ಒಮಿಕ್ರಾನ್‌ಗೆ ಕೊವ್ಯಾಕ್ಸಿನ್ ಲಸಿಕೆಯ ಬೂಸ್ಟರ್ ಡೋಸ್ ಪರಿಣಾಮಕಾರಿ: ಭಾರತ್ ಬಯೋಟೆಕ್
ಅಮೆರಿಕದ ಎಮೋರಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿದ ಭಾರತ್ ಬಯೋಟೆಕ್ ತಮ್ಮ ಎರಡನೇ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪಡೆದು ಆರು ತಿಂಗಳ ನಂತರ ಬೂಸ್ಟರ್ ಶಾಟ್ ಪಡೆದ ಶೇ 90 ಕ್ಕಿಂತ ಹೆಚ್ಚು ಜನರು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ತೋರಿಸಿದ್ದಾರೆ ಎಂದು ಹೇಳಿದರು.
ದೆಹಲಿ: ಭಾರತ್ ಬಯೋಟೆಕ್ (Bharat Biotech) ತನ್ನ ಕೊವ್ಯಾಕ್ಸಿನ್ (Covaxin ) ಕೊವಿಡ್-19 (Covid-19) ಲಸಿಕೆಯ ಬೂಸ್ಟರ್ ಶಾಟ್ (booster shot) ಒಮಿಕ್ರಾನ್ (omicron) ಮತ್ತು ಡೆಲ್ಟಾ (Delta) ರೂಪಾಂತರಗಳ ವಿರುದ್ಧ ಪರಿಣಾಮಕಾರಿ ಆಗಿದೆ ಎಂದು ಹೇಳಿದೆ. ಮೊದಲ ಎರಡು ಡೋಸ್ ಲಸಿಕೆ ಪಡೆದು 6 ತಿಂಗಳ ನಂತರ ಬೂಸ್ಟರ್ ಡೋಸ್ ನೀಡಲಾಗುತ್ತದೆ. ” ಕೊವ್ಯಾಕ್ಸಿನ್ -ಬೂಸ್ಟ್ಡ್ ಸೆರಾದಲ್ಲಿನ ನ್ಯೂಟ್ರಾಲೈಸೇಶನ್ ಚಟುವಟಿಕೆಯು ಒಮಿಕ್ರಾನ್ ರೂಪಾಂತರದ ವಿರುದ್ಧ mRNA ಲಸಿಕೆ-ವರ್ಧಕ ಸೆರಾದಲ್ಲಿ ಕಂಡುಬಂದದ್ದಕ್ಕೆ ಹೋಲಿಸಬಹುದಾಗಿದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಕೊವ್ಯಾಕ್ಸಿನ್‌ನೊಂದಿಗೆ ಶೇ90 ಕ್ಕಿಂತ ಹೆಚ್ಚು ವ್ಯಕ್ತಿಗಳು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ತೋರಿಸಿದರು ಎಂದು ಭಾರತ್ ಬಯೋಟೆಕ್ ಹೇಳಿದೆ. ಅಮೆರಿಕದ ಎಮೋರಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿದ ಭಾರತ್ ಬಯೋಟೆಕ್ ತಮ್ಮ ಎರಡನೇ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪಡೆದು ಆರು ತಿಂಗಳ ನಂತರ ಬೂಸ್ಟರ್ ಶಾಟ್ ಪಡೆದ ಶೇ 90 ಕ್ಕಿಂತ ಹೆಚ್ಚು ಜನರು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ತೋರಿಸಿದ್ದಾರೆ ಎಂದು ಹೇಳಿದರು.
COVAXIN® (BBV152) Booster Shown to Neutralize Both Omicron and Delta Variants of SARS-CoV-2#bbv152 #COVAXIN #BharatBiotech #COVID19Vaccine #omicron #deltavariant #SARS_CoV_2 #covaxinapproval #boosterdose #pandemic pic.twitter.com/0IgFmm13rS
— BharatBiotech (@BharatBiotech) January 12, 2022
ಲಸಿಕೆಯ ಮೂರನೇ ಡೋಸ್ ಸುರಕ್ಷಿತವಾಗಿದೆ ಮತ್ತು ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದೆ ಎಂದು ವಿಶ್ಲೇಷಣೆ ತೋರಿಸಿದೆ ಎಂದು ಕೊವ್ಯಾಕ್ಸಿನ್ ತಯಾರಕರು ಈ ಹಿಂದೆ ಹೇಳಿದ್ದರು. “ಮೂರನೇ ವ್ಯಾಕ್ಸಿನೇಷನ್ ನಂತರ ಹೋಮೋಲೋಜಸ್ ಮತ್ತು ಹೆಟೆರೊಲಾಜಸ್ SARS-CoV-2 ರೂಪಾಂತರಗಳ ವಿರುದ್ಧ ಪ್ರತಿಕಾಯಗಳನ್ನು ತಟಸ್ಥಗೊಳಿಸುವುದು 19 ರಿಂದ 265 ಪಟ್ಟು ಹೆಚ್ಚಾಗಿದೆ” ಎಂದು ಭಾರತ್ ಬಯೋಟೆಕ್ ಹೇಳಿದೆ.
ಕಳೆದ ಎರಡು ವಾರಗಳಲ್ಲಿ, ಒಮಿಕ್ರಾನ್ ರೂಪಾಂತರದಿಂದಾಗಿ ಭಾರತವು ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಹೆಚ್ಚಳವನ್ನು ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಇಂದು 1,94,720 ಹೊಸ ಸೋಂಕುಗಳು ದಾಖಲಾಗಿದ್ದು, ಒಟ್ಟು ಕೊವಿಡ್-19 ಪ್ರಕರಣಗಳ ಸಂಖ್ಯೆ 3,60,70,510 ಕ್ಕೆ ತಲುಪಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಭಾರತದಲ್ಲಿ 300 ಜಿಲ್ಲೆಗಳು ಸಾಪ್ತಾಹಿಕ ಕೊವಿಡ್ ಪ್ರಕರಣಗಳ ಪಾಸಿಟಿವಿಟಿ ಶೇ 5 ಕ್ಕಿಂತ ಹೆಚ್ಚು ವರದಿ ಮಾಡುತ್ತಿವೆ ಎಂದಿದ್ದಾರೆ.
ಕೊರೊನಾವೈರಸ್ ನ ಒಮಿಕ್ರಾನ್ ರೂಪಾಂತರವನ್ನು ಲಘುವಾಗಿ ಪರಿಗಣಿಸಬೇಡಿ ಮತ್ತು ಲಸಿಕೆಯನ್ನು ಪಡೆಯುವಂತೆ ಕೇಂದ್ರವು ಜನರನ್ನು ಒತ್ತಾಯಿಸಿದೆ. ಒಮಿಕ್ರಾನ್ ಕೇವಲ ನೆಗಡಿಯಲ್ಲ, ಅದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ನಾವು ಜಾಗರೂಕರಾಗಿರಬೇಕು, ಲಸಿಕೆಯನ್ನು ತೆಗೆದುಕೊಳ್ಳಬೇಕು ಮತ್ತು ಕೊವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು. ನಮ್ಮ ಕೊವಿಡ್ ಪ್ರತಿಕ್ರಿಯೆ ಕಾರ್ಯಕ್ರಮದಲ್ಲಿ ವ್ಯಾಕ್ಸಿನೇಷನ್ ಪ್ರಮುಖ ಆಧಾರವಾಗಿದೆ” ಎಂದು ನೀತಿ ಆಯೋಗ್ ಸದಸ್ಯ (ಆರೋಗ್ಯ) ವಿಕೆ ಪೌಲ್ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವದಲ್ಲಿ ಒಮಿಕ್ರಾನ್ನಿಂದ ಈವರೆಗೆ 115 ಜನ ಸಾವು, ಭಾರತದಲ್ಲಿ ಒಂದು ಸಾವು ಸಂಭವಿಸಿದೆ: ಕೇಂದ್ರ ಆರೋಗ್ಯ ಸಚಿವಾಲಯ
Published On - 6:35 pm, Wed, 12 January 22