ಅನಿಲ್ ಅಂಬಾನಿ ಒಡೆತನದ ಕಂಪನಿಗಳ ಖಾತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿ: ಎಸ್​ಬಿಐಗೆ ದೆಹಲಿ ಹೈಕೋರ್ಟ್ ನಿರ್ದೇಶನ

ವಂಚನೆಯ ಖಾತೆಗಳು ಎಂದುವ ಬ್ಯಾಂಕ್ ಗಳು ಘೋಷಿಸಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂತ್ ಹೊರಡಿಸಿದ 2016ರ ಸುತ್ತೋಲೆಯನ್ನು ಪ್ರಶ್ನಿಸಿ ರಿಲಯನ್ಸ್​ನ ಮೂರು ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ನೈಸರ್ಗಿಕ ನ್ಯಾಯದ ನಿಯಮ ಪ್ರಕಾರ ಖಾತೆದಾರರಿಗೆ ಯಾವುದೇ ಪೂರ್ವ ಸೂಚನೆ ಅಥವಾ ಸಂವಹನವನ್ನು ನೀಡದೆ ಖಾತೆಯನ್ನು ವಂಚನೆ ಎಂದು ಘೋಷಿಸಲು ಸುತ್ತೋಲೆ ಬ್ಯಾಂಕುಗಳಿಗೆ ಅವಕಾಶ ನೀಡುತ್ತದೆ ಎಂದು ಅರ್ಜಿಯಲ್ಲಿ ಹೇಳಿದೆ.

ಅನಿಲ್ ಅಂಬಾನಿ ಒಡೆತನದ ಕಂಪನಿಗಳ ಖಾತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿ: ಎಸ್​ಬಿಐಗೆ ದೆಹಲಿ ಹೈಕೋರ್ಟ್ ನಿರ್ದೇಶನ
ಅನಿಲ್ ಅಂಬಾನಿ
ರಶ್ಮಿ ಕಲ್ಲಕಟ್ಟ Edited By:

Updated on: Oct 09, 2026 | 3:51 PM

ನವದೆಹಲಿ: ಅನಿಲ್ ಅಂಬಾನಿ ಅವರ ಆರ್ ಕಾಂ, ರಿಲಯನ್ಸ್ ಟೆಲಿಕಾಂ ಮತ್ತು ರಿಲಯನ್ಸ್ ಇನ್​​ಫ್ರಾಟೆಲ್ ಕಂಪನಿಯ ಬ್ಯಾಂಕ್ ಖಾತೆಗಳನ್ನು ವಂಚನೆಯ ಖಾತೆ ಪಟ್ಟಿಗೆ ಸೇರಿಸಿರುವ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಖಾತೆಗಳನ್ನು ಯಥಾಸ್ಥಿತಿಯಲ್ಲಿಡುವಂತೆ ಎಸ್​ಬಿಐಗೆ ಹೇಳಿದೆ.

ವಂಚನೆಯ ಖಾತೆಗಳು ಎಂದು ಬ್ಯಾಂಕ್​ಗಳು ಘೋಷಿಸಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ 2016ರ ಸುತ್ತೋಲೆಯನ್ನು ಪ್ರಶ್ನಿಸಿ ರಿಲಯನ್ಸ್​ನ ಮೂರು ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು .

ನೈಸರ್ಗಿಕ ನ್ಯಾಯದ ನಿಯಮ ಪ್ರಕಾರ ಖಾತೆದಾರರಿಗೆ ಯಾವುದೇ ಪೂರ್ವ ಸೂಚನೆ ಅಥವಾ ಸಂವಹನವನ್ನು ನೀಡದೆ ಖಾತೆಯನ್ನು ವಂಚನೆ ಎಂದು ಘೋಷಿಸಲು ಸುತ್ತೋಲೆ ಬ್ಯಾಂಕುಗಳಿಗೆ ಅವಕಾಶ ನೀಡುತ್ತದೆ ಎಂದು ಅರ್ಜಿಯಲ್ಲಿ ಹೇಳಿದೆ.

2019ರಿಂದ ಸುತ್ತೋಲೆಯ ವಿರುದ್ಧ ಇದೇ ರೀತಿಯ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಆ ವಿಷಯಗಳಲ್ಲಿ ಅರ್ಜಿದಾರರನ್ನು ಹೈಕೋರ್ಟ್ ಕಾಪಾಡಿದೆ ಎಂದು ರಿಲಯನ್ಸ್ ಪರ ವಾದಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಇದೇ ರೀತಿಯ ವಿಷಯಗಳಲ್ಲಿ ಈ ಹಿಂದೆ ಹೈಕೋರ್ಟ್ ಹೊರಡಿಸಿದ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು, ಮೂರು ಕಂಪನಿಗಳ ಖಾತೆಗಳಿಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನ್ಯಾಯಮೂರ್ತಿ ಪ್ರತೀಕ್ ಜಲನ್ ನಿರ್ದೇಶನ ನೀಡಿದ್ದಾರೆ.

ಆರ್‌ಬಿಐ ಮತ್ತು ಮೂರು ಕಂಪನಿಗಳು ಸೇರಿದಂತೆ ಪ್ರತಿವಾದಿಗಳು ಜನವರಿ 11 ರೊಳಗೆ ಅರ್ಜಿಗೆ ತಮ್ಮ ಉತ್ತರಗಳನ್ನು ಸಲ್ಲಿಸಬಹುದು, ಜನವರಿ 13 ರಂದು ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ.

ಹಿಂದಿನ ನಿರ್ದೇಶಕರು ಮತ್ತು ಮೂರು ಕಂಪನಿಗಳ ಖಾತೆಗಳನ್ನು ವಂಚನೆ ಖಾತೆಗಳೆಂದು ಘೋಷಿಸುವ ಆಕ್ಷೇಪಾರ್ಹ ಕ್ರಮದಿಂದ ಸ್ವತಂತ್ರವಾಗಿ ಮೂರು ನಿರ್ದೇಶಕರ ವಿರುದ್ಧ ತನಿಖೆ ಅಥವಾ ದೂರು ದಾಖಲಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಎಸ್‌ಬಿಐ ಮತ್ತು ಆರ್‌ಬಿಐಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

 

 

Published On - 4:26 pm, Wed, 6 January 21

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us