AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ತಿಂಗಳಲ್ಲಿ ಕಾಣೆಯಾಗಿದ್ದ 63 ಮಕ್ಕಳನ್ನು ಹುಡುಕಿ ಹೆತ್ತವರಿಗೆ ನೆಮ್ಮದಿ ಕೊಟ್ಟ ಪೊಲೀಸಮ್ಮ

ಕಾಣೆಯಾದ ಮಕ್ಕಳನ್ನು ಹುಡುಕಿ ಮನೆಗೆ ಮರಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥಾ ಹಲವು ಸತ್ಕಾರ್ಯಗಳನ್ನು ಸೀಮಾ ಮಾಡಿದ್ದಾರೆ. ಹೆತ್ತವರ ಅಪರಿಮಿತ ಪ್ರೀತಿ, ನೆಮ್ಮದಿ ಮತ್ತೆ ಟಿಸಿಲೊಡೆಯುವಂತೆ ಮಾಡಿದ್ದಾರೆ.

3 ತಿಂಗಳಲ್ಲಿ ಕಾಣೆಯಾಗಿದ್ದ 63 ಮಕ್ಕಳನ್ನು ಹುಡುಕಿ ಹೆತ್ತವರಿಗೆ ನೆಮ್ಮದಿ ಕೊಟ್ಟ ಪೊಲೀಸಮ್ಮ
ಸೀಮಾ ಅವರನ್ನು ಅಭಿನಂದಿಸುತ್ತಿರುವ ಹಿರಿಯ ಅಧಿಕಾರಿ
Follow us
TV9 Web
| Updated By: ganapathi bhat

Updated on:Apr 05, 2022 | 1:11 PM

ದೆಹಲಿ: ಇಲ್ಲಿನ ಮಾನವ ಕಳ್ಳಸಾಗಾಣಿಕೆ ವಿರೋಧಿ ದಳ (Anti Human Trafficking Unit- AHTU) 2017ರಲ್ಲಿ ಕಾಣೆಯಾಗಿದ್ದ ವಿಶೇಷ ಚೇತನ ಅಪ್ರಾಪ್ತ ಬಾಲಕಿಯೋರ್ವಳನ್ನು ಕಂಡುಹಿಡಿಯಲು ವಿಫಲವಾದ ಬಳಿಕ, ದೆಹಲಿ ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಸೀಮಾ (34) ಎಂಬವರು ಸ್ವ ಆಸಕ್ತಿ ವಹಿಸಿ ಹುಡುಗಿಯನ್ನು ಹುಡುಕಿದ ಘಟನೆ ಕಳೆದ ತಿಂಗಳು ನಡೆದಿದೆ. ಅದರಿಂದ, ತಮ್ಮ ತನಿಖಾ ಚಾಕಚಕ್ಯತೆ ಹಾಗೂ ಪರಿಶ್ರಮಕ್ಕೆ ತಕ್ಕ ಫಲ ದೊರಕಿದಂತಾಗಿದೆ.

ಸೀಮಾ, ಹೀಗೆ ಕಾಣೆಯಾದ ಮಕ್ಕಳನ್ನು ಹುಡುಕಿ ಮನೆಗೆ ಮರಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥಾ ಹಲವು ಸತ್ಕಾರ್ಯಗಳನ್ನು ಸೀಮಾ ಮಾಡಿದ್ದಾರೆ. ಹೆತ್ತವರ ಅಪರಿಮಿತ ಪ್ರೀತಿ, ನೆಮ್ಮದಿ ಮತ್ತೆ ಟಿಸಿಲೊಡೆಯುವಂತೆ ಮಾಡಿದ್ದಾರೆ.

ಮುಖ್ಯ ಪೇದೆ ಸೀಮಾ, 2020 ಜುಲೈನಲ್ಲಿ ಮೆಟ್ರೋ ವಿಭಾಗಕ್ಕೆ ವರ್ಗಾವಣೆ ಹೊಂದಿದ್ದರು. ಆ ಬಳಿಕ, ಕಳೆದ ಮೂರು ತಿಂಗಳಲ್ಲಿ 63 ಮಂದಿ ಕಾಣೆಯಾದ ಮಕ್ಕಳನ್ನು ಹುಡುಕಿ, ಅವರೆಲ್ಲರನ್ನೂ ಮನೆಗೆ ಮರಳಿಸಿದ್ದಾರೆ. ತಮ್ಮ ದಿನನಿತ್ಯದ ಕೆಲಸಗಳ ಜೊತೆಗೆ, ಹೆಚ್ಚುವರಿಯಾಗಿ ಸೀಮಾ ಈ ಪುಣ್ಯಕಾರ್ಯ ಮಾಡಿದ್ದಾರೆ. ಜೋನಲ್ ಇಂಟೆಗ್ರೇಟೆಡ್ ಪೊಲೀಸ್ ನೆಟ್​ವರ್ಕ್ (ZIPNET) ಮೂಲಕ ಅವರು ಕಾಣೆಯಾದ ಮಕ್ಕಳ ವಿವರಗಳನ್ನು ಪಡೆದು, ಅಂಥ ಮಕ್ಕಳನ್ನು ಹುಡುಕಿದ್ದಾರೆ.

‘ನಾನು ಬಿಹಾರ, ಮೀರತ್, ಹರ್ಯಾಣ ಮತ್ತಿತರ ನಗರಗಳಿಗೆ ಪ್ರಯಾಣ ಮಾಡಿ, ಕಾಣೆಯಾಗಿದ್ದ ಮಕ್ಕಳನ್ನು ಹುಡುಕಿದ್ದೇನೆ. ಹೀಗೆ ಹುಡುಕಿದ ಒಟ್ಟು 63 ಮಕ್ಕಳಲ್ಲಿ, 16 ಮಕ್ಕಳು 8 ವರ್ಷಗಳ ಕೆಳಗಿನವರು, ಉಳಿದವರು 14 ವರ್ಷದೊಳಗಿನವರು’ ಎಂದು ಸೀಮಾ ತಿಳಿಸಿದ್ದಾರೆ.

ಇದು ಸುಲಭದ ಕೆಲಸವಾಗಿರಲಿಲ್ಲ ಹೀಗೆ ಕಾಣೆಯಾದ ಮಕ್ಕಳನ್ನು ಹುಡುಕುವುದು ಸುಲಭದ ಕೆಲಸವಾಗಿರಲಿಲ್ಲ. ತನ್ನ ಕೆಲಸದ ನಡುವೆ ಮಕ್ಕಳ ಹುಡುಕಾಟದ ತನಿಖೆ ಮಾಡುವುದು ಕಷ್ಟವಾಗಿತ್ತು. ಆದರೂ ZIPNET ಸಹಾಯ ಪಡೆದು ಸೀಮಾ ಮಕ್ಕಳನ್ನು ಹುಡುಕಿದ್ದಾರೆ. ಇದ್ಯಾವುದೂ ಸೀಮಾ ಅವರ ವಿಭಾಗದಲ್ಲಿ ದಾಖಲಾದ ಕೇಸ್​ಗಳಲ್ಲ. ಆದರೂ ಸೀಮಾ ಸ್ವ ಆಸಕ್ತಿಯಿಂದಲೇ ಇಂಥ ಕಾರ್ಯ ಕೈಗೊಂಡಿದ್ದಾರೆ.

ಕಾಣೆಯಾದ ಮಕ್ಕಳಲ್ಲಿ ಹಲವರು ಆಶ್ರಯ ತಾಣಗಳು ಅಥವಾ ಸ್ಲಂಗಳಲ್ಲಿ ಸಿಕ್ಕಿದ್ದಾರೆ. ಮನೆ ಮನೆಗೆ ತೆರಳಿ ಹುಡುಕಾಡಿ, ಇತರ ರಾಜ್ಯದ ಪೊಲೀಸ್ ಜೊತೆ ಸಹಕಾರ ಕೇಳಿ ಕೆಲಸ ಮಾಡಿದ ನಂತರ ಮಕ್ಕಳು ಸಿಕ್ಕಿರುವುದಿದೆ. ಕಾಣೆಯಾದ ಮಕ್ಕಳನ್ನು ಹುಡುಕಲು ಸಹಕರಿಸಿದ ಎಲ್ಲಾಹಿರಿಯ ಅಧಿಕಾರಿಗಳಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸೀಮಾ ಹೇಳಿದ್ದಾರೆ.

ಕಾಣೆಯಾದ ಮಕ್ಕಳನ್ನು ಹುಡುಕುವುದು ದೆಹಲಿ ಪೊಲೀಸರ ಆದ್ಯತೆಯಾಗಿದೆ. ತಮ್ಮ ದಿನನಿತ್ಯದ ಕೆಲಸದ ಜೊತೆಗೆ ಸೀಮಾ, ಹೆಚ್ಚುವರಿಯಾಗಿ ಈ ಆಸಕ್ತಿ ತೋರಿದಾಗ ನಾವು ಸಂಪೂರ್ಣ ಸಹಕಾರ ನೀಡಿ, ಪ್ರೋತ್ಸಾಹಿಸಿದ್ದೇವೆ ಎಂದು ದೆಹಲಿ ಮೆಟ್ರೋ ಡಿಸಿಪಿ ಜಿತೇಂದ್ರ ಮಾನಿ ತಿಳಿಸಿದ್ದಾರೆ.

ಸೀಮಾ ಇತರ ಪೊಲೀಸರಿಗೆ ಸ್ಫೂರ್ತಿಯಾಗಿದ್ದಾರೆ. ಒಟ್ಟಾರೆ ಮೆಟ್ರೋ ಯುನಿಟ್ ಸುಮಾರು 100 ಮಕ್ಕಳನ್ನು ಟ್ರೇಸ್ ಮಾಡಿದೆ. ಅದರಲ್ಲಿ ಸೀಮಾ ಅವರು ಹುಡುಕಿರುವ ಮಕ್ಕಳೂ ಸೇರಿದ್ದಾರೆ. ಅಂದರೆ, ಅರ್ಧಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಸೀಮಾ ಒಬ್ಬರೇ ಹುಡುಕಿದ್ದಾರೆ ಎಂದು ಜಿತೇಂದ್ರ ಮಾನಿ ಹೇಳಿದ್ದಾರೆ.

ಇದನ್ನೂ ಓದಿ: ನೀರೆಚ್ಚರದ ಬದುಕು | ನಾಡಿನ ಜಲಸುರಕ್ಷೆಗೆ ವರದಾನವಾಗಬಲ್ಲ ಇಂಗುಬಾವಿಗಳು

ಭಾರತ ಪಾಕ್ ಒಳ್ಳೆಯ ಗೆಳೆಯರಾಗಬೇಕು; ಕನಸು ಬಿಚ್ಚಿಟ್ಟ ಮಲಾಲಾ ಯೂಸುಫ್

Published On - 10:16 pm, Fri, 26 March 21

ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್