Crime News: ಹಿಟ್ಟಿಗೆ ಎಂಜಲು ಹಚ್ಚಿ ಚಪಾತಿ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ
ಹೋಟೆಲ್‌ನಲ್ಲಿ ಚಪಾತಿ ಹಿಟ್ಟಿಗೆ ಉಗುಳಿ, ಚಪಾತಿಗಳನ್ನು ಲಟ್ಟಿಸುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಘಾಜಿಯಾಬಾದ್: ಹೋಟೆಲ್‌ನಲ್ಲಿ ಚಪಾತಿ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಎಂಜಲನ್ನು ಹಚ್ಚಿ ಚಪಾತಿ ಲಟ್ಟಿಸುತ್ತಿದ್ದ ವಿಡಿಯೋವೊಂದು ಭಾರೀ ವೈರಲ್ (Video Viral) ಆಗಿತ್ತು. ಆ ವ್ಯಕ್ತಿಯನ್ನು ಘಾಜಿಯಾಬಾದ್ (Ghaziabad) ಪೊಲೀಸರು ಗುರುವಾರ ಬಂಧಿಸಿದ್ದಾರೆ. ರಸ್ತೆ ಬದಿಯ ಹೋಟೆಲ್‌ನಲ್ಲಿ ಚಪಾತಿ ಲಟ್ಟಿಸುವಾಗ ಹಿಟ್ಟಿನಲ್ಲಿ ಎಂಜಲು ಉಗುಳುತ್ತಿದ್ದ ಆತನ ವಿಡಿಯೋ ಎಲ್ಲೆಡೆ ಹರಿದಾಡಿತ್ತು.
ತಿಲಾ ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಘಾಜಿಯಾಬಾದ್‌ನ ಸಾಹಿಬಾಬಾದ್ ಪ್ರದೇಶದ ಹೋಟೆಲ್‌ನ ವಿಡಿಯೋ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋಹನ್ ನಗರ-ವಜೀರಾಬಾದ್ ರಸ್ತೆಯಲ್ಲಿ, ಪಸೋಂಡಾ ಗ್ರಾಮದಲ್ಲಿ ಆ ವ್ಯಕ್ತಿ ಎಂಜಲು ಹಾಕಿ ಚಪಾತಿ ತಯಾರಿಸುತ್ತಿದ್ದ ಉಪಾಹಾರ ಗೃಹವಿದೆ.
Uttar Pradesh | A video was going viral on social media from the area under Tila More police station, in which a man was making rotis by applying spit. Accused Taseeruddin has been arrested in the case & further legal action is being taken: Poonam Mishra, ACP, Sahibabad (19.01) pic.twitter.com/cHi5jtOrwi
— ANI UP/Uttarakhand (@ANINewsUP) January 20, 2023
ಇದನ್ನೂ ಓದಿ: ಯುಎಇ ರಾಜಮನೆತನದೊಂದಿಗೆ ನಂಟು ಇದೆ ಎಂದು 5 ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯ; ₹23 ಲಕ್ಷ ಬಿಲ್ ಪಾವತಿಸದೆ ವ್ಯಕ್ತಿ ಪರಾರಿ
ತಿಲಾ ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ವೈರಲ್ ವೀಡಿಯೊ ಹರಿದಾಡಿತ್ತು. ಅದರಲ್ಲಿ ವ್ಯಕ್ತಿಯೊಬ್ಬರು ಉಗುಳುವ ಮೂಲಕ ಚಪಾತಿಗಳನ್ನು ತಯಾರಿಸುತ್ತಿದ್ದ ಎಂದು ಸಾಹಿಬಾಬಾದ್‌ನ ಪೊಲೀಸ್ ವರಿಷ್ಠಾಧಿಕಾರಿ ಪೂನಂ ಮಿಶ್ರಾ ಹೇಳಿದ್ದಾರೆ. ಜನವರಿ 18ರಂದು ತಿಲಾ ಮೋರ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು.