ಧನ್ಯವಾದಗಳು, ದುಬೈ: ಹವಾಮಾನ ಶೃಂಗಸಭೆಯ ಪ್ರಮುಖ ಕ್ಷಣಗಳ ವಿಡಿಯೊ ಹಂಚಿಕೊಂಡ ಮೋದಿ
ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಸಿಒಪಿ 28 ಹವಾಮಾನ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಅಲ್ಲಿ ಅವರು ನಡೆಸಿದ ದ್ವಿಪಕ್ಷೀಯ ಸಭೆಗಳು, ಜಾಗತಿಕ ನಾಯಕರೊಂದಿಗಿನ ಸಂವಾದಗಳು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಎಲ್ಲಾ ದೇಶಗಳ ಕೊಡುಗೆಯನ್ನು ಕೇಂದ್ರೀಕರಿಸಿದ ಅವರ ಶೃಂಗಸಭೆಯ ಭಾಷಣವನ್ನು ಈ ವಿಡಿಯೊ ಒಳಗೊಂಡಿದೆ.
ದೆಹಲಿ ಡಿಸೆಂಬರ್ 02: ಶುಕ್ರವಾರ ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಸಿಒಪಿ 28 ಹವಾಮಾನ ಶೃಂಗ ಸಭೆಯಲ್ಲಿ(COP28)ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅಲ್ಲಿನ ವಿಡಿಯೊವನ್ನು ಹಂಚಿಕೊಂಡಿದ್ದು ಉತ್ತಮ ಗ್ರಹಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ ಪ್ರಧಾನಿ ಮೋದಿ ಪ್ರಮುಖ ಕ್ಷಣಗಳನ್ನು ಹೈಲೈಟ್ ಮಾಡಿದ್ದಾರೆ.
ಮೋದಿ ಭಾಗವಹಿಸಿದ ದ್ವಿಪಕ್ಷೀಯ ಸಭೆಗಳು, ಜಾಗತಿಕ ನಾಯಕರೊಂದಿಗಿನ ಸಂವಾದಗಳು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಎಲ್ಲಾ ದೇಶಗಳ ಕೊಡುಗೆಯನ್ನು ಕೇಂದ್ರೀಕರಿಸಿದ ಅವರ ಶೃಂಗಸಭೆಯ ಭಾಷಣವನ್ನು ವಿಡಿಯೊ ಒಳಗೊಂಡಿದೆ. ವಿಡಿಯೊದಲ್ಲಿ, ದುಬೈನಲ್ಲಿ ನಡೆದ COP28 ವಿಶ್ವ ಹವಾಮಾನ ಶೃಂಗಸಭೆಯ ಹೊತ್ತಲ್ಲಿ ಪಿಎಂ ಮೋದಿ ಅನೇಕ ವಿಶ್ವ ನಾಯಕರೊಂದಿಗೆ ಹಸ್ತಲಾಘವ ಮಾಡುತ್ತಿರುವುದು, ಅವರೊಂದಿಗೆ ಸಂವಾದ ನಡೆಸುತ್ತಿರುವುದೂ ವಿಡಿಯೊದಲ್ಲಿದೆ.
Thank you, Dubai! It’s been a productive #COP28 Summit. Let’s all keep working together for a better planet. pic.twitter.com/xpQLQJBmQk
— Narendra Modi (@narendramodi) December 1, 2023
ಧನ್ಯವಾದಗಳು, ದುಬೈ! ಇದು ಉತ್ಪಾದಕ #COP28 ಶೃಂಗಸಭೆಯಾಗಿದೆ. ಉತ್ತಮ ಗ್ರಹಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿರೋಣ ಎಂದು ಪ್ರಧಾನಿ ಮೋದಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಶೃಂಗಸಭೆಯ ಹೊತ್ತಲ್ಲೇ ಪ್ರಧಾನಿ ಮೋದಿ ಅವರು ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು. ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಕಿಂಗ್ ಚಾರ್ಲ್ಸ್ ಮಹತ್ವದ ಧ್ವನಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದುಬೈನಲ್ಲಿ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಸದಾ ಉತ್ಸುಕರಾಗಿರುವ ಕಿಂಗ್ ಚಾರ್ಲ್ಸ್ ಅವರೊಂದಿಗೆ ಸಂವಾದ ನಡೆಸಲು ನನಗೆ ಅವಕಾಶ ಸಿಕ್ಕಿತು. ಅವರು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಧ್ವನಿಯಾಗಿದ್ದಾರೆ. ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರನ್ನು ಭೇಟಿ ಮಾಡಿದ್ದು ಉಭಯ ನಾಯಕರು ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.
“ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಉತ್ತಮ ಸಂವಾದ ನಡೆಸಿರುವುದಾಗಿ ದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದುಬೈಗೆ ಮಹತ್ವದ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಡರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. COP28 ರ ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಅವರು ಶುಕ್ರವಾರ ಸಂಜೆ ಯುಎಇಗೆ ತಮ್ಮ ದಿನದ ಭೇಟಿಯನ್ನು ಪೂರ್ಣಗೊಳಿಸಿದರು.
ಇದನ್ನೂ ಓದಿ: ವಿಶ್ವದ ಅಗ್ರಗಣ್ಯ ನಾಯಕನಾಗಿ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ: ಹೆಚ್ ಡಿ ದೇವೇಗೌಡ
“ಪ್ರಧಾನಿ ಅವರ ಭೇಟಿಯನ್ನು ಜಾಗತಿಕ ನಾಯಕರೊಂದಿಗಿನ ಫಲಪ್ರದ ನಿಶ್ಚಿತಾರ್ಥಗಳು ಮತ್ತು ಜಾಗತಿಕ ಹವಾಮಾನ ಕ್ರಿಯೆಯನ್ನು ವೇಗಗೊಳಿಸಲು ಪ್ರಮುಖ ಉಪಕ್ರಮಗಳಿಂದ ವ್ಯಾಖ್ಯಾನಿಸಲಾಗಿದೆ” ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ತಮ್ಮ ಯುಎಇ ಭೇಟಿಯ ಸಂದರ್ಭದಲ್ಲಿ, ಹವಾಮಾನ ಬದಲಾವಣೆಯು ಜಾಗತಿಕ ದಕ್ಷಿಣದ ದೇಶಗಳ ಮೇಲೆ ಅಪಾರ ಪರಿಣಾಮ ಬೀರಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:46 pm, Sat, 2 December 23