AIIMS ದೆಹಲಿ ಸರ್ವರ್ ದಾಳಿ ನಡೆಸಿದ್ದು ಚೀನಾದ ಹ್ಯಾಕರ್, 5 ಸರ್ವರ್‌ಗಳ ಡೇಟಾ ಹಿಂಪಡೆಯಲಾಗಿದೆ: ವರದಿ
ಇ-ಹಾಸ್ಪಿಟಲ್ ಡೇಟಾವನ್ನು ಮರುಸ್ಥಾಪಿಸಲಾಗಿದೆ ಎಂದು ಎಐಐಎಂಎಸ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇ-ಹಾಸ್ಪಿಟಲ್ ಡೇಟಾವನ್ನು ಸರ್ವರ್‌ಗಳಲ್ಲಿ ಮರುಸ್ಥಾಪಿಸಲಾಗಿದೆ. ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟ್‌ವರ್ಕ್ ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಕಂಪ್ಯೂಟರ್ ಸರ್ವರ್‌ನ ಮೇಲೆ ಚೀನಾದ ಹ್ಯಾಕರ್‌ಗಳು (China Hacker) ದಾಳಿ ನಡೆಸಿದ್ದು, ಐದು ಸರ್ವರ್‌ಗಳಲ್ಲಿನ ಡೇಟಾವನ್ನು ಇದೀಗ ಯಶಸ್ವಿಯಾಗಿ ಹಿಂಪಡೆಯಲಾಗಿದೆ ಎಂದು ಸರ್ಕಾರದ ಮೂಲವು ಬುಧವಾರ ತಿಳಿಸಿದೆ. ಏಮ್ಸ್ ದೆಹಲಿ ಸರ್ವರ್ ಮೇಲೆ ಚೀನಾದವರು ದಾಳಿ ಮಾಡಿದ್ದು, ದಾಳಿಯು ಚೀನಾದಿಂದ ಹುಟ್ಟಿಕೊಂಡಿದೆ ಎಂದು ಎಫ್ಐಆರ್ ಹೇಳಿದೆ. 100 ಸರ್ವರ್‌ಗಳಲ್ಲಿ (40 ಭೌತಿಕ ಮತ್ತು 60 ವರ್ಚುವಲ್), ಐದು ಭೌತಿಕ ಸರ್ವರ್‌ಗಳನ್ನು ಹ್ಯಾಕರ್‌ಗಳು ಯಶಸ್ವಿಯಾಗಿ ನುಸುಳಿದ್ದಾರೆ. ಇಲ್ಲಿ ಹಾನಿ ಜಾಸ್ತಿ ಆಗಿದ್ದು, ಅದನ್ನೀಗ ಸರಿ ಮಾಡಲಾಗಿದೆ. ಐದು ಸರ್ವರ್‌ಗಳಲ್ಲಿನ ಡೇಟಾವನ್ನು ಇದೀಗ ಯಶಸ್ವಿಯಾಗಿ ಹಿಂಪಡೆಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಮೂಲ ತಿಳಿಸಿದೆ. AIIMS ದೆಹಲಿಯು ತನ್ನ ಸರ್ವರ್ ಹ್ಯಾಕ್ ಆಗಿರುವ ಬಗ್ಗೆ ನವೆಂಬರ್ 23 ರಂದು ಮೊದಲು ವರದಿ ಮಾಡಿತ್ತು. ಸರ್ವರ್‌ಗಳ ಭದ್ರತೆಗಳನ್ನು ನೋಡಿಕೊಳ್ಳಲು ನಿಯೋಜಿಸಲಾದ ಇಬ್ಬರು ವಿಶ್ಲೇಷಕರನ್ನು ಸೈಬರ್ ಭದ್ರತೆಯ ಉಲ್ಲಂಘನೆಗಾಗಿ ಅಮಾನತುಗೊಳಿಸಲಾಗಿದೆ.
ಇ-ಹಾಸ್ಪಿಟಲ್ ಡೇಟಾವನ್ನು ಮರುಸ್ಥಾಪಿಸಲಾಗಿದೆ ಎಂದು ಎಐಐಎಂಎಸ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇ-ಹಾಸ್ಪಿಟಲ್ ಡೇಟಾವನ್ನು ಸರ್ವರ್‌ಗಳಲ್ಲಿ ಮರುಸ್ಥಾಪಿಸಲಾಗಿದೆ. ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟ್‌ವರ್ಕ್ ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಡೇಟಾದ ಪ್ರಮಾಣ ಮತ್ತು ಆಸ್ಪತ್ರೆಯ ಸೇವೆಗಳಿಗೆ ಹೆಚ್ಚಿನ ಸಂಖ್ಯೆಯ ಸರ್ವರ್‌ಗಳು/ಕಂಪ್ಯೂಟರ್‌ಗಳಿಂದಾಗಿ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಸೈಬರ್ ಭದ್ರತೆಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
“ಹೊರರೋಗಿ, ಒಳರೋಗಿ, ಪ್ರಯೋಗಾಲಯಗಳು ಸೇರಿದಂತೆ ಎಲ್ಲಾ ಆಸ್ಪತ್ರೆ ಸೇವೆಗಳನ್ನು ಮ್ಯಾನುವಲ್ ಮೋಡ್‌ನಲ್ಲಿ (ಜನರೇ ನಿರ್ವಹಿಸುವುದು) ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ, ದೆಹಲಿಯ ಏಮ್ಸ್ನಲ್ಲಿನ ಕಂಪ್ಯೂಟರ್ ಸಿಸ್ಟಮ್ ಮೇಲಿನ ದಾಳಿಯ ಬಗ್ಗೆ ದೆಹಲಿ ಪೊಲೀಸರ ವಿಶೇಷ ಸೆಲ್ ತನಿಖೆಯನ್ನು ಪ್ರಾರಂಭಿಸಿತು. ಅಧಿಕೃತ ಮೂಲಗಳ ಪ್ರಕಾರ, ಮಾಲ್‌ವೇರ್ ದಾಳಿಯ ಮೂಲವನ್ನು ಗುರುತಿಸಲು ದೆಹಲಿಯ AIIMS ನ ಸೋಂಕಿತ ಸರ್ವರ್ ಅನ್ನು ಪರಿಶೀಲಿಸಲು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ (CFSL) ತಂಡವನ್ನು ಕಳುಹಿಸಲಾಗಿದೆ.
Published On - 7:23 pm, Wed, 14 December 22