AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಅಸ್ಸಾಂ ಜನರಿಗೆ ಗೌರವ ಕೊಡಲಿಲ್ಲ, ವಲಸಿಗರಿಗೆ ಮಣೆ ಹಾಕಿತು; ಗುವಾಹಟಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಅಸ್ಸಾಂ ಭೇಟಿಗೆ ಇಂದು ಗುವಾಹಟಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ಬೋಡೋ ಸಂಪ್ರದಾಯಗಳನ್ನು ಶ್ಲಾಘಿಸಿದರು. ಗುವಾಹಟಿಯಲ್ಲಿ ನಡೆದ ಬಾಗುರುಂಬಾ ದ್ವೌ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಜಾಗತಿಕ ಮನ್ನಣೆ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ಹಾಗೇ, ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಸ್ಸಾಂ ಜನರಿಗೆ ಗೌರವ ಕೊಡಲಿಲ್ಲ, ವಲಸಿಗರಿಗೆ ಮಣೆ ಹಾಕಿತು; ಗುವಾಹಟಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
Pm Modi In Guwahati
ಸುಷ್ಮಾ ಚಕ್ರೆ
|

Updated on: Jan 17, 2026 | 9:56 PM

Share

ಗುವಾಹಟಿ, ಜನವರಿ 17: ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಗುವಾಹಟಿಗೆ ಭೇಟಿ ನೀಡಿದ್ದಾರೆ. ಬೋಡೋಲ್ಯಾಂಡ್ ಅನ್ನು ನಿರ್ಲಕ್ಷಿಸುವಲ್ಲಿ ಮತ್ತು ರಾಜಕೀಯ ಲಾಭಕ್ಕಾಗಿ ಅಕ್ರಮ ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುವಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಪಾತ್ರ ದೊಡ್ಡದು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಬೋಡೋಲ್ಯಾಂಡ್ ಸಂಪರ್ಕವನ್ನು ಮುಖ್ಯವಾಹಿನಿಯಿಂದ ಕಡಿತಗೊಳಿಸಿತು. ಇದರಿಂದಾಗಿ ಒಳನುಸುಳುವವರು ಮತ ಬ್ಯಾಂಕ್ ರಾಜಕೀಯಕ್ಕಾಗಿ ಈ ಪ್ರದೇಶವನ್ನು ಬಳಸಿಕೊಳ್ಳಲು ಸುಲಭವಾಯಿತು ಎಂದು ಮೋದಿ ಹೇಳಿದ್ದಾರೆ.

ಅಸ್ಸಾಂ ರಾಜ್ಯದಲ್ಲಿ ಒಂದು ಕಾಲದಲ್ಲಿ ಹತ್ಯೆಗಳು ನಿಯಮಿತವಾಗಿತ್ತು. ಇಂದು, ಅಸ್ಸಾಂ ರಾಜ್ಯವು ಅದರ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಣ್ಣಗಳಿಂದ ತುಂಬಿದೆ. ಬಿಜೆಪಿಯ ಆಡಳಿತದಲ್ಲಿ ಅಸ್ಸಾಂನ ರೂಪಾಂತರವಾಗಿದೆ. ಭೂತಕಾಲದ ಹಿಂಸಾತ್ಮಕತೆಯನ್ನು ಈಗ ನಡೆಯುತ್ತಿರುವ ಸಾಂಸ್ಕೃತಿಕ ಪುನರುಜ್ಜೀವನದೊಂದಿಗೆ ಹೋಲಿಸಿ ನೋಡಿದರೆ ಆ ಬದಲಾವಣೆ ತಿಳಿಯುತ್ತದೆ. ಅಸ್ಸಾಂನಲ್ಲಿ ಪ್ರತಿಧ್ವನಿಸುತ್ತಿದ್ದ ಗುಂಡೇಟಿನ ಶಬ್ದಗಳ ಬದಲಾಗಿ ಈಗ ಶಾಂತಿ ಮತ್ತು ಸ್ಥಿರತೆಯನ್ನು ಸಂಕೇತಿಸುವ ಸಂಗೀತ ವಾದ್ಯಗಳ ಶಬ್ದಗಳು ಕೇಳಿಬರುತ್ತಿವೆ ಎಂದು ಮೋದಿ ಬಣ್ಣಿಸಿದರು.

ಇದನ್ನೂ ಓದಿ: Vande Bharat Sleeper Train: ಬಂಗಾಳದ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿದ್ದು ಕಾಂಗ್ರೆಸ್ ಪಕ್ಷ. ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಸೌಲಭ್ಯವನ್ನು ಸ್ಥಾಪಿಸುವುದನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿತು. ಕಾಂಗ್ರೆಸ್ ಪಕ್ಷವು ಅಸ್ಸಾಂ ಜನರನ್ನು ಇಷ್ಟಪಡುವುದಿಲ್ಲ. ಅವರು ವಿದೇಶಿ ನುಸುಳುಕೋರರನ್ನು ಪ್ರೀತಿಸುತ್ತಾರೆ. ಏಕೆಂದರೆ ಅವರು ಇಲ್ಲಿಗೆ ಬಂದು ಕಾಂಗ್ರೆಸ್ ಪಕ್ಷದ ಕಟ್ಟಾ ಬೆಂಬಲಿಗರಾಗುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ನುಸುಳುಕೋರರನ್ನು ಪ್ರೋತ್ಸಾಹಿಸಿತು. ಆದರೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಪ್ರಸ್ತುತ ಬಿಜೆಪಿ ಸರ್ಕಾರವು ಲಕ್ಷಾಂತರ ಬಿಘಾ ಅತಿಕ್ರಮಣಗೊಂಡ ಭೂಮಿಯನ್ನು ಮುಕ್ತಗೊಳಿಸುತ್ತಿದೆ ಎಂದು ಮೋದಿ ಹೇಳಿದರು.

ಬೋಡೋ ಸಮುದಾಯದ ಸಾಂಪ್ರದಾಯಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಅಸ್ಸಾಂಗೆ ಆಗಾಗ ಭೇಟಿ ನೀಡುವುದು ಅಸ್ಸಾಂ ರಾಜ್ಯದ ಅಭಿವೃದ್ಧಿಗೆ ತಮ್ಮ ಬದ್ಧತೆಯ ಸಂಕೇತವೆಂದು ಹೇಳಿದರು. ಕಾಂಗ್ರೆಸ್ ಬೋಡೋಲ್ಯಾಂಡ್ ಅನ್ನು ನಿರ್ಲಕ್ಷಿಸುತ್ತಿದೆ ಮತ್ತು ಒಳನುಸುಳುವಿಕೆ ಸಮಸ್ಯೆಗಳೊಂದಿಗೆ ರಾಜಕೀಯ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು.

ಇದನ್ನೂ ಓದಿ: PM Modi in Assam: ಗುವಾಹಟಿಯಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು, ಪ್ರಧಾನಿ ಮೋದಿ ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ನಡೆದ ಭವ್ಯ ರೋಡ್ ಶೋನಲ್ಲಿ ಭಾಗವಹಿಸಿದರು. ಸಾವಿರಾರು ಉತ್ಸಾಹಿ ಬೆಂಬಲಿಗರು ಬೀದಿಗಳಲ್ಲಿ ನೆರೆದು, ಜೋರಾಗಿ ಘೋಷಣೆಗಳು ಮತ್ತು ಧ್ವಜಗಳನ್ನು ಬೀಸುವ ಮೂಲಕ ಪ್ರಧಾನಿಯನ್ನು ಸ್ವಾಗತಿಸಿದರು. ರೋಡ್ ಶೋ ಸಮಯದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಧಾನಿ ಮೋದಿ ಅವರೊಂದಿಗೆ ಇದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್‌ಸಿಗ್ನಲ್‌
ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್‌ಸಿಗ್ನಲ್‌
ತಂದೆಯನ್ನೇ ಕೊಂದು ಮೃತ ದೇಹವನ್ನು ಆ್ಯಂಬುಲೆನ್ಸ್​​​ನಲ್ಲಿ ಕಳಿಸಿದ ಮಗಳು
ತಂದೆಯನ್ನೇ ಕೊಂದು ಮೃತ ದೇಹವನ್ನು ಆ್ಯಂಬುಲೆನ್ಸ್​​​ನಲ್ಲಿ ಕಳಿಸಿದ ಮಗಳು
ಬಿಗ್​​ಬಾಸ್ ಕನ್ನಡ: ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ಮತಗಳು
ಬಿಗ್​​ಬಾಸ್ ಕನ್ನಡ: ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ಮತಗಳು
‘45’ ಸಿನಿಮಾಕ್ಕೆ ಪೆಟ್ಟು ಕೊಟ್ಟದ್ದು ಯಾರು? ನಿರ್ಮಾಪಕ ಮಾತು
‘45’ ಸಿನಿಮಾಕ್ಕೆ ಪೆಟ್ಟು ಕೊಟ್ಟದ್ದು ಯಾರು? ನಿರ್ಮಾಪಕ ಮಾತು
ಬಾಂಗ್ಲಾದೇಶದೊಂದಿಗೂ ನೋ ಹ್ಯಾಂಡ್‌ಶೇಕ್ ಎಂದ ಟೀಂ ಇಂಡಿಯಾ
ಬಾಂಗ್ಲಾದೇಶದೊಂದಿಗೂ ನೋ ಹ್ಯಾಂಡ್‌ಶೇಕ್ ಎಂದ ಟೀಂ ಇಂಡಿಯಾ
ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಸಿಕ್ಕಿದ್ದ ಅಬಕಾರಿ ಉಪ ಆಯುಕ್ತ
ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಸಿಕ್ಕಿದ್ದ ಅಬಕಾರಿ ಉಪ ಆಯುಕ್ತ
ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ
ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ
ಶಾಸಕ ಬಾಲಕೃಷ್ಣ ಮುಂದೆ ಅಬ್ಬರಿಸಿದ ರೈತ ಮಹಿಳೆ
ಶಾಸಕ ಬಾಲಕೃಷ್ಣ ಮುಂದೆ ಅಬ್ಬರಿಸಿದ ರೈತ ಮಹಿಳೆ
ನಿಂತಿದ್ದ ಪಿಕಪ್​​ ಟ್ರಕ್​​​ಗೆ ಶಾಲಾ ಮಕ್ಕಳಿದ್ದ ಓಮಿನಿ ಡಿಕ್ಕಿ
ನಿಂತಿದ್ದ ಪಿಕಪ್​​ ಟ್ರಕ್​​​ಗೆ ಶಾಲಾ ಮಕ್ಕಳಿದ್ದ ಓಮಿನಿ ಡಿಕ್ಕಿ
ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ
ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ