ಉತ್ತರಾಖಂಡದ ಜಗನ್ನಾಥ ದೇಗುಲದ ಅಭಿವೃದ್ಧಿ ಬಗ್ಗೆ ಸಿಎಂ ಪುಷ್ಕರ್ ಧಾಮಿಯೊಂದಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಾತುಕತೆ

 ಸಂವಾದದ ಬಗ್ಗೆ ಟ್ವೀಟ್  ಮಾಡಿದ ಧರ್ಮೇಂದ್ರ ಪ್ರಧಾನ್, ಉತ್ತರಕಾಶಿಯ ಮನೋಹರವಾದ ಪರ್ವತಗಳಲ್ಲಿ ಮಹಾಪ್ರಭು ಜಗನ್ನಾಥ ಜೀ ದೇವಾಲಯದ ಭವ್ಯತೆಯನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಧಾಮಿ ಜತೆ ಮಾತುಕತೆ ನಡೆಸಿದ್ದೇನೆ.

ಉತ್ತರಾಖಂಡದ ಜಗನ್ನಾಥ ದೇಗುಲದ ಅಭಿವೃದ್ಧಿ ಬಗ್ಗೆ ಸಿಎಂ ಪುಷ್ಕರ್ ಧಾಮಿಯೊಂದಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಾತುಕತೆ
ಉತ್ತರಕಾಶಿಯಲ್ಲಿರುವ ದೇಗುಲ
Follow us
ರಶ್ಮಿ ಕಲ್ಲಕಟ್ಟ
|

Updated on: Jul 10, 2023 | 8:18 PM

ಭುವನೇಶ್ವರ: ಉತ್ತರಕಾಶಿ ಶ್ರೀ ಜಗನ್ನಾಥ ದೇವಾಲಯವನ್ನು (Uttarakashi Sri Jagannath Temple) ಇನ್ನಷ್ಟು ಚಂದಗಾಣಿಸುವ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್  (Dharmendra Pradhan) ಸೋಮವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸುಂದರವಾದ ಹಳ್ಳಿಗಳ ನಡುವೆ ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರುವ ದೇಗುಲದಲ್ಲಿ ಧಾರ್ಮಿಕ ವಿಧಿಗಳನ್ನು ಸುಗಮವಾಗಿ ನಡೆಸುವ ಬಗ್ಗೆಯೂ ಸಚಿವರು ಚರ್ಚಿಸಿದ್ದಾರೆ.ಮಹಾಪ್ರಭು ಜಗನ್ನಾಥನ ದರ್ಶನಕ್ಕಾಗಿ ಕುಟುಂಬ ಸಮೇತ ಒಡಿಶಾಗೆ ಭೇಟಿ ನೀಡುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಹ್ವಾನಿಸಿದ್ದಾರೆ.

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಸಾಲ್ಡ್ ಗ್ರಾಮದ ಜಗನ್ನಾಥ ದೇವಾಲಯದಲ್ಲಿರುವ ಪುರಾತನ ಜಗನ್ನಾಥ ದೇವಾಲಯವನ್ನು  ಅಭಿವೃದ್ಧಿಪಡಿಸಲಾಗುವುದು. ಕೇಂದ್ರ ಶಿಕ್ಷಣ ಸಚಿವರು ಸೋಮವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರೊಂದಿಗೆ ವಿಡಿಯೊ ಸಂವಾದ ವೇಳೆ ಈ ದೇವಾಲಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಒಡಿಶಾ ನಟಿಯರಾದ ಸಬ್ಯಸಾಚಿ ಮತ್ತು ಅರ್ಚಿತಾ ಅವರಿಂದ ಈ ದೇವಾಲಯದ ಬಗ್ಗೆ ನನಗೆ ತಿಳಿಯಿತು ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಒಂದು ವರ್ಷದ ಹಿಂದೆ, ಒರಿಸ್ಸಾದ ವ್ಯಕ್ತಿ ಜನಾರ್ದನ್ ಮೊಹಾಪಾತ್ರ ಡೆಹ್ರಾಡೂನ್‌ಗೆ ಹೋಗಿದ್ದರು. ಅಲ್ಲಿ ಅವರ ಮಗಳ ಅಡ್ಮಿಷನ್ ಮಾಡಬೇಕಿತ್ತು. ಈ ಸಮಯದಲ್ಲಿ ಅವರು ಜಗನ್ನಾಥ ದೇವಾಲಯವನ್ನು ಹುಡುಕಿದ್ದು, ಅವರು ಉತ್ತರಕಾಶಿಯ 12 ನೇ ಶತಮಾನದ ಜಗನ್ನಾಥ ದೇವಾಲಯಕ್ಕೆ ಹೋದರು. ಅವರು ಈ ಬಗ್ಗೆ ಸಬ್ಯಸಾಚಿ ಮತ್ತು ಅರ್ಚಿತಾ ಅವರಿಗೆ ಹೇಳಿದ್ದಾರೆ. ಅವರು ಈ ಬಗ್ಗೆ ಟ್ವೀಟ್ ಮಾಡಿದಾಗ ಅದು ನನ್ನ ಗಮನ ಸೆಳೆಯಿತು ಎಂದು ಪ್ರಧಾನ್ ಹೇಳಿದ್ದಾರೆ.

ಸಂವಾದದ ಬಗ್ಗೆ ಟ್ವೀಟ್  ಮಾಡಿದ ಧರ್ಮೇಂದ್ರ ಪ್ರಧಾನ್, ಉತ್ತರಕಾಶಿಯ ಮನೋಹರವಾದ ಪರ್ವತಗಳಲ್ಲಿ ಮಹಾಪ್ರಭು ಜಗನ್ನಾಥ ಜೀ ದೇವಾಲಯದ ಭವ್ಯತೆಯನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಧಾಮಿ ಜತೆ ಮಾತುಕತೆ ನಡೆಸಿದ್ದೇನೆ. ಜಗನ್ನಾಥ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ದೇವಾಲಯವನ್ನು ಭವ್ಯವಾದ ಯಾತ್ರಾ ಸ್ಥಳವಾಗಿ ಸ್ಥಾಪಿಸಲು ಜಗನ್ನಾಥ ಭಕ್ತರಾದ ನಮ್ಮೆಲ್ಲರ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳು.

ಇದನ್ನೂ ಓದಿ: ಹಿಮಾಚಲ ಪ್ರದೇಶದ ಸಿಎಂಗೆ ದೂರವಾಣಿ ಕರೆ ಮಾಡಿ ಪ್ರವಾಹ ಪೀಡಿತ ರಾಜ್ಯದ ಸ್ಥಿತಿಗತಿ ವಿಚಾರಿಸಿದ ಪ್ರಧಾನಿ ಮೋದಿ

12 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಸಾಲ್ಡ್ ಗ್ರಾಮದಲ್ಲಿ ಈ ದೇವಾಲಯವನ್ನು ಸ್ಥಾಪಿಸಿದರು ಎಂದು ಸ್ಥಳೀಯರು ನಂಬುತ್ತಾರೆ. ಮಹಾಪ್ರಭು ಜಗನ್ನಾಥನ ಸೇವಕ  ಜನಾರ್ದನ್ ಮಹಾಪಾತ್ರ ಪಟಜೋಶಿ ಮತ್ತು ಒಡಿಯಾ ಚಿತ್ರರಂಗದ ಜನಪ್ರಿಯ ಕಲಾವಿದ ಸಬ್ಯಸಾಚಿ ಮತ್ತು ಅವರ ಪತ್ನಿ ಅರ್ಚಿತಾ ಅವರಿಂದ ಈ ಪುರಾತನ ದೇವಾಲಯದ ಬಗ್ಗೆ ಮಾಹಿತಿ ದೊರೆಯಿತು.

ಉತ್ತರಕಾಶಿಯಲ್ಲಿರುವ ಈ ಭವ್ಯವಾದ ಜಗನ್ನಾಥ ಧಾಮವು ಉತ್ತರಾಖಂಡ ಮತ್ತು ಒಡಿಶಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದರ ಜೊತೆಗೆ ‘ಏಕ್ ಭಾರತ-ಶ್ರೇಷ್ಠ ಭಾರತ’ಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ