ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಡಿಂಪಲ್ ಯಾದವ್ ಮಾಜಿ ಸಹಾಯನ ವಿರುದ್ಧ ಬಿಜೆಪಿ ಆರೋಪ

ನವಾಬ್ ಸಿಂಗ್ ಯಾದವ್ ಲೋಕಸಭಾ ಸಂಸದ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಸಹಾಯಕರ ಆಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಡಿಂಪಲ್ ಯಾದವ್ ಮಾಜಿ ಸಹಾಯನ ವಿರುದ್ಧ ಬಿಜೆಪಿ ಆರೋಪ
ಡಿಂಪಲ್- ಅಖಿಲೇಶ್ ಯಾದವ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 12, 2024 | 8:21 PM

ಲಕ್ನೋ ಆಗಸ್ಟ್ 12: ಉತ್ತರ ಪ್ರದೇಶದ (Uttar pradesh) ಕನೌಜ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಮಾಜಿ ‘ಬ್ಲಾಕ್ ಪ್ರಮುಖ್’ನನ್ನು ಬಂಧಿಸಿದ ನಂತರ ಬಿಜೆಪಿ (BJP) ಮತ್ತು ಸಮಾಜವಾದಿ ಪಕ್ಷದ (Samajwadi party) ನಡುವೆ ಮಾತಿನ ಸಮರ ಆರಂಭವಾಗಿದೆ. ಕನ್ನೌಜ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅಮಿತ್ ಕುಮಾರ್ ಆನಂದ್ ಮಾತನಾಡಿ, ಬೆಳಗಿನ ಜಾವ 1:30 ರ ಸುಮಾರಿಗೆ ಯುಪಿ 112 ಸೇವೆಗೆ ಕರೆ ಬಂದಿದ್ದು, ಹುಡುಗಿಯೊಬ್ಬಳು ವಿವಸ್ತ್ರಳಾಗಿದ್ದಾಳೆ, ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿತ್ತು ಎಂದಿದ್ದಾರೆ.

ಆರೋಪಿ ನವಾಬ್ ಸಿಂಗ್ ಯಾದವ್ ಅವರನ್ನು ಭೇಟಿಯಾಗಲು ಬಾಲಕಿ ತನ್ನ ಚಿಕ್ಕಮ್ಮನೊಂದಿಗೆ ಹೋಗಿದ್ದಳು ಎಂದು ಆನಂದ್ ಹೇಳಿದ್ದಾರೆ. ಯಾದವ್ ಉದ್ಯೋಗದ ನೆಪದಲ್ಲಿ ಇಬ್ಬರಿಗೆ ಕರೆ ಮಾಡಿದ್ದರು. ದೂರಿನ ಪ್ರಕಾರ, ತನ್ನ ಚಿಕ್ಕಮ್ಮ ಬಾತ್ರೂಮ್ ಗೆ ಹೋದಾಗ ಯಾದವ್ ತನ್ನ ಮೇಲೆ ಬಲವಂತ ಮಾಡಿದ್ದಾನೆ ಎಂದು ಹುಡುಗಿ ಆರೋಪಿಸಿದ್ದಾಳೆ. ಚಿಕ್ಕಮ್ಮ ಹಿಂತಿರುಗಿ ಬಂದಾಗ ಯಾದವ್ ಒಳ ಉಡುಪಿನಲ್ಲಿ ಇದ್ದದ್ದನ್ನು ನೋಡಿ ಆಕೆ ತಕ್ಷಣ 112 ಗೆ ಕರೆ ಮಾಡಿದರು ಎಂದು ಪೊಲೀಸರು ಹೇಳಿದ್ದಾರೆ.

ಕರೆಯನ್ನು ಅರಿತು ಸ್ಥಳೀಯ ಪೊಲೀಸರು ಮತ್ತು ಪಿಆರ್‌ವಿ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿದವು. ಬಾಲಕಿಯನ್ನು ರಕ್ಷಿಸಲಾಗಿದೆ. ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದರು.

ನವಾಬ್ ಸಿಂಗ್ ಯಾದವ್ ಲೋಕಸಭಾ ಸಂಸದ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಸಹಾಯಕರ ಆಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

“ನವಾಬ್ ಸಿಂಗ್ ಯಾದವ್ ಎಸ್‌ಪಿಯ ಸಣ್ಣ ನಾಯಕ ಮಾತ್ರವಲ್ಲ, ಆತ (ಮಾಜಿ) ಸಂಸದೆ ಡಿಂಪಲ್ ಯಾದವ್ ಅವರ ಪ್ರತಿನಿಧಿಯೂ ಆಗಿದ್ದಾರೆ. ಸಮಾಜವಾದಿ ಪಕ್ಷವು ಯಾವಾಗಲೂ ಹುಡುಗರಲ್ಲವೇ ಅವರು ತಪ್ಪುಗಳನ್ನು ಮಾಡುತ್ತಾರೆ (‘ಲಡ್ಕೆ ಹೈ, ಲಡ್ಕೋ ಸೆ ಗಲತೀ ಹೋ ಜಾತಿ ಹೈ) ಎಂಬ ನೀತಿಯ ಅಡಿಯಲ್ಲಿ ಇಂತಹ ಅಪರಾಧಗಳನ್ನು ಮುಚ್ಚಿಡುತ್ತಾರೆ. ಮೊದಲನೆಯದಾಗಿ, ಅದು ಅಯೋಧ್ಯೆಯ ಮೊಯಿದ್ ಖಾನ್ ಮತ್ತು ಕನೌಜ್‌ನ ನವಾಬ್ ಯಾದವ್. ಇದು ಎಸ್‌ಪಿಯ ನಿಜವಾದ ಗುಣವಾಗಿದೆ ಎಂದು ಯುಪಿ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ವೈದ್ಯೆಯ ಕೊಲೆ ಪ್ರಕರಣ; ಬಂಗಾಳ ಸರ್ಕಾರವೇ ಹೊಣೆಯಾಗಬೇಕು: ಧರ್ಮೇಂದ್ರ ಪ್ರಧಾನ್

ಆರೋಪಕ್ಕೆ ಉತ್ತರಿಸಿದ ಎಸ್ಪಿ

ಆರೋಪಿಗಳ ಬಗ್ಗೆ ಕೇಳಿದಾಗ, ಸಮಾಜವಾದಿ ಪಕ್ಷವು ನವಾಬ್ ಸಿಂಗ್ ಯಾದವ್ ಇನ್ನು ಮುಂದೆ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿಕೊಂಡಿದೆ. ಎಸ್‌ಪಿಯ ಕನ್ನೌಜ್ ಘಟಕದ ಅಧ್ಯಕ್ಷ ಕಲೀಂ ಖಾನ್, “ಇದು ಅವರ ವೈಯಕ್ತಿಕ ವಿಷಯ ಮತ್ತು ಸಮಾಜವಾದಿ ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಪಿಟಿಐಗೆ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ