Tamil Nadu Assembly Elections 2021: ತಮಿಳುನಾಡು ಚುನಾವಣೆಗೆ ಸೀಟು ಹಂಚಿಕೆ; ಕಾಂಗ್ರೆಸ್ ಪಕ್ಷಕ್ಕೆ 25 ಸೀಟು ನೀಡಿದ ಡಿಎಂಕೆ
Tamil Nadu Polls: 25 ವಿಧಾನಸಭಾ ಸ್ಥಾನಗಳಲ್ಲಿ ಹಾಗೂ ಕನ್ಯಾಕುಮಾರಿ ಲೋಕಸಭಾ ಸ್ಥಾನಕ್ಕಾಗಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಮುಖ್ಯಸ್ಥ ಕೆ.ಎಸ್.ಅಳಗಿರಿ ಹೇಳಿದ್ದಾರೆ.
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (DMK) ತನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್ಗೆ 25 ಸೀಟುಗಳನ್ನು ನೀಡುವುದಾಗಿ ಭಾನುವಾರ ತೀರ್ಮಾನ ಕೈಗೊಂಡಿದೆ. 25 ವಿಧಾನಸಭೆ ಸೀಟು ಮತ್ತು ಕನ್ಯಾಕುಮಾರಿಯಲ್ಲಿ ಒಂದು ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧೆಗಿಳಿಯಲಿದೆ. ಕಳೆದ ವರ್ಷ ಕಾಂಗ್ರೆಸ್ ಸಂಸದ ಹೆಚ್. ವಸಂತಕುಮಾರ್ ಕೊವಿಡ್ ನಿಂದ ನಿಧನರಾದ ಹಿನ್ನೆಲೆಯಲ್ಲಿ ಕನ್ಯಾಕುಮಾರಿ ಲೋಕಸಭಾ ಸ್ಥಾನ ಖಾಲಿಯಾಗಿ ಉಳಿದಿತ್ತು. ಭಾನುವಾರ ಬೆಳಗ್ಗೆ ನಡೆದ ಸಭೆಯಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಮುಖ್ಯಸ್ಥ ಕೆ.ಎಸ್.ಅಳಗಿರಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಳಗಿರಿ, ಡಿಎಂಕೆ ಜತೆಗಿನ ಸೀಟು ಹಂಚಿಕೆ ಒಪ್ಪಂದಕ್ಕೆ ನಾವು ಸಹಿ ಹಾಕಿದ್ದೇವೆ. 25 ವಿಧಾನಸಭಾ ಸ್ಥಾನಗಳಲ್ಲಿ ಹಾಗೂ ಕನ್ಯಾಕುಮಾರಿ ಲೋಕಸಭಾ ಸ್ಥಾನಕ್ಕಾಗಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
காங்கிரஸ் – தி.மு.க தொகுதி உடன்பாடு கையெழுத்தானது. திமுக கூட்டணியில் காங்கிரஸ் கட்சிக்கு 25 இடங்கள் மற்றும் கன்னியாகுமரி மக்களவை தொகுதியில் காங்கிரஸ் போட்டி. மதச்சார்பின்மை வெற்றிபெற வேண்டும் என்பதுதான் காங்கிரசின் நோக்கம். – தலைவர் திரு. @KS_Alagiri pic.twitter.com/PGPpO6lJez
— Tamil Nadu Congress Committee (@INCTamilNadu) March 7, 2021
ತಮಿಳುನಾಡು, ಪುದುಚೇರಿ ಮತ್ತು ಗೋವಾದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಮತ್ತು ಅಳಗಿರಿ ಶನಿವಾರ ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದಾರೆ. ಸೀಟು ಹಂಚಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಡೆಸಿದ ಈ ಸಭೆ ಶನಿವಾರ ರಾತ್ರಿವರೆಗೆ ಮುಂದುವರಿದಿತ್ತು.
கழக தலைவர் @mkstalin அவர்களுடன், @INCTamilNadu தலைவர் @KS_Alagiri அவர்கள் மேற்கொண்ட பேச்சுவார்த்தையில், காங்கிரஸ் 25 சட்டமன்ற தொகுதிகளிலும், கன்னியாகுமரி நாடாளுமன்ற தொகுதிக்கான இடைத்தேர்தலிலும் போட்டியிட முடிவானது.
முழு விவரம்: https://t.co/AEKGLWjEbU#VoteForDMKalliance pic.twitter.com/4SxeXrS41g
— DMK (@arivalayam) March 7, 2021
ಭಾನುವಾರದ ಸಭೆಯ ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ಕಾಂಗ್ರೆಸ್, ಡಿಎಂಕೆ, ಎಡಪಕ್ಷ, ವಿಸಿಕೆಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂದಿದ್ದಾರೆ. ಡಿಎಂಕೆ ಪಕ್ಷ ಇಂದು ಬೃಹತ್ ರ‍್ಯಾಲಿ ಆಯೋಜಿಸಿದ್ದು, ಅದಕ್ಕಿಂತ ಮುನ್ನ ಸೀಟು ಹಂಚಿಕೆ ನಿರ್ಧಾರ ಕೈಗೊಳ್ಳಲಾಗಿದೆ. ಈ ರ‍್ಯಾಲಿಯಲ್ಲಿ ಸ್ಟಾಲಿನ್ ತಮ್ಮ ಪಕ್ಷದ 10 ವರ್ಷದ ಕನಸುಗಳ ಬಗ್ಗೆ ದಾಖಲೆಪತ್ರವೊಂದನ್ನು ಬಿಡುಗಡೆ ಮಾಡಲಿದ್ದಾರೆ.
ಶನಿವಾರ ಬೆಳಗ್ಗೆ ಡಿಎಂಕೆ ತಮ್ಮ ಇತರ ಮೈತ್ರಿ ಪಕ್ಷಗಳೊಂದಿಗೆಯೂ ಸೀಟು ಹಂಚಿಕೆ ವಿಚಾರದಲ್ಲಿ ಮಾತುಕತೆ ನಡೆಸಿತ್ತು. ಮರುಮಲರ್ಚಿ ದ್ರಾವಿಡ ಮುನ್ನೇಟ್ರ ಕಳಗಂ ( MDMK) ಜತೆಗೆ ಡಿಎಂಕೆ ಮಾತುಕತೆ ನಡೆಸಿದ್ದು, ಪ್ರಸ್ತುತ ಪಕ್ಷದ ಮುಖ್ಯಸ್ಥ ವೈಕೊ, ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಎಂಡಿಎಂಕೆ ಪಕ್ಷ ಡಿಎಂಕೆ ಜತೆ ಕೈಜೋಡಿಸಿದೆ. ನಮ್ಮ ಮಾತುಕತೆ ಸುಗಮವಾಗಿ ನಡೆಯಿತು. ಎಂಡಿಎಂಕೆಗೆ ಆರು ವಿಧಾನಸಭಾ ಸೀಟುಗಳಲ್ಲಿ ಸ್ಪರ್ಧಿಸಲಿದೆ. ಈ ಒಪ್ಪಂದಕ್ಕೆ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಸಹಿ ಹಾಕಿದ್ದಾರೆ ಎಂದು ವೈಕೊ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಆಡಳಿತಾರೂಢ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ ( AIADMK) ಭಾರತೀಯ ಜನತಾ ಪಾರ್ಟಿ (BJP) ಜತೆ ಈ ಚುನಾವಣೆಯಲ್ಲಿ ಸ್ಪರ್ಧಿಸಲಿದೆಯ ಅದೇ ವೇಳೆ ನಟ- ರಾಜಕಾರಣಿ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀದಿ ಮೈಯಂ ( MNM) ಕೂಡಾ ಚುನಾವಣಾ ಕಣದಲ್ಲಿದೆ.
ತಮಿಳುನಾಡು ವಿಧಾನಸಭೆಯ 234 ಸೀಟುಗಳಿಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
Published On - 1:15 pm, Sun, 7 March 21