AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈನಲ್ಲಿ ಮೇಘಸ್ಫೋಟ; ಹಲವೆಡೆ ಭಾರೀ ಮಳೆ; ಬೆಂಗಳೂರಿಗೆ ಬಂದ 3 ವಿಮಾನಗಳು

Cloudburst in Chennai: ಚೆನ್ನೈನ ಬಹುತೇಕ ಕಡೆ ಶನಿವಾರ ರಾತ್ರಿ ತೀವ್ರ ಮಳೆಯಾಗಿದೆ. ಆರು ಸ್ಥಳಗಳಲ್ಲಿ ಮೇಘ ಸ್ಫೋಟವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಿರ್ದಿಷ್ಟ ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 10 ಸೆಂ.ಮಿ. ಮಳೆಯಾದರೆ ಅದು ಮೇಘಸ್ಫೋಟ ಎನಿಸುತ್ತದೆ. ನಿನ್ನೆ ರಾತ್​ರಿ ಚೆನ್ನೈಗೆ ಬಂದ ಮೂರು ವಿಮಾನಗಳಿಗೆ ಇಳಿಯಲು ಸಾಧ್ಯವಾಗದ ಕಾರಣ ಬೆಂಗಳೂರಿಗೆ ಹೋಗಬೇಕಾಯಿತು.

ಚೆನ್ನೈನಲ್ಲಿ ಮೇಘಸ್ಫೋಟ; ಹಲವೆಡೆ ಭಾರೀ ಮಳೆ; ಬೆಂಗಳೂರಿಗೆ ಬಂದ 3 ವಿಮಾನಗಳು
ಚೆನ್ನೈನಲ್ಲಿ ಮಳೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2025 | 3:43 PM

Share

ಚೆನ್ನೈ, ಆಗಸ್ಟ್ 31: ತಮಿಳುನಾಡು ರಾಜಧಾನಿ ನಗರಿಯಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರ ರಾತ್ರಿ ಚೆನ್ನೈನ ಕೆಲವೆಡೆ ಮೇಘಸ್ಫೋಟ (cloud burst) ಸಂಭವಿಸಿ ತೀವ್ರ ಮಟ್ಟದ ಮಳೆಯಾಗಿದೆ. ಹಲವೆಡೆ 200 ಎಂಎಂಗಿಂತಲೂ ಹೆಚ್ಚು ಮಟ್ಟದ ಮಳೆ (heavy rainfall) ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಮಾಹಿತಿ ನೀಡಿದೆ. ಮನಾಲಿಯಲ್ಲಿ 270 ಎಂಎಂ, ನ್ಯೂ ಮನಾಲಿ ಟೌನ್​ನಲ್ಲಿ 260 ಎಂಎಂ, ವಿಮ್ಕೋ ನಗರ್​ನಲ್ಲಿ 230 ಎಂಎಂ ಮಳೆಯಾಗಿದೆ ಎಂದು ಹೇಳಲಾಗಿದೆ. ಒಟ್ಟು ಆರು ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಐಎಂಡಿ ಹೇಳಿದೆ.

ಈ ಮೇಲಿನ ಸ್ಥಳಗಳಲ್ಲಿ ಮೇಘಸ್ಫೋಟದಿಂದ ಇಷ್ಟು ತೀವ್ರ ಮಳೆಯಾಗಿದೆ. ಇವಲ್ಲದೇ ಚೆನ್ನೈ ಇನ್ನೂ ಹಲವು ಸ್ಥಳಗಳಲ್ಲೂ ಭಾರೀ ಮಳೆಯಾಗಿದೆ. ಇಂದು ಭಾನುವಾರಕ್ಕೆ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ಕೊಟ್ಟಿಲ್ಲ.

ಇದನ್ನೂ ಓದಿ: Modi Mann Ki Baat: ನೈಸರ್ಗಿಕ ವಿಕೋಪಗಳು ದೇಶವನ್ನು ಪರೀಕ್ಷಿಸುತ್ತಿವೆ: ಪ್ರಧಾನಿ ಮೋದಿ

ಮೇಘ ಸ್ಫೋಟ ಎಂದರೇನು?

ಕ್ಲೌಡ್​ಬರ್ಸ್ಟ್ ಅಥವಾ ಮೇಘಸ್ಫೋಟ ಎಂಬುದು ತೀವ್ರ ಮಳೆಗೆ ಉಪಯೋಗಿಸುವ ಪದ. 2030 ಚದರ ಕಿಮೀ ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 100 ಎಂಎಂ ಮಳೆಯಾದಾಗ ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಇದು ವಿಶ್ವ ಹವಾಮಾನ ಸಂಸ್ಥೆ ಹಾಗೂ ಭಾರತೀಯ ಹವಾಮಾನ ಇಲಾಖೆ ಮೇಘಸ್ಫೋಟವೆಂದು ವರ್ಗೀಕರಿಸಲು ನಿಗದಿ ಮಾಡಿರುವ ಮಾನದಂಡ.

ನಿನ್ನೆ ಶನಿವಾರ ರಾತ್ರಿ ಆರು ಸ್ಥಳಗಳಲ್ಲಿ ಗಂಟೆಗೆ 10 ಸೆಂಟಿ ಮೀಟರ್​ನಷ್ಟು ಮಳೆಯಾಗಿದೆ. ಇದು ಮೇಘ ಸ್ಫೋಟವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮನಾಲಿ, ವಿಮ್ಕೋ ನಗರ್, ಕೊರಟ್ಟೂರು, ನ್ಯೂ ಮಲಾನಿ ಟೌನ್, ಎಣ್ಣೋರ್ ಮೊದಲಾದ ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. ಅಯಪಕ್ಕಂ, ಪ್ಯಾರಿಸ್, ಅಂಬತ್ತೂರು, ನೇರಕುಂಡ್ರಂ, ಕೊಳತ್ತೂರು, ಕಾಸಿಮೆಡು, ರೆಡ್ ಹಿಲ್ಸ್ ಸೇರಿದಂತೆ ಚೆನ್ನೈ ಬಹುತೇಕ ಸ್ಥಳಗಳಲ್ಲಿ ಜೋರು ಮಳೆಯಾಗಿದೆ.

ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವದ ಮೇಲೆ ನಮ್ಮ ಸಂಬಂಧ ಮುಂದುವರೆಸಲು ಬದ್ಧ: ಜಿನ್​​ಪಿಂಗ್​​ಗೆ ಮೋದಿ ಸಂದೇಶ

ವಿಮಾನಗಳ ಮಾರ್ಗಬದಲಾವಣೆ

ಚೆನ್ನೈನಲ್ಲಿ ಭಾರೀಯ ಮಳೆಯಾಗುತ್ತಿದ್ದುದರಿಂದ, ಅಲ್ಲಿಗೆ ಹೊರಟಿದ್ದ ಮೂರು ಫ್ಲೈಟ್​ಗಗಳನ್ನು ಬೆಂಗಳೂರಿಗೆ ಮಾರ್ಗಬದಲಾವಣೆ ಮಾಡಿ ಕಳುಹಿಸಲಾಗಿದೆ. ಫ್ರಾಂಕ್​ಫುರ್ಟ್, ಮಂಗಳೂರು ಮತ್ತು ನವದೆಹಲಿಯಿಂದ ಚೆನ್ನೈಗೆ ಹೋಗಿದ್ದ ವಿಮಾನಗಳಿಗೆ, ಚೆನ್ನೈನಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಬೆಂಗಳೂರು ಏರ್​ಪೋರ್ಟ್​ಗೆ ಬರಬೇಕಾಯಿತು ಎಂದು ವರದಿಗಳು ಹೇಳಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ