೇಶದ ಪೊಲೀಸ್ ಠಾಣೆ ಬಳಿ ಪ್ರಬಲ ಸ್ಫೋಟ ನಡೆದಿದೆ. ಇದರಿಂದಾಗಿ ಸುತ್ತಲಿನ ಕಟ್ಟಡಗಳ ಕಿಟಕಿಗಳು ಒಡೆದುಹೋಗಿವೆ. ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಲಗಢದಲ್ಲಿ ಇಂದು ಪೊಲೀಸ್ ಠಾಣೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ನೂರಾರು ಮೀಟರ್ ದೂರದಲ್ಲಿರುವ ಮನೆಗಳಲ್ಲಿಯೂ ಬಿರುಕು ಬಿಟ್ಟಿದೆ.

ಶಿಮ್ಲಾ, ಜನವರಿ 1: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ನಲಗಢದ ಪೊಲೀಸ್ ಠಾಣೆ ಬಳಿ ಇಂದು ಭಾರೀ ಸ್ಫೋಟ (Blast) ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಮತ್ತು ಸ್ಫೋಟದ ಕಾರಣವನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ನಲಗಢ ಪೊಲೀಸ್ ಠಾಣೆ ಬಳಿಯ ಲೇನ್‌ನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮವು ಎಷ್ಟು ಬಲವಾಗಿತ್ತು ಎಂದರೆ ಈ ಸ್ಥಳದಿಂದ ನೂರಾರು ಮೀಟರ್ ದೂರದಲ್ಲಿರುವ ಸೇನಾ ಕ್ಯಾಂಟೀನ್ ಸೇರಿದಂತೆ ಹತ್ತಿರದ ಕಟ್ಟಡಗಳ ಕಿಟಕಿಗಳು ಬಿರುಕು ಬಿಟ್ಟಿವೆ.
ಸ್ಥಳೀಯರು ಹೇಳುವಂತೆ 400ರಿಂದ 500 ಮೀಟರ್‌ಗಳ ದೂರದಿಂದ ಜೋರಾದ ಶಬ್ದ ಕೇಳಿಬಂದಿತು. 16 ಎಂಎಂ ದಪ್ಪದ ಗಾಜುಗಳು ಸಹ ಒಡೆದುಹೋಗಿವೆ. ಸುತ್ತಲಿನ ಕಟ್ಟಡಗಳೆಲ್ಲವೂ ನಡುಗಿದವು ಎಂದು ಹತ್ತಿರದಲ್ಲಿ ಕುಳಿತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇಂದು ಬೆಳಿಗ್ಗೆ 9.40ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ವಿಧಿವಿಜ್ಞಾನ ತಂಡವು ವಿವಿಧ ಸ್ಥಳಗಳಿಂದ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ರೈಲುಗಳ ಬೋಗಿಗಳು ವಿಭಿನ್ನ ಬಣ್ಣಗಳನ್ನು ಹೊಂದಿರುವುದೇಕೆ?
ಯಾವುದೇ ಇ-ಮೇಲ್ ಅಥವಾ ಬೆದರಿಕೆ ಕರೆ ಬಂದಿಲ್ಲ. ಪ್ರಾಥಮಿಕವಾಗಿ ಸ್ಫೋಟಕಗಳನ್ನು ಒಳಗೊಂಡ ಯಾವುದೇ ದುಷ್ಕೃತ್ಯ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಪ್ರದೇಶದಲ್ಲಿ ಬಹಳಷ್ಟು ಸ್ಕ್ರ್ಯಾಪ್‌ಗಳು ಕೂಡ ರಾಶಿ ಬಿದ್ದಿವೆ.
A loud blast was reported near the wall of a police station in Nalagarh, Solan district of Himachal Pradesh. The explosion shattered windowpanes of the police station, ECHS polyclinic, and market committee building. Area sealed; probe underway. pic.twitter.com/nLlNN5YasO
— Smriti Sharma (@SmritiSharma_) January 1, 2026
ಈ ಸ್ಫೋಟದ ನಂತರ ಹಿಮಾಚಲ ಪ್ರದೇಶ ಪೊಲೀಸರು ಕಾರ್ಯಪ್ರವೃತ್ತರಾದರು ಮತ್ತು ಸ್ಫೋಟದ ಕುರಿತು ಹೆಚ್ಚಿನ ತನಿಖೆಗಾಗಿ ಆ ಪ್ರದೇಶದಲ್ಲಿ ತಕ್ಷಣವೇ ಬ್ಯಾರಿಕೇಡ್ ಹಾಕಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Thu, 1 January 26




