ದೆಹಲಿ: ನಿಲ್ಲಿಸಿದ್ದ ಕಾರಿನೊಳಗಿತ್ತು ವ್ಯಕ್ತಿಯ ರಕ್ತಸಿಕ್ತವಾದ ಶವ

ದೆಹಲಿಯಲ್ಲಿ ಪಾರ್ಕಿಂಗ್​ ಮಾಡಲಾಗಿದ್ದ ಕಾರಿನಲ್ಲಿ ಶವವೊಂದು ಪತ್ತೆಯಾಗಿದೆ. ಫೋರ್ಡ್​ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಸಿಕ್ಕಿದೆ. ಸದ್ಯ ಪೊಲೀಸರು ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂದು ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

ದೆಹಲಿ: ನಿಲ್ಲಿಸಿದ್ದ ಕಾರಿನೊಳಗಿತ್ತು ವ್ಯಕ್ತಿಯ ರಕ್ತಸಿಕ್ತವಾದ ಶವ
ಕಾರು
Image Credit source: India Today

Updated on: Jun 06, 2024 | 2:45 PM

ದೆಹಲಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತರನ್ನು ಮಯೂರ್ ವಿಹಾರ್ ನಿವಾಸಿ ಧ್ರುವ ಎಂದು ಗುರುತಿಸಲಾಗಿದೆ. ಮೃತರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತ ವ್ಯಕ್ತಿ ಲಜಪತ್ ನಗರದಲ್ಲಿರುವ ದಯಾನಂದ ಕಾಲೋನಿ ನಿವಾಸಿ. ಗುರುಗ್ರಾಮದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೃತರಿಗೆ 7 ವರ್ಷದ ಮಗನಿದ್ದಾನೆ.

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ದ್ವಾನಿಯಲ್ಲಿ ಕಾರು ಅಪಘಾತ
ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿ ಮ್ಯಾಕ್ಸ್ ವಾಹನವು ಆಳವಾದ ಕಂದರಕ್ಕೆ ಬಿದ್ದ ಪರಿಣಾಮ ಚಾಲಕ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ತಾಯಿ, ಮಗಳು ಮತ್ತು ತಂದೆ ಕೂಡ ಇದ್ದರು.

ಹಲ್ದ್ವಾನಿಯ ಪುಟ್ಪುರಿಗೆ ಹೋಗುತ್ತಿದ್ದ ಮ್ಯಾಕ್ಸ್ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕಾರಿನಲ್ಲಿ 10 ಮಂದಿ ಇದ್ದರು.

ಬುಧವಾರ ಸಂಜೆ ಓಖಲ್ಕಂಡದ ಪ್ಯಾಟ್ಲೋಟ್ ಮೋಟರ್‌ವೇಗಿಂತ ಎರಡು ಕಿಮೀ ಮೊದಲು ಅನಾರ್ಬನ್ ಬಳಿ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದಿದೆ.

ಮತ್ತಷ್ಟು ಓದಿ: Uttar Pradesh: ಈಜುಕೊಳದ​ ಬಳಿ ಮಕ್ಕಳ ಎದುರೇ ಗುಂಡಿಕ್ಕಿ ತಂದೆಯ ಹತ್ಯೆ

ಇದು ನೈನಿತಾಲ್ ನಗರದಿಂದ ಸುಮಾರು 80 ಕಿಮೀ ದೂರದಲ್ಲಿರುವ ಪ್ಯಾಟ್ಲೋಟ್‌ಗೆ ಎರಡು ಕಿಮೀ ಮೊದಲು ಅನಾರ್ಬನ್ ಬಳಿ ಸಂಭವಿಸಿದೆ. ಅಪಘಾತದಲ್ಲಿ ಚಾಲಕ ಸೇರಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us