‘ಮತ ಕಳ್ಳತನದ ದಾಖಲೆ ಕೇಳಿದ್ದಾರೆ, ನಾವು ನೀಡುತ್ತೇವೆ’; ರಾಷ್ಟ್ರಪತಿ ಭೇಟಿ ಬಳಿಕ ರಾಹುಲ್ ಗಾಂಧಿ ಹೇಳಿಕೆ
ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಮಧ್ಯಪ್ರವೇಶಿಸಬೇಕೆಂದು ಕೋರಿ ‘ಇಂಡಿಯಾ’ ಮೈತ್ರಿಕೂಟದ 10 ಸದಸ್ಯರ ನಾಯಕರ ನಿಯೋಗವು ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು. ಸುಮಾರು 1 ಗಂಟೆ ನಡೆದ ಈ ಸಭೆಯು, ವಿಪಕ್ಷ ಸಂಸದರು ಸಂಸತ್ ಭವನದಿಂದ ರಾಷ್ಟ್ರಪತಿ ಭವನದತ್ತ ನಡೆಸಿದ ಪಾದಯಾತ್ರೆಯನ್ನು ವಿಜಯ್ ಚೌಕ್ ಬಳಿ ಪೊಲೀಸರು ತಡೆದ ನಂತರ ನಡೆಯಿತು. ಪ್ರತಿಭಟನಾ ನಿರತ ಹಲವು ನಾಯಕರು ಸ್ಥಳದಲ್ಲೇ ಧರಣಿ ಕುಳಿತರೆ, ನಿಯೋಗವು ರಾಷ್ಟ್ರಪತಿಗಳನ್ನು ಭೇಟಿಯಾಗಲು ತೆರಳಿತು.

ನವದೆಹಲಿ, ಅಕ್ಟೋಬರ್ 9: ಇಂಡಿಯ ಮೈತ್ರಿಕೂಟದ 10 ಸದಸ್ಯರ ಪ್ರಮುಖ ನಾಯಕರ ನಿಯೋಗವು ಇಂದು (ಅಕ್ಟೋಬರ್ 9) ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಮತದಾರರ ಪಟ್ಟಿಯ ಅಕ್ರಮಗಳು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಜಾಗೆ ಆಗ್ರಹಿಸಿ 4 ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿತು. ಈ ಭೇಟಿಯ ನಂತರ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ‘ಚುನಾವಣಾ ಅಕ್ರಮ ಹಾಗೂ ಮತ ಕಳ್ಳತನ’ದ ಆರೋಪಗಳನ್ನು ರಾಷ್ಟ್ರಪತಿಯವರು ನಿರಾಕರಿಸದೆ ಸ್ವೀಕರಿಸಿದ್ದು ತಮಗೆ ಆಶ್ಚರ್ಯ ತಂದಿದೆ ಎಂದರು.
ಅಲ್ಲದೆ, ರಾಷ್ಟ್ರಪತಿಗಳು ಮತ ಕಳ್ಳತನಕ್ಕೆ ಸಂಬಂಧಿಸಿದ ‘ಆಧಾರ ಹಾಗೂ ಸಾಕ್ಷ್ಯಗಳನ್ನು ಒದಗಿಸುವಂತೆ ಕೇಳಿದ್ದು, ಸಿದ್ಧವಿರುವ ಸಾಕ್ಷ್ಯಗಳನ್ನು ನೀಡಲು ವಿಪಕ್ಷಗಳು ತಯಾರಾಗಿವೆ’ ಎಂದು ತಿಳಿಸಿದರು.
#WATCH | Delhi: After meeting the President, Lok Sabha LoP Rahul Gandhi says, “I sat in quite an unbelievable meeting. First, we took a memorandum to the President of India. In that memorandum, we clearly stated that the Prime Minister, HM Amit Shah, and CEC Gyanesh Kumar had conspired to destroy Indian democracy. The President in no way denied what we said, questioned what we said, or argued what we said. She accepted our statement and then told us that we needed to provide her with proof of ‘election chori’. I said that the evidence of ‘election chori’ is known to the entire country. State after state has been stolen. The 2024 election was stolen, and yet the President wants us to submit proof to her. This same group of people will be very happy to present the evidence of ‘election chori’ that we have collected to the President of India when she is ready to accept it…”
— ANI (@ANI) October 9, 2026
ವಿಪಕ್ಷ ನಿಯೋಗದಲ್ಲಿದ್ದ ಪ್ರಮುಖ ನಾಯಕರು:
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಆರ್‌ಜೆಡಿ ಸಂಸದ ಮನೋಜ್ ಝಾ, ವಿಸಿಕೆ ಅಧ್ಯಕ್ಷ ತೋಲ್ ತಿರುಮಾವಳವನ್, ಐಯುಎಂಎಲ್ ನಾಯಕ ಇ.ಟಿ. ಮೊಹಮ್ಮದ್ ಬಷೀರ್, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹಾಗೂ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜ ಅವರನ್ನೊಳಗೊಂಡ ನಿಯೋಗವು ರಾಷ್ಟ್ರಪತಿಗಳನ್ನು ಭೇಟಿಯಾಯಿತು.
ಇದನ್ನೂ ಓದಿ: ರಾಷ್ಟ್ರಪತಿ ಭೇಟಿಗೆ ಹೊರಟ ಇಂಡಿಯ ಬ್ಲಾಕ್ ನಾಯಕರು; ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಸಂಸತ್ ಭವನದಿಂದ ರಾಷ್ಟ್ರಪತಿ ಭವನದತ್ತ ಸಂಸದರು ನಡೆಸಿದ ಪಾದಯಾತ್ರೆಯನ್ನು ವಿಜಯ್ ಚೌಕ್ ಬಳಿ ಪೊಲೀಸರು ತಡೆದ ನಂತರ ಈ ನಾಯಕರ ನಿಯೋಗ ಮಾತ್ರ ಭೇಟಿಗೆ ತೆರಳಿತು.
I just sat in quite an unbelievable meeting with the President of India.
We presented our memorandum to her outlining PM Modi and HM Amit Shah’s gross subversion of India’s electoral system and seeking CEC Gyanesh Kumar’s resignation. I was shocked that the President did not deny Vote Chori.
Instead, she asked us to bring her proof. We will bring her a mountain of it. The INDIA bloc will gladly submit every piece of evidence before her.
We welcome her assurance that she will examine the matter and take action.
— Rahul Gandhi (@RahulGandhi) October 9, 2026
‘ಇಂಡಿಯಾ’ ಮೈತ್ರಿಕೂಟದ 4 ಪ್ರಮುಖ ಬೇಡಿಕೆಗಳು:
- ಮುಖ್ಯ ಚುನಾವಣಾ ಆಯುಕ್ತರ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು, ಸಿಇಸಿ ಹಾಗೂ ಇಸಿಗಳಿಗೆ ಜೀವಮಾನದ ವಿನಾಯಿತಿ ನೀಡುವ 2023ರ ಕಾನೂನನ್ನು ರದ್ದುಗೊಳಿಸಬೇಕು.
- ಎಸ್ಐಆರ್ ಅನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಅಕ್ರಮವಾಗಿ ತೆಗೆದುಹಾಕಲಾದ 13.30) ಕೋಟಿ ಮತದಾರರನ್ನು ಮರಳಿ ಸೇರ್ಪಡೆಗೊಳಿಸಬೇಕು.
- ಎಲ್ಲಾ ಚುನಾವಣೆಗಳಿಗೂ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಾಗಿ ಕಾಗದದ ಬ್ಯಾಲೆಟ್ ಪೇಪರ್ ಬಳಕೆಯನ್ನು ಮರುಜಾರಿಗೊಳಿಸಬೇಕು.
- ಮತ ಕಳವು ನಡೆದಿರುವುದು ಸಾಬೀತಾಗಿರುವ ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ರದ್ದುಗೊಳಿಸಬೇಕು.
ಇದನ್ನೂ ಓದಿ: ದೆಹಲಿ ಪೊಲೀಸರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಆರೋಪ: ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ವಿರುದ್ಧ ಎಫ್‌ಐಆರ್ ದಾಖಲು
#WATCH | Delhi: After meeting the President, Lok Sabha LoP Rahul Gandhi says, “The entire country knows that votes are being stolen. Narendra Modi is the architect of this; Amit Shah and Gyanesh Kumar are its implementers. The President of India did not deny this fact today.” https://t.co/UTkMUzRPKx
— ANI (@ANI) October 9, 2026
ರಾಷ್ಟ್ರಪತಿಯ ಭೇಟಿ ಬಳಿಕ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡಲು ಸಂಚು ರೂಪಿಸಿದ್ದಾರೆ ಎಂದು ನಾವು ಸ್ಪಷ್ಟಪಡಿಸಿದೆವು. ರಾಷ್ಟ್ರಪತಿಯವರು ಇದನ್ನು ನಿರಾಕರಿಸಲಿಲ್ಲ. ಮತ ಕಳವಿನ ಸಾಕ್ಷ್ಯ ನೀಡುವಂತೆ ಕೇಳಿದ್ದಾರೆ. ಇಡೀ ದೇಶಕ್ಕೇ ತಿಳಿದಿರುವ ಈ ಸಾಕ್ಷ್ಯಗಳನ್ನು ನಾವು ನೀಡಲಿದ್ದೇವೆ. ಸೋಮವಾರ ನಾವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




