ವಾಹನ ತಪಾಸಣೆ ವೇಳೆ, ಕುಡಿದ ಅಮಲಿನಲ್ಲಿ ಟ್ರಾಫಿಕ್ ಪೊಲೀಸರನ್ನೇ ಎಳೆದುಕೊಂಡು ಹೋದ ಕಾರು ಚಾಲಕ
ವಾಹನ ತಪಾಸಣೆ ವೇಳೆ ಕುಡಿದು ಕಾರು ಓಡಿಸುತ್ತಿದ್ದ ಚಾಲಕನನ್ನು ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಪರಿಶೀಲನೆ ಮಾಡಲು ಕಾರಿನ ಡೋರ್ ಓಪನ್ ಮಾಡಿ, ಒಳಗೆ ಹೋಗಬೇಕೆನ್ನುಷ್ಟರಲ್ಲಿ ಚಾಲಕ ಕಾರನ್ನು ಮುಂದೆ ವೇಗವಾಗಿ ಮೂವ್ ಮಾಡಿ, ಪೊಲೀಸನ್ನು ಸ್ವಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದ್ದಾನೆ

ಫರಿದಾಬಾದ್, ಜೂ.22: ಹರಿಯಾಣದ ಫರಿದಾಬಾದ್ನಲ್ಲಿ ವಾಹನ ತಪಾಸಣೆ ವೇಳೆ ಕಾರು ಚಾಲಕ ಕುಡಿದ ಅಮಲಿನಲ್ಲಿ ಪೊಲೀಸರು ಎಂಬುದನ್ನು ಲೆಕ್ಕಿಸದೆ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಪೊಲೀಸರು ಚಾಲಕನ ಬಳಿ ದಾಖಲೆ ಕೇಳಿದ್ದು, ಸರಿಯಾದ ದಾಖಲೆ ಹಾಗೂ ಕುಡಿದು ಕಾರು ಓಡಿಸುತ್ತಿದ್ದ ಕಾರಣ ಟ್ರಾಫಿಕ್ ಪೊಲೀಸರಿಗೆ ಉತ್ತರ ಹೇಳಲಾಗದೇ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಬಲ್ಲಭಗಢ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
VIDEO | #Haryana: A cab driver tried to flee when traffic police asked for the documents of the vehicle he was driving in Ballabgarh. He was nabbed by traffic cops after a short chase. The incident reportedly took place yesterday.
(Source: Third Party) pic.twitter.com/eJILVSsqMJ
— Press Trust of India (@PTI_News) June 22, 2024
ಪೊಲೀಸರ ಪ್ರಕಾರ, ನಿನ್ನೆ ಸಂಜೆ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ತನ್ನ ಕಾರಿನಲ್ಲಿ ಒಂದಿಷ್ಟು ಪ್ರಯಾಣಿಕರನ್ನು ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಪೊಲೀಸರಿಗೆ ವಾಹನ ತಪಾಸಣೆ ವೇಳೆ ಈ ವಿಚಾರ ತಿಳಿದು ಬಂದಿದೆ. ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಚಾಲಕನ ಬಳಿಗೆ ಬಂದು ವಾಹನದ ದಾಖಲೆಗಳನ್ನು ಕೇಳಿದ್ದಾರೆ, ದಾಖಲೆಗಳು ಇಲ್ಲದ ಕಾರಣ ಆತನಿಗೆ ದಂಡ ವಿಧಿಸಿದ್ದಾರೆ. ನಂತರ ಇಬ್ಬರ ನಡುವೆ ವಾದ ನಡೆದಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಅನುಮತಿ ನೀಡಿದ ನ್ಯಾಯಾಧೀಶ ಆರ್‌ಕೆ ದಿವಾಕರ್‌ಗೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಕೊಲೆ ಬೆದರಿಕೆ
ನಂತರ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಅವನನ್ನು ಪರಿಶೀಲನೆ ಮಾಡಲು ಕಾರಿನ ಡೋರ್ ಓಪನ್ ಮಾಡಿ, ಒಳಗೆ ಹೋಗಬೇಕೆನ್ನುಷ್ಟರಲ್ಲಿ ಚಾಲಕ ಕಾರನ್ನು ಮುಂದೆ ವೇಗವಾಗಿ ಮೂವ್ ಮಾಡಿ, ಪೊಲೀಸನ್ನು ಸ್ವಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದ್ದಾನೆ, ನಂತರ ಅಲ್ಲಿದ್ದ ಇತರ ಪೊಲೀಸ್ ಅಧಿಕಾರಿಗಳು ಬಂದು ಕಾರನ್ನು ಸುತ್ತುವರಿದು ಕಾಪಾಡಿದ್ದಾರೆ. ನಂತರ ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ನಡೆಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Sat, 22 June 24




