ಕಟಕ್ನಲ್ಲಿ ಹೊತ್ತಿ ಉರಿದ ಭುವನೇಶ್ವರ-ಹೌರಾ ಜನ್ ಶತಾಬ್ದಿ ಎಕ್ಸ್ಪ್ರೆಸ್ ರೈಲು
ಕಟಕ್ ನಿಲ್ದಾಣದಲ್ಲಿ ಭುವನೇಶ್ವರ-ಹೌರಾ ಜನ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ(Fire Accident) ಸಂಭವಿಸಿದೆ. ಬಳಿಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ, ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು.

ಸಧ್ಯಕ್ಕೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ತಿಳಿದುಬಂದಿಲ್ಲ. ಸೆಪ್ಟೆಂಬರ್ನಲ್ಲಿ ಗುಜರಾತ್ನ ವಲ್ಸಾದ್ ಬಳಿ ಹಮ್ಸಫರ್ ಎಕ್ಸ್ಪ್ರೆಸ್ನ ಪವರ್ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಅಕ್ಕಪಕ್ಕದ ಎರಡು ಬೋಗಿಗಳಿಗೆ ಆವರಿಸಿತ್ತು.
ಮತ್ತಷ್ಟು ಓದಿ: ಬೆಂಗಳೂರು: ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ; ತಪ್ಪಿದ ಭಾರಿ ದುರಂತ
ಹಮ್ಸಫರ್ ರೈಲು ತಿರುಚಿರಾಪಳ್ಳಿ ಮತ್ತು ಶ್ರೀ ಗಂಗಾನಗರ ನಡುವೆ ಚಲಿಸುತ್ತದೆ. ರೈಲು ಸೂರತ್ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ರೈಲು ಕಂಪಾರ್ಟ್ಮೆಂಟ್ಗಳಿಂದ ಬೆಂಕಿ ಮತ್ತು ಹೊಗೆ ಬರುತ್ತಿರುವುದನ್ನು ಜನರು ನೋಡಿದ್ದರು, ಇದಾದ ನಂತರ ಪ್ರಯಾಣಿಕರಲ್ಲಿ ಆತಂಕ, ಗೊಂದಲ ಸೃಷ್ಟಿಯಾಗಿತ್ತು, ಆರ್ಪಇಎಫ್ ಮತ್ತು ಜಿಆರ್ಪಿಎಫ್ ತಂಡದ ನೆರವಿನಿಂದ ಬೆಂಕಿಯನ್ನು ಹತೋಟಿಗೆ ತರಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 am, Thu, 7 December 23