ಕೊವಿಶೀಲ್ಡ್ ಲಸಿಕೆ ಪೂರೈಕೆ ಆರಂಭ.. 8 ವಿಮಾನಗಳಲ್ಲಿ ದೇಶದ 13 ಸ್ಥಳಗಳಿಗೆ ಲಸಿಕೆ ಸಾಗಾಟ
ಸೆರಮ್‌ನಿಂದ ಕೊವಿಶೀಲ್ಡ್ ಲಸಿಕೆ ಪೂರೈಕೆ ಆರಂಭಗೊಂಡಿದೆ. ಕೊವಿಶೀಲ್ಡ್ ವ್ಯಾಕ್ಸಿನ್ ತುಂಬಿದ್ದ ಮೂರು ಟ್ರಕ್‌ಗಳು ಪೊಲೀಸ್ ಭದ್ರತೆಯಲ್ಲಿ ಎಸ್ಐಐನಿಂದ ಪುಣೆ ಏರ್‌ಪೋರ್ಟ್ ತಲುಪಿದ್ದು ಏರ್‌ಪೋರ್ಟ್‌ನಿಂದ ದೇಶದ ವಿವಿಧ ಭಾಗಗಳಿಗೆ ರವಾನಿಸಲಾಗುತ್ತೆ.
ಜನವರಿ 16 ರಿಂದ ದೇಶದ ಜನರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದೇ ಕಾರಣಕ್ಕೆ ಮಹಾರಾಷ್ಟ್ರದ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಜೊತೆಗೆ 1 ಕೋಟಿ 10 ಲಕ್ಷ ಕೊವಿಶೀಲ್ಡ್ ಲಸಿಕೆ ಪೂರೈಸಲು ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು ಸೆರಮ್‌ನಿಂದ ಕೊವಿಶೀಲ್ಡ್ ಲಸಿಕೆ ಪೂರೈಕೆ ಆರಂಭಗೊಂಡಿದೆ.
ಕೊವಿಶೀಲ್ಡ್ ವ್ಯಾಕ್ಸಿನ್ ತುಂಬಿದ್ದ ಮೂರು ಟ್ರಕ್‌ಗಳು ಪೊಲೀಸ್ ಭದ್ರತೆಯಲ್ಲಿ ಎಸ್ಐಐನಿಂದ ಪುಣೆ ಏರ್‌ಪೋರ್ಟ್ ತಲುಪಿದ್ದು ಏರ್‌ಪೋರ್ಟ್‌ನಿಂದ ದೇಶದ ವಿವಿಧ ಭಾಗಗಳಿಗೆ ರವಾನಿಸಲಾಗುತ್ತೆ. ಈ ಬಗ್ಗೆ ಎಸ್‌ಐಐ ಬಳಿ ಡಿಸಿಪಿ ನಮ್ರತಾ ಪಾಟೀಲ್ ತಿಳಿಸಿದ್ರು.
ಪುಣೆಯಿಂದ ಕೊವಿಶೀಲ್ಡ್ ಲಸಿಕೆ ವಿಮಾನಗಳಲ್ಲಿ ಸಾಗಾಟ ಒಟ್ಟು 8 ವಿಮಾನಗಳಲ್ಲಿ ದೇಶದ 13 ಸ್ಥಳಗಳಿಗೆ ಲಸಿಕೆ ಸಾಗಾಟ ಮಾಡಲಾಗುತ್ತೆ. ದೆಹಲಿ, ಹರಿಯಾಣದ ಕರ್ನಲ್, ಅಹಮದಾಬಾದ್, ಚಂಡೀಗಢ, ಲಖನೌ, ಚೆನ್ನೈ, ಬೆಂಗಳೂರು, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಕೋಲ್ಕತ್ತಾ, ಗುವಾಹತಿ ಸೇರಿದಂತೆ ಒಟ್ಟು 13 ಸ್ಥಳಗಳಿಗೆ ಕೊವಿಶೀಲ್ಡ್ ಲಸಿಕೆ ಸಾಗಿಸಲಾಗುತ್ತೆ. ಮೊದಲ ವಿಮಾನ ದೆಹಲಿಗೆ ಪ್ರಯಾಣ ಬೆಳೆಸಲಿದ್ದು ಲಸಿಕೆ ಸಾಗಾಟ ಹೊಣೆಯನ್ನು SB ಲಾಜಿಸ್ಟಿಕ್ ಕಂಪನಿ ಹೊತ್ತಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಲಸಿಕೆ ತಲುಪುವ ಸಾಧ್ಯತೆ ಇದೆ. ಈ ಬಗ್ಗೆ ಎಸ್.ಬಿ ಲಾಜಿಸ್ಟಿಕ್ ಕಂಪನಿಯ ಎಂಡಿ ಸಂದೀಪ್ ಬೋಸ್ಲೆ ಸ್ಪಷ್ಟಪಡಿಸಿದ್ದಾರೆ.
ಚೆನ್ನೈಗೆ 5.56 ಲಕ್ಷ ಕೊವಿಶೀಲ್ಡ್ ಡೋಸ್ ಪೂರೈಕೆ ಚೆನ್ನೈಗೆ ಇಂದು 5.56 ಲಕ್ಷ ಕೊವಿಶೀಲ್ಡ್ ಡೋಸ್ ಪೂರೈಕೆ ಮಾಡಲಾಗುತ್ತಿದ್ದು ಬೆಳಗ್ಗೆ 11 ಗಂಟೆಗೆ ಕೊವಿಶೀಲ್ಡ್ ಲಸಿಕೆ ಚೆನ್ನೈ ತಲುಪಲಿದೆ.
ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ ಕೊವಿಶೀಲ್ಡ್ ಲಸಿಕೆ ಖರೀದಿ 2021ರ ಏಪ್ರಿಲ್ ವೇಳೆಗೆ 4.5 ಕೋಟಿ ಡೋಸ್ HLL ಲೈಫ್ ಕೇರ್ ಲಿಮಿಟೆಡ್ ಕಂಪನಿ ಮೂಲಕ ಖರೀದಿ ಮಾಡಲಿದೆ. ಪ್ರತಿ ಡೋಸ್‌ಗೆ 200 ರೂಪಾಯಿ ದರ ನಿಗದಿ ಪಡಿಸಿದ್ದು GST $10 ಸೇರಿ $210ಕ್ಕೆ ಒಂದು ಡೋಸ್ ಲಸಿಕೆ ಖರೀದಿ ಮಾಡಲಿದೆ.
ಜನವರಿ 16ರಿಂದ ದೇಶಾದ್ಯಂತ ಕೊರೊನಾ ವ್ಯಾಕ್ಸಿನ್ ಹಂಚಿಕೆ.. ಕರುನಾಡಿಗೆ ಇವತ್ತು ಆಗಮಿಸಲಿದೆ ಸಂಜೀವಿನಿ
Published On - 7:53 am, Tue, 12 January 21