ರಾಹುಲ್ ಜೊತೆ ಕೆಫೆ ಮೀಟಿಂಗ್, ಮೋದಿ ಜೊತೆ ಮೆಟ್ರೋ ಪ್ರಯಾಣ: ರಾಷ್ಟ್ರ ರಾಜಕಾರಣದಲ್ಲಿ ಗಮನಸೆಳೆದ ದಳಪತಿ ವಿಜಯ್ ನಡೆ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ರಾಹುಲ್ ಗಾಂಧಿ ಜೊತೆ ಕೆಫೆ ಸಭೆ, ಮರುದಿನವೇ ಪ್ರಧಾನಿ ಮೋದಿ ಜೊತೆ ಮೆಟ್ರೋ ಪ್ರಯಾಣ ಕೈಗೊಂಡರು. ಇದು ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಗಮನಸೆಳೆದಿದೆ. ಮೈತ್ರಿ ಬಲ ಮತ್ತು ರಾಜ್ಯದ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರದೊಂದಿಗೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳುವ ವಿಜಯ್ ಅವರ ರಾಜಕೀಯ ಸಮತೋಲನವನ್ನು ಈ ಘಟನೆಗಳು ಎತ್ತಿ ತೋರಿಸುತ್ತವೆ.

ರಾಹುಲ್ ಜೊತೆ ಕೆಫೆ ಮೀಟಿಂಗ್, ಮೋದಿ ಜೊತೆ ಮೆಟ್ರೋ ಪ್ರಯಾಣ: ರಾಷ್ಟ್ರ ರಾಜಕಾರಣದಲ್ಲಿ ಗಮನಸೆಳೆದ ದಳಪತಿ ವಿಜಯ್ ನಡೆ
ನರೇಂದ್ರ ಮೋದಿ-ವಿಜಯ್-ರಾಹುಲ್
Image Credit source: Mathrubhumi English

Updated on: Oct 12, 2026 | 7:20 AM

ಚೆನ್ನೈ, ಅಕ್ಟೋಬರ್ 12: ಒಂದೆಡೆ ಮಿತ್ರಪಕ್ಷ ಕಾಂಗ್ರೆಸ್​ನ ನಾಯಕ ರಾಹುಲ್ ಗಾಂಧಿಯೊಂದಿಗೆ ಕೆಫೆಯಲ್ಲಿ ಸಭೆ ಮತ್ತೊಂದೆಡೆ ಮರುದಿನವೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮೆಟ್ರೋ ಪ್ರಯಾಣ ಹಾಗೂ ದೇವಾಲಯ ಭೇಟಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಈ ರಾಜಕೀಯ ಸಮತೋಲನವು ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಚೆನ್ನೈ ಮೆಟ್ರೋ ರೈಲು ಹಂತ-1ರ ಪೂನಮಲ್ಲಿ-ವಡಪಳನಿ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿಯವರೊಂದಿಗೆ ಸಿಎಂ ವಿಜಯ್ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಲ್ಲದೆ, ಐಐಟಿ ಮದ್ರಾಸ್ ಆವರಣದಲ್ಲಿರುವ ಜಲಕಂಠೇಶ್ವರ ಸ್ವಾಮಿ ದೇವಾಲಯಕ್ಕೂ ಇವ್ವರು ಒಟ್ಟಿಗೆ ಭೇಟಿ ನೀಡಿದ್ದರು. ಸುಮಾರು 13,000 ಕೋಟಿ ರೂ., ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ಸಂಶಯಗಳಿಗೆ ತೆರೆ: ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್ ಜತೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಹರಿದಾಡುತ್ತಿದ್ದ ನಡುವೆಯೇ, ರಾಹುಲ್ ಗಾಂಧಿ ಅವರೊಂದಿಗೆ ನಡೆದ ಭೋಜನ ಕೂಟ ಮೈತ್ರಿಯ ಬಲವನ್ನು ಪ್ರದರ್ಶಿಸಿತು.

2029ರ ಪ್ರಧಾನಿ ರೇಸ್ ವಿವಾದ: ಟಿವಿಕೆಯ ಕೆಲ ಮುಖಂಡರು “2029ಕ್ಕೆ ವಿಜಯ್ ಪ್ರಧಾನಿ” ಎಂದು ಬಿಂಬಿಸುತ್ತಿರುವುದು ಕಾಂಗ್ರೆಸ್‌ಗೆ ಅಸಮಾಧಾನ ತಂದಿತ್ತು. ಕಾಂಗ್ರೆಸ್ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವಾಗ, ಈ ಭೇಟಿಯು ಇಬ್ಬರು ನಾಯಕರ ನಡುವಿನ ಸ್ನೇಹ ಹಾಗೂ ಒಡನಾಟವನ್ನು ತೋರಿಸುವ ವೇದಿಕೆಯಾಗಿತ್ತು.

ಮೋದಿ ಜೊತೆ ಸೌಹಾರ್ದ: ಆಡಳಿತಾತ್ಮಕ ಸಹಕಾರ, ಸೈದ್ಧಾಂತಿಕ ಭಿನ್ನಾಭಿಪ್ರಾಯ

ಸೈದ್ಧಾಂತಿಕ ವಿರೋಧಿ, ಆದರೆ ಅಭಿವೃದ್ಧಿ ಮುಖ್ಯ: ಟಿವಿಕೆ ಸೈದ್ಧಾಂತಿಕವಾಗಿ ಬಿಜೆಪಿಯನ್ನು ತನ್ನ ಪ್ರಮುಖ ವಿರೋಧಿ ಎಂದು ಘೋಷಿಸಿಕೊಂಡಿದ್ದರೂ, ಮುಖ್ಯಮಂತ್ರಿಯಾಗಿ ರಾಜ್ಯದ ಹಿತಾಸಕ್ತಿ, ಕೇಂದ್ರದ ಅನುದಾನ ಮತ್ತು ಯೋಜನೆಗಳಿಗಾಗಿ ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳುವುದು ಅನಿವಾರ್ಯ ಎಂಬುದನ್ನು ವಿಜಯ್ ತೋರಿಸಿಕೊಟ್ಟಿದ್ದಾರೆ.

ಸಚಿವ ನಿರ್ಮಲ್ ಕುಮಾರ್ ಸಮರ್ಥನೆ: “ರಾಹುಲ್ ಜೊತೆಗಿನ ಭೇಟಿ ನಮ್ಮ ಮೈತ್ರಿ ರಾಜಕೀಯ ಸಭೆಯಾದರೆ, ಮೋದಿ ಜೊತೆಗಿನ ಭೇಟಿ ರಾಜ್ಯದ ಅಭಿವೃದ್ಧಿಗಾಗಿ ನಡೆದ ಅಧಿಕೃತ ಸರ್ಕಾರಿ ಕಾರ್ಯಕ್ರಮ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಮೋದಿಯವರ ಸಮಾಧಾನಕರ ಮಾತು: “ನಾನು ಜಯಲಲಿತಾ, ಇಪಿಎಸ್ ಮತ್ತು ಸ್ಟಾಲಿನ್ ಅವರ ಜೊತೆ ಕೆಲಸ ಮಾಡಿದ್ದೇನೆ. ಅಧಿಕಾರ ಬದಲಾದರೂ ತಮಿಳುನಾಡಿನ ಅಭಿವೃದ್ಧಿಗೆ ಕೈಜೋಡಿಸುವ ನನ್ನ ಬದ್ಧತೆ ಸಿಎಂ ವಿಜಯ್ ಅವರೊಂದಿಗೂ ಮುಂದುವರೆಯುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಮತ್ತಷ್ಟು ಓದಿ: ‘ಮತ ಕಳ್ಳತನದ ದಾಖಲೆ ಕೇಳಿದ್ದಾರೆ, ನಾವು ನೀಡುತ್ತೇವೆ’; ರಾಷ್ಟ್ರಪತಿ ಭೇಟಿ ಬಳಿಕ ರಾಹುಲ್ ಗಾಂಧಿ ಹೇಳಿಕೆ

ಕೇಂದ್ರದ ಮುಂದಿಟ್ಟ ಪ್ರಮುಖ ಬೇಡಿಕೆಗಳು

ಸಿಎಂ ವಿಜಯ್ ಅವರು ರಾಜ್ಯದ ಪರವಾಗಿ ಪ್ರಧಾನಿ ಮೋದಿಯವರಿಗೆ ಮಹತ್ವದ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರು.

ಮೆಟ್ರೋ ವಿಸ್ತರಣೆ: ಚೆನ್ನೈ ಮೆಟ್ರೋ ಹಂತ-3ಕ್ಕೆ ಅನುಮೋದನೆ, ಮಧುರೈ ಮತ್ತು ಕೊಯಮತ್ತೂರು ಮೆಟ್ರೋ ಯೋಜನೆಗಳು.
ಹೊಸೂರು-ಬೊಮ್ಮಸಂದ್ರ ಇಂಟರ್‌ಸ್ಟೇಟ್ ಮೆಟ್ರೋ: ತಮಿಳುನಾಡಿನ ಹೊಸೂರು ಮತ್ತು ಬೆಂಗಳೂರಿನ ಬೊಮ್ಮಸಂದ್ರ ನಡುವಿನ ಅಂತರರಾಜ್ಯ ಮೆಟ್ರೋ ಸಂಪರ್ಕಕ್ಕೆ ಅನುಮತಿ.
ಅನುದಾನ ಬಿಡುಗಡೆ: ಕೇಂದ್ರದಿಂದ ತಡೆಹಿಡಿಯಲಾಗಿರುವ ಸಮಗ್ರ ಶಿಕ್ಷಣ ಅಭಿಯಾನ ಸೇರಿದಂತೆ ಬಾಕಿ ಅನುದಾನಗಳ ಬಿಡುಗಡೆ.
ಮದ್ರಾಸ್ ಹೈಕೋರ್ಟ್ ಭಾಷೆ: ಮದ್ರಾಸ್ ಹೈಕೋರ್ಟ್‌ನ ಅಧಿಕೃತ ಕಲಾಪಗಳ ಭಾಷೆಯಾಗಿ ತಮಿಳನ್ನು ಘೋಷಿಸುವುದು.
ಹೆದ್ದಾರಿ ಯೋಜನೆಗಳು: ರಾಜ್ಯದ 3 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು 6 ಪಥಗಳನ್ನಾಗಿ ಮೇಲ್ದರ್ಜೆಗೇರಿಸುವುದು.

ವಿಜಯ್ ನಡೆಗೆ ರಾಜಕೀಯ ಮಹತ್ವವೇನು?
ಒಂದೆಡೆ ಡಿಎಂಕೆ-ಎಐಎಡಿಎಂಕೆ ಪ್ರಾದೇಶಿಕ ರಾಜಕಾರಣದಿಂದ ಆಚೆಗೆ ನಿಂತು, ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಸುಭದ್ರವಾಗಿಟ್ಟುಕೊಳ್ಳುವುದು. ಇನ್ನೊಂದೆಡೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯದೆ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವುದು. ಈ ಎರಡೂ ತಂತ್ರಗಳನ್ನು ಒಂದೇ ವಾರಾಂತ್ಯದಲ್ಲಿ ವಿಜಯ್ ಸಲೀಸಾಗಿ ನಿರ್ವಹಿಸಿದ್ದಾರೆ. ಇದು ಅವರ ಪ್ರಬುದ್ಧ ಆಡಳಿತ ಹಾಗೂ ಭವಿಷ್ಯದ ರಾಜಕೀಯ ಮಹತ್ವಾಕಾಂಕ್ಷೆಗಳ ಸ್ಪಷ್ಟ ಮುನ್ಸೂಚನೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:19 am, Mon, 12 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us