ಏರ್ ಇಂಡಿಯಾದ ಬೋಯಿಂಗ್ ವಿಮಾನದಲ್ಲಿ ಸುರಕ್ಷತಾ ಕ್ರಮ ಹೆಚ್ಚಿಸಲು ಡಿಜಿಸಿಎ ಆದೇಶ

ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್​ಲೈನರ್ ವಿಮಾನಗಳ ಕಠಿಣ ಸುರಕ್ಷತಾ ಪರಿಶೀಲನೆಗೆ ಡಿಜಿಸಿಎ ಆದೇಶಿಸಿದೆ. ಕಳೆದ 15 ದಿನಗಳಲ್ಲಿ ಹಲವಾರು ಡ್ರೀಮ್‌ಲೈನರ್ ವಿಮಾನಗಳನ್ನು ಒಳಗೊಂಡಂತೆ ಏರ್ ಇಂಡಿಯಾದ ಇತರೆ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈ ಪುನರಾವರ್ತಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ನಾಗರಿಕ ವಾಯುಯಾನ ನಿರ್ದೇಶನಾಲಯ ಸುರಕ್ಷತಾ ಪರಿಶೀಲನೆಯನ್ನು ಹೆಚ್ಚಿಸಲು ಕೆಲವು ಕ್ರಮಗಳನ್ನು ಕಡ್ಡಾಯಗೊಳಿಸಿದೆ.

ಏರ್ ಇಂಡಿಯಾದ ಬೋಯಿಂಗ್ ವಿಮಾನದಲ್ಲಿ ಸುರಕ್ಷತಾ ಕ್ರಮ ಹೆಚ್ಚಿಸಲು ಡಿಜಿಸಿಎ ಆದೇಶ
Air India

Updated on: Jun 13, 2025 | 8:08 PM

ನವದೆಹಲಿ, ಜೂನ್ 13: ಗುಜರಾತ್​ನ ಅಹಮದಾಬಾದ್​​ನಲ್ಲಿ (Ahmedabad Plane Crash) ನಡೆದ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಸೇರಿ ಸುತ್ತಮುತ್ತಲಿನ ಹಲವು ಜನರು ಕೂಡ ಸಾವನ್ನಪ್ಪಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ಇತ್ತೀಚಿನ ದಿನಗಳಲ್ಲಿ ಪುನರಾವರ್ತಿತ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂದು (ಜೂನ್ 13) ಏರ್ ಇಂಡಿಯಾದ ಬೋಯಿಂಗ್ 787-8 ಮತ್ತು 787-9 ವಿಮಾನಗಳಲ್ಲಿ ಹೆಚ್ಚಿನ ಸುರಕ್ಷತಾ ಪರಿಶೀಲನೆಗಳಿಗಾಗಿ ಕಠಿಣ ನಿರ್ದೇಶನವನ್ನು ಹೊರಡಿಸಿದೆ. ಈ ಹೊಸ ಪ್ರೋಟೋಕಾಲ್ ಭಾನುವಾರ (ಜೂನ್ 15) ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.

ಹೊಸ ನಿಯಮದ ಪ್ರಕಾರ, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾದ ಪ್ರತಿ ವಿಮಾನಕ್ಕೂ ಕಡ್ಡಾಯ ಪೂರ್ವ-ನಿರ್ಗಮನ ತಪಾಸಣೆ ಮಾಡಬೇಕು. ಏರ್ ಇಂಡಿಯಾ ನಿರ್ವಹಿಸುವ ಪ್ರತಿ ಬೋಯಿಂಗ್ 787-8/9 ಟೇಕ್ ಆಫ್ ಆಗುವ ಮೊದಲು ಕಡ್ಡಾಯ ಸುರಕ್ಷತಾ ಪರಿಶೀಲನೆಗೆ ಒಳಗಾಗಬೇಕು. ಏರ್ ಇಂಡಿಯಾ ಸಂಸ್ಥೆಯಲ್ಲಿ 26 ಬೋಯಿಂಗ್ 787 ವಿಮಾನಗಳಿವೆ.

ಇದನ್ನೂ ಓದಿ
ಭಾರತವನ್ನು ಬೆಚ್ಚಿ ಬೀಳಿಸಿದ 8 ಭಯಾನಕ ವಿಮಾನ ದುರಂತಗಳಿವು
ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ವಿಮಾನ ಪತನ; 241 ಪ್ರಯಾಣಿಕರ ಸಾವು
ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!
ನಾಳೆ ಅಹಮದಾಬಾದ್​​ಗೆ ಮೋದಿ ಭೇಟಿ; ಭಾರತಕ್ಕೆ ಸಹಾಯಹಸ್ತ ಚಾಚಿದ ಟ್ರಂಪ್

ಇದನ್ನೂ ಓದಿ: Plane Crash: ಕೊನೆಗೂ ಸಿಕ್ಕಿತು ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಡಿವಿಆರ್​; ಇದರಿಂದ ಏನು ಪ್ರಯೋಜನ?


ಈ ಬೋಯಿಂಗ್ ವಿಮಾಣಗಳಲ್ಲಿ ಇಂಧನ ನಿಯತಾಂಕ ಮೇಲ್ವಿಚಾರಣೆ ಮತ್ತು ಎಲ್ಲಾ ಸಂಬಂಧಿತ ವ್ಯವಸ್ಥೆಗಳ ಪರಿಶೀಲನೆ ಮಾಡಬೇಕು. ಕ್ಯಾಬಿನ್ ಏರ್ ಕಂಪ್ರೆಸರ್ ತಪಾಸಣೆ, ಅದಕ್ಕೆ ಸಂಬಂಧಿತ ಉಪವ್ಯವಸ್ಥೆಗಳೊಂದಿಗೆ ಎಲೆಕ್ಟ್ರಾನಿಕ್ ಎಂಜಿನ್ ನಿಯಂತ್ರಣ ವ್ಯವಸ್ಥೆಯ ಪರೀಕ್ಷೆ ಮಾಡಬೇಕು. ಎಂಜಿನ್ ಇಂಧನ-ಚಾಲಿತ ಆಕ್ಟಿವೇಟರ್ ಮತ್ತು ತೈಲ ವ್ಯವಸ್ಥೆಯ ಮೌಲ್ಯಮಾಪನದ ಕಾರ್ಯಾಚರಣೆಯ ಪರೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ. ಈ ಹೊಸ ನಿಯಮ ಜೂನ್ 15ರಿಂದ ಜಾರಿಗೆ ಬರಲಿದೆ.

ಇದನ್ನೂ ಓದಿ: ಅಪಘಾತ ನಡೆದ ಹಾಸ್ಟೆಲ್ ಮೇಲ್ಭಾಗದಲ್ಲಿ ವಿಮಾನದ 1 ಬ್ಲಾಕ್ ಬಾಕ್ಸ್ ಪತ್ತೆ; ಏನಿದರ ಮಹತ್ವ?

ಹೆಚ್ಚುವರಿ ತಪಾಸಣೆಗಳ ಮಾಹಿತಿ:

ವಿಮಾನ ನಿಯಂತ್ರಣ ವ್ಯವಸ್ಥೆಯ ಪರಿಶೀಲನೆ: ಸಾರಿಗೆ ತಪಾಸಣೆ ಪರಿಶೀಲನಾಪಟ್ಟಿಗೆ ಹೊಸ ಕಡ್ಡಾಯ ಸೇರ್ಪಡೆ. ಮುಂದಿನ ಸೂಚನೆ ಬರುವವರೆಗೆ ಇದು ಜಾರಿಯಲ್ಲಿರುತ್ತದೆ.

ವಿದ್ಯುತ್ ಭರವಸೆ ಪರಿಶೀಲನೆ: ಏರ್ ಇಂಡಿಯಾದ ಫ್ಲೀಟ್‌ನಲ್ಲಿರುವ ಎಲ್ಲಾ ಬೋಯಿಂಗ್ ಡ್ರೀಮ್‌ಲೈನರ್‌ಗಳು ಮುಂದಿನ ಎರಡು ವಾರಗಳಲ್ಲಿ ಈ ಪರೀಕ್ಷೆಗೆ ಒಳಗಾಗಬೇಕು.

ಕಳೆದ 15 ದಿನಗಳಲ್ಲಿ ಹಲವಾರು ಡ್ರೀಮ್‌ಲೈನರ್ ವಿಮಾನಗಳಲ್ಲಿ ವರದಿಯಾದ ಬಹು ತಾಂತ್ರಿಕ ದೋಷಗಳನ್ನು ಅನುಸರಿಸಿ ಡಿಜಿಸಿಎ ಈ ನಿರ್ಧಾರ ತೆಗೆದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ