ಚೀನಾ ಕಾಲ್ಕೆರಕೊಂಡು ನಿಂತಿರುವಾಗ.. ರಕ್ಷಣಾ ಸಚಿವ ರಾಜನಾಥ್‌ ರಷ್ಯಾಗೆ ಮಹತ್ವದ ಭೇಟಿ

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಾಗ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಷ್ಯಾಗೆ ಭೇಟಿ ನೀಡಲು ಮುಂದಾಗಿದ್ದಾರೆ. ಜೂನ್‌ 22ರಂದು ಮಾಸ್ಕೋಗೆ ತೆರಳಲಿರುವ ರಾಜನಾಥ್‌ ಸಿಂಗ್‌ ಅಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಆದ್ರೆ ಈ ಭೇಟಿ ವೇಳೆ ಚೀನಾದ ನಾಯಕರೊಂದಿಗೆ ಯಾವುದೇ ಚರ್ಚೆ ನಡೆಸದಿರಲು ಭಾರತ ತಿರ್ಮಾನಿಸಿದೆ. ಹೀಗಾಗಿ ಮಾಸ್ಕೋ ಭೇಟಿ ಸಂದರ್ಭದಲ್ಲಿ ಯಾವುದೇ ಚೀನಾ ನಾಯಕರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ ನಡೆಸುವುದಿಲ್ಲ. ಭಾರತದ ಈ ನಿರ್ಧಾರ ಮಹತ್ವದ್ದಾಗಿದೆ. ಯಾಕಂದ್ರೆ […]

ಚೀನಾ ಕಾಲ್ಕೆರಕೊಂಡು ನಿಂತಿರುವಾಗ.. ರಕ್ಷಣಾ ಸಚಿವ ರಾಜನಾಥ್‌ ರಷ್ಯಾಗೆ ಮಹತ್ವದ ಭೇಟಿ
ಸಾಧು ಶ್ರೀನಾಥ್​

Updated on: Jun 19, 2020 | 11:25 AM

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಾಗ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಷ್ಯಾಗೆ ಭೇಟಿ ನೀಡಲು ಮುಂದಾಗಿದ್ದಾರೆ. ಜೂನ್‌ 22ರಂದು ಮಾಸ್ಕೋಗೆ ತೆರಳಲಿರುವ ರಾಜನಾಥ್‌ ಸಿಂಗ್‌ ಅಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಆದ್ರೆ ಈ ಭೇಟಿ ವೇಳೆ ಚೀನಾದ ನಾಯಕರೊಂದಿಗೆ ಯಾವುದೇ ಚರ್ಚೆ ನಡೆಸದಿರಲು ಭಾರತ ತಿರ್ಮಾನಿಸಿದೆ. ಹೀಗಾಗಿ ಮಾಸ್ಕೋ ಭೇಟಿ ಸಂದರ್ಭದಲ್ಲಿ ಯಾವುದೇ ಚೀನಾ ನಾಯಕರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ ನಡೆಸುವುದಿಲ್ಲ.

ಭಾರತದ ಈ ನಿರ್ಧಾರ ಮಹತ್ವದ್ದಾಗಿದೆ. ಯಾಕಂದ್ರೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗ ಭಾರತ ಮತ್ತು ಚೀನಾಗಳೆರಡರ ಜತೆಯೂ ಆತ್ಮೀಯ ಸಂಬಂಧ ಹೊಂದಿರುವ ರಷ್ಯಾಗೆ ಭಾರತದ ರಕ್ಷಣಾ ಸಚಿವರ ಪ್ರವಾಸ ಹೆಚ್ಚು ಮಹತ್ವ ಪಡೆದಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us