AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ಗುಡ್ ನ್ಯೂಸ್ : ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ

ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಒಂದು ದೊಡ್ಡ ನಿರ್ಧಾರವನ್ನು ಕೈಗೊಂಡಿದೆ. ಕೃಷಿ ಅರಣ್ಯೀಕರಣವನ್ನು ಉತ್ತೇಜಿಸಲು ಮತ್ತು ಜಮೀನಿನಲ್ಲಿರುವ ಮರಗಳನ್ನು ಕಡಿಯಲು ಸರಾಗಗೊಳಿಸಲು ಕೇಂದ್ರ ಸರ್ಕಾರ ಹೊಸನಿಯಮಗಳನ್ನು ಹೊರಡಿಸಿದೆ. ಹೀಗಾಗಿ ರೈತರು ಇನ್ಮುಂದೆ ತಮ್ಮ ಜಮೀನನಲ್ಲಿರುವ ಮರವನ್ನು ಕಡಿಯಬಹುದು. ಆದ್ರೆ, ಕೇಂದ್ರ ಜಾರಿಗೆ ತಂದಿರುವ ಈ ಹೊಸ ಕಾರ್ಯಕ್ರಮದ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗಾದ್ರೆ, ಜಮೀನನಲ್ಲಿನ ಮರ ಕಡಿಯಲು ಇರುವ ನಿಯಮಗಳೇನು ಎನ್ನುವುದನ್ನು ತಿಳಿದುಕೊಳ್ಳಿ.

ರೈತರಿಗೆ ಗುಡ್ ನ್ಯೂಸ್ : ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: Jun 30, 2025 | 4:01 PM

Share

ನವದೆಹಲಿ, ಜೂನ್​ 30: ರೈತರ (Farmers) ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು (Central Government) ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಕೃಷಿ ಭೂಮಿಯಲ್ಲಿರುವ (Agricultural land) ಮರಗಳನ್ನು ಕಡಿಯಲು ಅಥವಾ ಬೆಳೆಗಳಿಗೆ ತೊಂದರೆ ಉಂಟು ಮಾಡುವ ಮರಗಳನ್ನು ಕಡಿಯುವುದನ್ನು ಸಾರಾಗಗೊಳಿಸಲು ಕೇಂದ್ರ ಸರ್ಕಾರ ಮಾದರಿ ನಿಯಮಗಳನ್ನು ಹೊರಡಿಸಿದೆ. ಈ ನಿರ್ಣಯವು ರೈತರ ಆದಾಯವನ್ನು ದ್ವಿಗುಣಗೊಳಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಾಯಕವಾಗಿದೆ. ಮತ್ತು ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಸಂಬಂಧ ಜೂನ್​ 19 ರಂದು ಪರಿಸರ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಕಳುಹಿಸಿದೆ. ಕೃಷಿ ಭೂಮಿಯಲ್ಲಿ ಮರಗಳನ್ನು ಕಡಿಯುವ ಮಾದರಿ ನಿಯಮಗಳ ಉದ್ದೇಶವು, ಕೃಷಿ ಅರಣ್ಯೀಕರಣದಲ್ಲಿ ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುವುದು ಮತ್ತು ಅನಗತ್ಯ ಅಡೆತಡೆಗಳನ್ನು ಎದುರಿಸದೆ ರೈತರು ತಮ್ಮ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ರೈತರ ಆದಾಯವನ್ನು ದ್ವಿಗುಣಗೊಳಿಸಲು, ಕಾಡುಗಳ ಹೊರಗೆ ಮರಗಳ ಹೊದಿಕೆಯನ್ನು ಹೆಚ್ಚಿಸಲು, ಹವಾಮಾನ ಬದಲಾವಣೆಯನ್ನು ತಗ್ಗಿಸಲು, ಮರದ ಆಮದನ್ನು ಕಡಿಮೆ ಮಾಡಲು ಸರ್ಕಾರವು ಕೃಷಿ ಅರಣ್ಯೀಕರಣವನ್ನು ಉತ್ತೇಜಿಸುತ್ತಿದೆ. ಇದು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭಾರತದ ಹವಾಮಾನ ಗುರಿಗಳನ್ನು ಸಹ ಬೆಂಬಲಿಸುತ್ತದೆ.

ಇದನ್ನೂ ಓದಿ
Image
ಜುಲೈ 9ರೊಳಗೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ?
Image
ಭಾರತಕ್ಕೆ ಆಪರೇಷನ್ ಸಿಂಧೂರ್ ಸಮಯದಲ್ಲಾದ ಹಾನಿ ಎಷ್ಟು?
Image
ಮೋದಿ ಮನ್ ಕೀ ಬಾತ್​ನಲ್ಲಿ ಸದ್ದು ಮಾಡಿದ ಕಲಬುರಗಿಯ ಖಡಕ್ ರೊಟ್ಟಿ
Image
ಯೋಗ, ತೀರ್ಥಯಾತ್ರೆಯಿಂದ ಟ್ರಾಕೋಮಾವರೆಗೆ ಮೋದಿ ಹೇಳಿದ್ದೇನು?

ಇಷ್ಟು ದಿನಗಳ ಕಾಲ ಕೃಷಿ ಭೂಮಿಯಲ್ಲಿ ಮರಗಳನ್ನು ಕಡಿಯಲು ಸ್ಪಷ್ಟವಾದ, ಸರಳ ನಿಯಮಗಳು ಇಲ್ಲದಿದ್ದರಿಂದ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ರೈತರಿಗೆ ಅಡಚಣೆಯಾಗುತ್ತಿತ್ತು. ಈ ಹೊಸ ಮಾರ್ಗಸೂಚಿಯಿಂದ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯುವುದು ಸಲುಭವಾಗಲಿದೆ. ಮತ್ತು ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ರೂಪಿಸಲಾದ ನಿಯಮಗಳನ್ನು ಸರಳೀಕರಣಗೊಳಿಸುವಂತೆ ಕೇಂದ್ರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಇದನ್ನೂ ಓದಿ: 2027ಕ್ಕೆ ಭಾರತದ ಮಡಿಲು ಸೇರಲಿದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಖ್ಯಾತ ಜ್ಯೋತಿಷಿ ಭವಿಷ್ಯ

ಮಾದರಿ ನಿಯಮಗಳ ಪ್ರಕಾರ, 2016 ರ ಮರ-ಆಧಾರಿತ ಕೈಗಾರಿಕೆಗಳು (ಸ್ಥಾಪನೆ ಮತ್ತು ನಿಯಂತ್ರಣ) ಮಾರ್ಗಸೂಚಿಗಳ ಅಡಿಯಲ್ಲಿ ಈಗಾಗಲೇ ರಚಿಸಲಾದ ರಾಜ್ಯ ಮಟ್ಟದ ಸಮಿತಿ (SLC) ಈ ನಿಯಮಗಳಿಗಾಗಿ ಕಾರ್ಯನಿರ್ವಹಿಸುತ್ತದೆ. ಇದೀಗ ಸಮಿತಿಯಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸಹ ಸೇರಿದ್ದಾರೆ. ವಾಣಿಜ್ಯ ಮೌಲ್ಯದ ಮರಗಳನ್ನು, ವಿಶೇಷವಾಗಿ ಮರಗಳನ್ನು ಕಡಿಯುವುದು ಮತ್ತು ಸಾಗಣೆ ಮಾಡುವ ನಿಯಮಗಳನ್ನು ಸರಳಗೊಳಿಸುವ ಮೂಲಕ ಕೃಷಿ ಅರಣ್ಯೀಕರಣವನ್ನು ಹೇಗೆ ಉತ್ತೇಜಿಸಬೇಕು ಎಂಬುದರ ಕುರಿತು ಸಮಿತಿಯು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಿದೆ.

ಮರ ಕಡಿಯಲು NTMS ಪೋರ್ಟ್​ಲ್​ನಲ್ಲಿ ನೋಂದಣಿ ಕಡ್ಡಾಯ

10 ಕ್ಕಿಂತ ಹೆಚ್ಚು ಮರಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಹೊಂದಿರುವ ಭೂಮಿ ಮಾಲೀಕರು NTMS ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಕಡಿಯಬೇಕಾದ ಮರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕು.

ಆನ್​ಲೈನ್​ ನೋಂದಣಿ: ರೈತರು ರಾಷ್ಟ್ರೀಯ ಮರ ನಿರ್ವಹಣಾ ವ್ಯವಸ್ಥೆ (NTMS) ಪೋರ್ಟ್​ಲ್​ನಲ್ಲಿ ತಮ್ಮ ಭೂಮಿಯನ್ನು ನೋಂದಾಯಿಸಬೇಕು.

ಡಿಜಿಟಲ್​ ಡಾಕ್ಯುಮೆಂಟೇಶನ್​: ಪ್ರತಿ ಮರವನ್ನು ಜಿಯೋ-ಟ್ಯಾಗ್​ ಮಾಡಿ ಫೋಟೋ ತೆಗೆದು ಅಪ್​ಲೋಡ್​ ಮಾಡಬೇಕು.

ನೋಂದಣಿ ಪ್ರಕ್ರಿಯೆ

  • ರೈತರು ತಮ್ಮ ಭೂಮಿಯ ವಿವರಗಳನ್ನು NTMS ಪೋರ್ಟಲ್​ನಲ್ಲಿ ನಮೂದಿಸಬೇಕು.
  • ಮರಗಳ ಸಂಖ್ಯೆ ಪ್ರಭೇದ, ನೆಟ್ಟ ದಿನಾಂಕ ಮತ್ತು ಎತ್ತರದ ವಿವರಗಳನ್ನು ನೀಡಬೇಕು.
  • ಎಸ್​ಎಲ್​ಸಿ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತದೆ.
  • ಮರಗಳನ್ನು ಕಡಿಯಲು ಮತ್ತು ಸಾಗಾಣಿಕೆ ಮಾಡಲು ಅನುಮತಿ ಪತ್ರದ ಅಗತ್ಯವಿದೆ.
  • ಅರಣ್ಯ, ಕೃಷಿ ಮತ್ತು ಪಂಚಾಯತ್​ ರಾಜ್​ ಇಲಾಖೆಯ ಅಧಿಕಾರಿಗಳು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ