AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coal Scam: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಪತ್ನಿಯ ದುಬೈ ಪ್ರಯಾಣಕ್ಕೆ ತಡೆ

ಬಂಗಾಳ ಕಲ್ಲಿದ್ದಲು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರುಜಿರಾ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದ್ದು ಎರಡು ದಿನಗಳ ನಂತರ ವಿಚಾರಣೆಗೆ ಕರೆದಿದೆ.

Coal Scam: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಪತ್ನಿಯ ದುಬೈ ಪ್ರಯಾಣಕ್ಕೆ ತಡೆ
ರುಜಿರಾ ನರುಲಾ ಬ್ಯಾನರ್ಜಿ
ರಶ್ಮಿ ಕಲ್ಲಕಟ್ಟ
|

Updated on:Jun 05, 2023 | 1:38 PM

Share

ಕೊಲ್ಕತ್ತಾ:  ತೃಣಮೂಲ ಕಾಂಗ್ರೆಸ್‌ನ (TMC)ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರ ಪತ್ನಿ ರುಜಿರಾ ನರುಲಾ ಬ್ಯಾನರ್ಜಿ(Rujira Narula Banerjee) ಅವರ ದುಬೈಗೆ ವಿಮಾನ ಪ್ರಯಾಣಕ್ಕೆ ತಡೆಯೊಡ್ಡಲಾಗಿದೆ. ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಗೆ ತೆರಳುವ ವಿಮಾನವನ್ನು ಹತ್ತದಂತೆ ಅವರನ್ನು ತಡೆಯಲಾಯಿತು. ಬಂಗಾಳ ಕಲ್ಲಿದ್ದಲು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರುಜಿರಾ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದ್ದು ಎರಡು ದಿನಗಳ ನಂತರ ವಿಚಾರಣೆಗೆ ಕರೆದಿದೆ. ದುಬೈಗೆ ತೆರಳುವ ವಿಮಾನವನ್ನು ಹತ್ತಲು ರುಜಿರಾ ಇಂದು (ಸೋಮವಾರ) ವಿಮಾನ ನಿಲ್ದಾಣಕ್ಕೆ ಬಂದಿದ್ದು, ವಲಸೆ ಇಲಾಖೆಯು ಆಕೆಯನ್ನು ವಿಮಾನ ಹತ್ತದಂತೆ ತಡೆದಿದೆ.

ಇಡಿ ಮೂಲಗಳ ಪ್ರಕಾರ, ರುಜಿರಾ ಅವರ ವಿರುದ್ಧ ಹೊರಡಿಸಲಾದ ಲುಕ್ ಔಟ್ ಸುತ್ತೋಲೆಯ ಆಧಾರದ ಮೇಲೆ ಅವರಿಗೆ ಪ್ರಯಾಣ ನಿರಾಕರಿಸಲಾಗಿದೆ.

ಬಹುಕೋಟಿ ಕಲ್ಲಿದ್ದಲು ಕಳ್ಳತನ ಹಗರಣದ ತನಿಖೆಗೆ ಸಂಬಂಧಿಸಿದಂತೆ ರುಜಿರಾ ಬ್ಯಾನರ್ಜಿ ಅವರನ್ನು ಕೇಂದ್ರ ಏಜೆನ್ಸಿಗಳು ಈ ಹಿಂದೆ ವಿಚಾರಣೆ ನಡೆಸಿದ್ದವು. ಕಲ್ಲಿದ್ದಲು ಕಳ್ಳತನ ಹಗರಣದಲ್ಲಿ 2020 ರಲ್ಲಿ ಸಿಬಿಐ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆಯಾಗಿದೆ ಇದು.

ಪಶ್ಚಿಮ ಬಂಗಾಳದ ಅಸನ್ಸೋಲ್ ಬಳಿಯ ಕುನುಸ್ಟೋರಿಯಾ ಮತ್ತು ಕಜೋರಾ ಪ್ರದೇಶಗಳಲ್ಲಿ ಈಸ್ಟರ್ನ್ ಕೋಲ್ ಫೀಲ್ಡ್ಸ್ ನ ಗುತ್ತಿಗೆ ಗಣಿಗಳಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಸಿಬಿಐ ಪ್ರಕಾರ 1,300 ಕೋಟಿ ರೂಪಾಯಿಗಳ ಹಣಕಾಸು ವಹಿವಾಟಿನ ಬಗ್ಗೆ ತನಿಖೆಗಳು ಸುಳಿವು ನೀಡಿವೆ.

ಇದನ್ನೂ ಓದಿ: Mukhtar Ansari: ಅವಧೇಶ್ ರಾಯ್ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್​​ಸ್ಟರ್ ಮುಖ್ತಾರ್ ಅನ್ಸಾರಿ ದೋಷಿ

ಹವಾಲಾ ಮೂಲಕ ಈ ಪ್ರಭಾವಿ ವ್ಯಕ್ತಿಗಳ ವಿದೇಶಿ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Mon, 5 June 23