Budget 2021 ಕೇಂದ್ರ ಬಜೆಟ್‌ನಲ್ಲಿ ಕೊರೊನಾ ಸೆಸ್ ಅಥವಾ ಸರ್ ಚಾರ್ಜ್ ವಿಧಿಸುವ ಸಾಧ್ಯತೆ
ಕೊರೊನಾ ಲಸಿಕೆ ನೀಡಲು 60-65 ಸಾವಿರ ಕೋಟಿ ಬೇಕು. ಈ ಮೊತ್ತದ ಹಣ ಸಂಗ್ರಹಿಸಲು ಕೊರೊನಾ ಸೆಸ್ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದೆಹಲಿ: ಕೇಂದ್ರ ಬಜೆಟ್‌ನಲ್ಲಿ ಕೊರೊನಾ ಸೆಸ್ ಅಥವಾ ಸರ್ ಚಾರ್ಜ್ ವಿಧಿಸುವ ಸಾಧ್ಯತೆಯ ಕುರಿತು ಮಾಹಿತಿ ಲಭ್ಯವಾಗಿದೆ. ಕೊರೊನಾ ಲಸಿಕೆ ನೀಡಲು 60-65 ಸಾವಿರ ಕೋಟಿ ಬೇಕು. ಈ ಮೊತ್ತದ ಹಣ ಸಂಗ್ರಹಿಸಲು ಕೊರೊನಾ ಸೆಸ್ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಹಣಕಾಸು ಇಲಾಖೆಯಿಂದ ಈ ಬಗ್ಗೆ ಗಂಭೀರ ಚರ್ಚೆಯಾಗಿರುವ ಕುರಿತು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಮಾತ್ರ ಬಾಕಿ ಉಳಿದಿದೆ. ಅಧಿಕ ಆದಾಯ ಗಳಿಸುವ ಜನರ ಮೇಲೆ ಕೊರೊನಾ ಸೆಸ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೂ ಹೆಚ್ಚುವರಿ ಸೆಸ್ ಹೇರುವ ಬಗ್ಗೆ ಅಂದಾಜಿಸಲಾಗಿದೆ. ಈಗಾಗಲೇ ಕೇಂದ್ರದ ವಿತ್ತೀಯ ಕೊರತೆ ಏರಿಕೆಯಾಗಿದೆ. ಏಪ್ರಿಲ್-ನವೆಂಬರ್‌ನಲ್ಲಿ $10.75 ಲಕ್ಷ ಕೋಟಿಗೆ ಏರಿಕೆಯಾಗುವ ಸೂಚನೆ ಇದೆ. ಅಲ್ಲದೆ, ಕೊರೊನಾದಿಂದ ಕೇಂದ್ರ-ರಾಜ್ಯಸರ್ಕಾರದ ಆದಾಯ ಕಡಿತವಾಗಿದೆ. ಹೀಗಾಗಿ, ಕೆಲ ರಾಜ್ಯಗಳು ಸೆಸ್, ಹೆಚ್ಚುವರಿ ತೆರಿಗೆಯನ್ನು ವಿಧಿಸಿವೆ.
ಜಾರ್ಖಂಡ್ ರಾಜ್ಯ ಅದಿರು ಗಣಿಗಾರಿಕೆ ಮೇಲೆ ಸೆಸ್ ಹಾಕಿದೆ. ಪಂಜಾಬ್, ಹರಿಯಾಣ, ದೆಹಲಿಯಲ್ಲಿ ಮದ್ಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ಈ ನಡುವೆ, ಕೊರೊನಾ ಸೆಸ್ ಅಥವಾ ಸರ್ ಚಾರ್ಜ್ ಕೂಡ ವಿಧಿಸುವ ಸಾಧ್ಯತೆ ಹೆಚ್ಚಾಗಿದೆ. ಶೀಘ್ರವೇ ಅಂತಿಮ ನಿರ್ಧಾರ ಸಿಗಲಿದೆ.
ಕೊರೊನಾ ಮಹಿಮೆ! Cashless.. Paperless ಬಜೆಟ್; ಈ ಬಾರಿ ಆಯವ್ಯಯದ ಪ್ರತಿ ಮುದ್ರಣ ಆಗೋದಿಲ್ಲ..
Published On - 7:01 pm, Mon, 11 January 21