ಪೂರ್ವ ನಾಗಾಲ್ಯಾಂಡ್​ನ ದಶಕಗಳಷ್ಟು ಹಳೆಯದಾದ ಸಮಸ್ಯೆಗೆ ಒಂದು ಒಪ್ಪಂದದ ಮೂಲಕ ಮುಕ್ತಿ

ಪೂರ್ವ ನಾಗಾಲ್ಯಾಂಡ್‌ನ ದಶಕಗಳ ಸಮಸ್ಯೆಗಳಿಗೆ ಮುಕ್ತಿ ಕೊಎಲು ಕೇಂದ್ರ ಸರ್ಕಾರ, ನಾಗಾಲ್ಯಾಂಡ್ ಸರ್ಕಾರ ಮತ್ತು ENPO ನಡುವೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಈ ಪ್ರದೇಶದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಫ್ರಾಂಟಿಯರ್ ನಾಗಾಲ್ಯಾಂಡ್ ಟೆರಿಟೋರಿಯಲ್ ಅಥಾರಿಟಿ (FNTA) ಸ್ಥಾಪನೆಯ ಮೂಲಕ 46 ವಿಷಯಗಳ ಮೇಲೆ ಅಧಿಕಾರ ಲಭ್ಯವಾಗಲಿದ್ದು, ಮಿನಿ-ಸೆಕ್ರೆಟರಿಯೇಟ್ ರಚನೆ ಅಭಿವೃದ್ಧಿಯ ಹಾದಿಗೆ ವೇಗ ನೀಡಲಿದೆ.

ಪೂರ್ವ ನಾಗಾಲ್ಯಾಂಡ್​ನ ದಶಕಗಳಷ್ಟು ಹಳೆಯದಾದ ಸಮಸ್ಯೆಗೆ ಒಂದು ಒಪ್ಪಂದದ ಮೂಲಕ ಮುಕ್ತಿ
ಅಮಿತ್ ಶಾ

Updated on: Feb 06, 2026 | 11:59 AM

ನವದೆಹಲಿ, ಫೆಬ್ರವರಿ 06: ಭಾರತ ಸರ್ಕಾರ, ನಾಗಾಲ್ಯಾಂಡ್ ಸರ್ಕಾರ ಮತ್ತು ಪೂರ್ವ ನಾಗಾಲ್ಯಾಂಡ್ ಪೀಪಲ್ಸ್​ ಆರ್ಗನೈಸೇಷನ್ (ENPO)ಪ್ರತಿನಿಧಿಗಳ ನಡುವೆ ನಡೆದ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಶ್ಲಾಘಿಸಿದ್ದಾರೆ. ಈ ಒಪ್ಪಂದವು ಜನರಿಗೆ ಹೊಸ ಅವಕಾಶ ಮತ್ತು ಸಮೃದ್ಧಿಯ ಹೊಸ ಮಾರ್ಗವನ್ನು ತೆರೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ನಿಜಕ್ಕೂ ಐತಿಹಾಸಿಕ ಒಪ್ಪಂದವಾಗಿದ್ದು, ವಿಶೇಷವಾಗಿ ಪೂರ್ವ ನಾಗಾಲ್ಯಾಂಡ್​ಗೆ ಅಭಿವೃದ್ಧಿಯ ಹಾದಿಯನ್ನು ಸುಧಾರಿಸುತ್ತದೆ ಎಂದು ಬರೆದಿದ್ದಾರೆ.

ಇದು ಈಶಾನ್ಯದ ಎಲ್ಲರಿಗೂ ಶಾಂತಿ ಪ್ರಗತಿ ಮತ್ತು ಅಭಿವೃದ್ಧಿಗೆ ದೃಢ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಂದವನ್ನು ಘೋಷಿಸಿದ್ದಾರೆ. ಪೂರ್ವ ನಾಗಾಲ್ಯಾಂಡ್​​ನಲ್ಲಿ ದಶಕಗಳಿಂದ ಇದ್ದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಭಾರತ ಸರ್ಕಾರ ನ್ಯಾಗಾಲ್ಯಾಂಡ್ ಸರ್ಕಾರ ಮತ್ತು ಇಎಪಿಒ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಶಾಂತಿಯುತ ಮತ್ತು ಸಮೃದ್ಧ ಈಶಾನ್ಯಕ್ಕಾಗಿ ನರೇಂದ್ರ ಮೋದಿ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Pariksha Pe Charcha 2026: ಕನಸು ಕಾಣದಿರುವುದು ಒಂದು ಕ್ರೈಂ, ಕನಸ್ಸಿನ ಬಗ್ಗೆ ಮಾತನಾಡುವುದಲ್ಲ, ಸಫಲತೆಯ ಹಾದಿಯಲ್ಲಿ ಸಾಗಬೇಕು: ಮೋದಿ

ಇಎನ್​ಪಿಒ ನಾಗಾಲ್ಯಾಂಡ್​ನ ಮುಖ್ಯಮಂತ್ರಿ ನೀಫಿಯು ರಿಯೊ ಅವರ ಸಮ್ಮುಖದಲ್ಲಿ ಗುರುವಾರ ಓ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ನಾಗಾಲ್ಯಾಂಡ್​ನ ಆರು ಜಿಲ್ಲೆಗಳಿಗೆ(ಟ್ಯೂನ್​ಸಾಂಗ್, ಮಾನ್, ಕಿಫಿರೆ, ಲಾಂಗ್ಲೆಂಗ , ನೋಕ್ಲಾಕ್ ಮತ್ತು ಶಮಟೋರ್) ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರವನ್ನು ಸ್ಥಾಪಿಸುತ್ತಿದೆ.

ಎಫ್​ಎನ್​ಟಿಎಗೆ 46 ವಿಷಯಗಳ ಮೇಲೆ ಅಧಿಕಾರ ನೀಡಲಾಗುವುದು. ಈ ಒಪ್ಪಂದವು ಎಫ್​ ಎನ್​ಟಿಎಗಾಗಿ ಹೆಚ್ಚುವರು ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ಮಿನಿ-ಸೆಕ್ರೆಟರಿಯೇಟ್ ಅನ್ನು ರಚಿಸಲು ಅವಕಾಶ ನೀಡುತ್ತದೆ. ಇದು ಪೂರ್ವ ನಾಗಾಲ್ಯಾಂಡ್ ಪ್ರದೇಶದ ಅಭಿವೃದ್ಧಿ ವೆಚ್ಚವನ್ನು ಅದರ ಜನಸಂಖ್ಯೆ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಹಂಚಿಕೆ ಮಾಡಲು ಕೂಡ ಅವಕಾಶ ನೀಡುತ್ತದೆ. ಈಶಾನ್ಯ ಜನರ ನಿಜವಾದ ಆಕಾಂಕ್ಷೆಗಳನ್ನು ಪೂರೈಸಲು ಎಲ್ಲಾ ವಿವಾದಾತ್ಮಕ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸುವ ಭಾರತ ಸರ್ಕಾರದ ಬದ್ಧತೆಯನ್ನು ಈ ಒಪ್ಪಂದವು ಪ್ರತಿಬಿಂಬಿದುತ್ತದೆ.

ಪರಸ್ಪರ ಗೌರವ ಮತ್ತು ಸಂವಾದದ ಆಧಾರದ ಮೇಲೆ ಸಂವಾದದ ಮೂಲಕ ಮಾತ್ರ ಪರಿಹಾರ ಕಂಡುಕೊಳ್ಳಬಹುದು. ಹಿಂಸೆ ಮತ್ತು ಸಶಸ್ತ್ರ ಸಂಘರ್ಷದ ಮೂಲಕವಲ್ಲ ಎಂಬ ಪ್ರಜಾಪ್ರಭುತ್ವದ ಮೂಲಭೂತ ತತ್ವವನ್ನು ಇದು ಪುನರುಚ್ಚರಿಸುತ್ತದೆ.

ಈ ಒಪ್ಪಂದವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ FNTA ಗಾಗಿ ಮಿನಿ-ಸೆಕ್ರೆಟರಿಯಟ್ ರಚನೆಗೆ ಅವಕಾಶ ನೀಡುತ್ತದೆ. ಇದಲ್ಲದೆ, ಪೂರ್ವ ನಾಗಾಲ್ಯಾಂಡ್ ಪ್ರದೇಶದ ಅಭಿವೃದ್ಧಿ ವೆಚ್ಚವನ್ನು ಅದರ ಜನಸಂಖ್ಯೆ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಹಂಚಲಾಗುತ್ತದೆ. ಆದಾಗ್ಯೂ, ಒಪ್ಪಂದವು ಭಾರತದ ಸಂವಿಧಾನದ 371 (A) ವಿಧಿಯ ನಿಬಂಧನೆಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ