ಮಜ್ನು ಕಾ ಟೀಲಾದಲ್ಲಿ ತೆರವು ಕಾರ್ಯಾಚರಣೆ; ಕಟ್ಟಡಗಳನ್ನು ಕೆಡವಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ

ಡಿಡಿಎ ಜಾಗದಲ್ಲಿ ನಿರ್ಮಿಸಿರುವ ಗುರುದ್ವಾರದ ಬಳಿಯ ಅತಿಕ್ರಮಣಗಳನ್ನು ಕೆಡವುವ ಕಾರ್ಯವನ್ನು ನಡೆಸುವುದಾಗಿ ಡಿಡಿಎ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸೇರಿದ ರಚನೆಯನ್ನು ಹೊರತುಪಡಿಸಿ ಎಲ್ಲಾ ತಾತ್ಕಾಲಿಕ ಕಟ್ಟಡಗಳನ್ನು ಪ್ರಾಧಿಕಾರವು ಕೆಡವಲಿದೆ.

ಮಜ್ನು ಕಾ ಟೀಲಾದಲ್ಲಿ ತೆರವು ಕಾರ್ಯಾಚರಣೆ; ಕಟ್ಟಡಗಳನ್ನು ಕೆಡವಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ
ತೆರವು ಕಾರ್ಯಾಚರಣೆ
Follow us
ರಶ್ಮಿ ಕಲ್ಲಕಟ್ಟ
|

Updated on:Jul 13, 2024 | 3:28 PM

ದೆಹಲಿ ಜುಲೈ 13: ದೆಹಲಿ ಅಭಿವೃದ್ಧಿ ಪ್ರಾಧಿಕಾರವು (DDA) ಜುಲೈ 13 ಮತ್ತು 14 ರಂದು ಗುರುದ್ವಾರದ (Gurdwara) ದಕ್ಷಿಣದ ಬಳಿಯಿರುವ ಯಮುನಾ  ಪ್ರವಾಹ ಬಯಲಿನ ಅತಿಕ್ರಮಣದ ವಿರುದ್ಧ ಮಜ್ನು ಕಾ ಟೀಲಾ (Majnu Ka Tila) ಪ್ರದೇಶದಲ್ಲಿ ಕಟ್ಟಡಗಳನ್ನು ಕೆಡವಲಿದೆ. ಬಡಾವಣೆಯ ನಿವಾಸಿಗಳು ಗುರುವಾರ ಈ ಬಗ್ಗೆ ನೋಟಿಸ್ ಸ್ವೀಕರಿಸಿದ್ದು, ಕೊನೆ ಕ್ಷಣದಲ್ಲಿ ತೆರವು ಮಾಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಂಚಾರದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭದ್ರತೆ ಒದಗಿಸುವಂತೆ ಸ್ಥಳೀಯ ಪೊಲೀಸರಿಗೆ ಮನವಿ ಮಾಡಲಾಗಿದೆ. ನೋಟಿಸ್ ಪ್ರಕಾರ ಉತ್ತರ ದೆಹಲಿಯ ಮಜ್ನು ಕಾ ಟೀಲಾ ಗುರುದ್ವಾರದ ಬಳಿ ಇರುವ ತಾತ್ಕಾಲಿಕ ಶೆಲ್ಟರ್‌ಗಳನ್ನು ತೆಗೆದುಹಾಕಲು ಅತಿಕ್ರಮಣ ತೆರವು ಅಭಿಯಾನವನ್ನು ನಡೆಸಲಾಗುತ್ತಿದೆ.

ಈ ಪ್ರದೇಶವು ದಶಕಗಳಿಂದ ಭಾರತದಲ್ಲಿ ಆಶ್ರಯ ಪಡೆಯುವ ಪಾಕಿಸ್ತಾನಿ ಹಿಂದೂಗಳ ನಿವಾಸವಾಗಿದೆ. ಆದಾಗ್ಯೂ, ಜುಗ್ಗಿ (ಮಣ್ಣಿನಿಂದ ನಿರ್ಮಿಸಿದ,ಶೀಟ್ ಛಾವಣಿ ಇರುವ ಪುಟ್ಟ ಮನೆ) ಕ್ಲಸ್ಟರ್ ವಿರುದ್ಧ ಕೆಡವಲು ಕ್ರಮ ಕೈಗೊಳ್ಳಲು ಡಿಡಿಎಯಿಂದ ವಿನಂತಿಯನ್ನು ಸ್ವೀಕರಿಸಲಾಗಿದೆ ಎಂದು ದೆಹಲಿ ಪೊಲೀಸರು ಈ ವಾರ ದೃಢಪಡಿಸಿದರು.

ಡಿಡಿಎ ಮಜ್ನು ಕಾ ಟೀಲಾದಲ್ಲಿ ಜುಗ್ಗಿಗಳನ್ನು ಕೆಡವುತ್ತಿರುವುದೇಕೆ?

ಡಿಡಿಎ ಜಾಗದಲ್ಲಿ ನಿರ್ಮಿಸಿರುವ ಗುರುದ್ವಾರದ ಬಳಿಯ ಅತಿಕ್ರಮಣಗಳನ್ನು ಕೆಡವುವ ಕಾರ್ಯವನ್ನು ನಡೆಸುವುದಾಗಿ ಡಿಡಿಎ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸೇರಿದ ರಚನೆಯನ್ನು ಹೊರತುಪಡಿಸಿ ಎಲ್ಲಾ ತಾತ್ಕಾಲಿಕ ಕಟ್ಟಡಗಳನ್ನು ಪ್ರಾಧಿಕಾರವು ಕೆಡವಲಿದೆ.

ಪಾಕಿಸ್ತಾನಿ ಹಿಂದೂ ನಿರಾಶ್ರಿತರು ತಮ್ಮ ತಾತ್ಕಾಲಿಕ ಆಶ್ರಯವನ್ನು ಸ್ಥಾಪಿಸಿರುವ ಯಮುನಾ ಪ್ರವಾಹ ಬಯಲು ವಲಯದಲ್ಲಿ ನೆಲಸಮ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಡಿಡಿಎ ತನ್ನ ಸೂಚನೆಯಲ್ಲಿ ತಿಳಿಸಿದೆ. ನೋಟೀಸ್‌ನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಏಪ್ರಿಲ್ 3 ರ ಆದೇಶ ಮತ್ತು ದೆಹಲಿ ಹೈಕೋರ್ಟ್ ಮಾರ್ಚ್ 12 ರ ಆದೇಶವನ್ನು ಉಲ್ಲೇಖಿಸಿದೆ.

ಈ ವರ್ಷದ ಆರಂಭದಲ್ಲಿ ಎಲ್ಲಾ ಅತಿಕ್ರಮಣಗಳು ಮತ್ತು ಅಕ್ರಮ ನಿರ್ಮಾಣಗಳನ್ನು ತೆಗೆದುಹಾಕಲು ನ್ಯಾಯಾಲಯದ ನಿರ್ದೇಶನದ ನಂತರ ನೆಲಸಮ ನೋಟಿಸ್ ನೀಡಲಾಯಿತು.

2019 ರ ಕಾರ್ಯಾಚರಣೆ ಅರ್ಜಿಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಜನವರಿ 29 ರ ದಿನಾಂಕದ ಆದೇಶವನ್ನು ಅಂಗೀಕರಿಸಿದೆ ಎಂದು ಡಿಡಿಎಪರ ವಕೀಲರು ಹೇಳಿದ್ದಾರೆ. ಇದರಲ್ಲಿ ಮಜ್ನು ಕಾ ಟೀಲಾದಲ್ಲಿ ಯಮುನಾ ನದಿ ಬೆಲ್ಟ್‌ನ ಎಲ್ಲಾ ಅತಿಕ್ರಮಣವನ್ನು ಸೂಚಿಸಲಾಗಿದೆ ಪ್ರಾಧಿಕಾರದ ಪ್ರಕಾರ, ಯಮುನಾ ಪ್ರವಾಹ ಬಯಲು ವಲಯದಲ್ಲಿ ತಾತ್ಕಾಲಿಕ ಕಟ್ಟಡಗಳ ನಿರ್ಮಾಣವನ್ನು ಕಾನೂನುಬಾಹಿರವಾಗಿ ಮಾಡಲಾಗಿದೆ. ನದಿಯಿಂದ ನೀರಿನ ಮಟ್ಟ ಹೆಚ್ಚಾದರೆ ಇವು ಸೂಕ್ಷ್ಮ ಪ್ರದೇಶವಾಗಿದೆ.

ಇದನ್ನೂ ಓದಿ: 7 ರಾಜ್ಯಗಳಲ್ಲಿ ಉಪಚುನಾವಣೆ: 6 ಕ್ಷೇತ್ರದಲ್ಲಿ ಗೆಲುವು, 4 ರಲ್ಲಿ ಮುನ್ನಡೆ ಸಾಧಿಸಿದ ಇಂಡಿಯಾ ಬಣ

ಆದರೆ, ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಜಾಗ ಖಾಲಿ ಮಾಡಲು ಸಾಕಷ್ಟು ಸಮಯ ನೀಡಿಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ನಿರಾಶ್ರಿತರು ನ್ಯಾಯಾಲಯಕ್ಕೆ ತಿಳಿಸಿದ್ದು, ತಾವು ಹಲವು ವರ್ಷಗಳಿಂದ ಮಜ್ನು ಕಾ ಟೀಲಾದಲ್ಲಿ ವಾಸಿಸುತ್ತಿದ್ದು, ಅಧಿಕಾರಿಗಳು ಮೂಲ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಅವರ ಮಕ್ಕಳು ಹತ್ತಿರದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು  ಅವರ ಪರೀಕ್ಷೆಗಳು ನಡೆಯುತ್ತಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Sat, 13 July 24

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು