Delhi Water Crisis: ಏರುತ್ತಿರುವ ತಾಪಮಾನ, ನೀರಿಗಾಗಿ ಟ್ಯಾಂಕರ್ ಮುಂದೆ ಸಾಲುಗಟ್ಟಿ ನಿಂತ ಜನ

ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ದೆಹಲಿಯ ಜಲ ಸಚಿವೆ ಅತಿಶಿ ಶುಕ್ರವಾರ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.ಅತಿಶಿ ಅವರ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆಕಾಲಿಟ್ಟಿದ್ದು ಹರಿಯಾಣ ಸರ್ಕಾರವು ದೆಹಲಿಗೆ ನೀರು ಪೂರೈಸುವವರೆಗೆ, ದೆಹಲಿಯ 28 ಲಕ್ಷ ಜನರಿಗೆ ನೀರು ಸಿಗುವವರೆಗೆ ನಾನು ನನ್ನ ಉಪವಾಸವನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

Delhi Water Crisis: ಏರುತ್ತಿರುವ ತಾಪಮಾನ, ನೀರಿಗಾಗಿ ಟ್ಯಾಂಕರ್ ಮುಂದೆ ಸಾಲುಗಟ್ಟಿ ನಿಂತ ಜನ
ದೆಹಲಿ ನೀರಿನ ಬಿಕ್ಕಟ್ಟು
Follow us
|

Updated on:Jun 22, 2024 | 3:36 PM

ದೆಹಲಿ ಜೂನ್ 22: ದೆಹಲಿಯಲ್ಲಿ (Delhi)ನೀರಿನ ಬಿಕ್ಕಟ್ಟು (Water Crisis) ಉಲ್ಬಣಗೊಂಡಿದ್ದು,ಟ್ಯಾಂಕರ್‌ಗಳಿಂದ ನೀರು ಸಂಗ್ರಹಿಸಲು ಜನರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಅಲ್ಲಲ್ಲಿ ಕಂಡುಬಂದಿದೆ.ಬೇಸಿಗೆಯ ಆರಂಭದಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಜನರು ಕ್ಯಾನ್ ಮತ್ತು ಬಕೆಟ್‌ಗಳೊಂದಿಗೆ ನೀರಿನ ಟ್ಯಾಂಕರ್‌ಗಳತ್ತ ಅಲೆಯುವ ಅನಿವಾರ್ಯತೆ ಎದುರಾಗಿದೆ. ಮೂಲಗಳ ಪ್ರಕಾರ, ಮಯೂರ್ ವಿಹಾರ್‌ನ ಚಿಲ್ಲಾ ಗಾಂವ್, ಓಖ್ಲಾದ ಸಂಜಯ್ ಕಾಲೋನಿ ಮತ್ತು ಗೀತಾ ಕಾಲೋನಿಯಂತಹ ಪ್ರದೇಶಗಳು ಈ ಪ್ರಮುಖ ನೀರಿನ ಮೂಲಗಳ ಸುತ್ತಲೂ ಉದ್ದವಾದ ಸರತಿ ಸಾಲುಗಳು ಮತ್ತು ಭಾರೀ ಜನಸಂದಣಿಯನ್ನು ಕಂಡಿವೆ. ಏರುತ್ತಿರುವ ತಾಪಮಾನವು ನಗರದ ನೀರಿನ ಕೊರತೆಯನ್ನು ಉಲ್ಬಣಗೊಳಿಸಿದ್ದು, ಇದು ದೆಹಲಿಯ ನಿವಾಸಿಗಳಿಗೆ ತೀವ್ರ ಸಮಸ್ಯೆಯಾಗಿದೆ.

ಅತಿಶಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ

ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ದೆಹಲಿಯ ಜಲ ಸಚಿವೆ ಅತಿಶಿ ಶುಕ್ರವಾರ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಹರಿಯಾಣ ಸರ್ಕಾರವು ದೆಹಲಿಯ ನೀರಿನ ಸರಿಯಾದ ಪಾಲನ್ನು ತಡೆಹಿಡಿದಿರುವುದೇ ನೀರಿನ ಅಭಾವಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಅತಿಶಿ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಜಂಗ್‌ಪುರದ ಬಳಿಯ ಭೋಗಲ್‌ನಲ್ಲಿ ತನ್ನ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಅತಿಶಿ ಅವರ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆಕಾಲಿಟ್ಟಿದ್ದು ಹರಿಯಾಣ ಸರ್ಕಾರವು ದೆಹಲಿಗೆ ನೀರು ಪೂರೈಸುವವರೆಗೆ, ದೆಹಲಿಯ 28 ಲಕ್ಷ ಜನರಿಗೆ ನೀರು ಸಿಗುವವರೆಗೆ ನಾನು ನನ್ನ ಉಪವಾಸವನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

ಅತಿಶಿ ಅವರ ಪ್ರಕಾರ, ದೆಹಲಿಯು 613 MGD ನೀರನ್ನು ಪಡೆಯಬೇಕಾಗಿತ್ತು, ಆದರೆ ಹಲವಾರು ವಾರಗಳಿಂದ, ಹರಿಯಾಣ ಸರ್ಕಾರವು 513 MGD ಮಾತ್ರ ಬಿಡುಗಡೆ ಮಾಡುತ್ತಿದೆ. ತಾನು ‘ಎಲ್ಲ ರೀತಿಯಲ್ಲೂ ಪ್ರಯತ್ನಿಸಿದ್ದೇನೆ’ . ಇದೀಗ ಉಪವಾಸ ಸತ್ಯಾಗ್ರಹ ಮಾಡುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ ಸಚಿವೆ

ದೆಹಲಿಯ ಎಎಪಿ ಸರ್ಕಾರವು ನೆರೆಯ ರಾಜ್ಯಗಳಾದ ಹಿಮಾಚಲ ಪ್ರದೇಶ ಮತ್ತು ಹರಿಯಾಣ ತ್ರಿಪಕ್ಷೀಯ ಯಮುನಾ ನದಿ ನೀರು ಹಂಚಿಕೆ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಮತ್ತು ರಾಷ್ಟ್ರ ರಾಜಧಾನಿಯಿಂದ ನೀರನ್ನು ತಡೆಹಿಡಿಯುತ್ತಿದೆ ಎಂದು ವಾದಿಸಿತ್ತು.

ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಯಮುನಾ ನದಿಯ ಮೇಲ್ಮಟ್ಟದ ಮಂಡಳಿಯು ಮಧ್ಯಪ್ರವೇಶಿಸಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದೆ.

ಎಎಪಿ ಸರ್ಕಾರವು ದೆಹಲಿಯಲ್ಲಿ ನೀರಿನ ಸರಬರಾಜನ್ನು ತಪ್ಪಾಗಿ ನಿರ್ವಹಿಸಿದೆ ಮತ್ತು ಜನರಿಗೆ ತಲುಪುವ ಮೊದಲು ನೀರನ್ನು ಕದಿಯುವ ‘ವಾಟರ್ ಟ್ಯಾಂಕ್ ಮಾಫಿಯಾ’ಗಳ ಸಮಸ್ಯೆಯನ್ನು ಪರಿಹರಿಸಲಿಲ್ಲ ಎಂದು ಬಿಜೆಪಿ ಆರೋಪಿಸಿದೆಯ.

ಬಿಜೆಪಿ ಆಡಳಿತದ ಹರಿಯಾಣ ಸರ್ಕಾರವು ಪೂರೈಸುತ್ತಿರುವ ನೀರಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು  ಹೇಳಿದ್ದು ದೆಹಲಿಯು ತನ್ನ ಒಪ್ಪಿಗೆಯ ನೀರಿನ ಹಂಚಿಕೆಗಿಂತ ಹೆಚ್ಚಿನದನ್ನು ಪಡೆಯುತ್ತದೆ ಎಂದು ಹೇಳಿದೆ.

ದೆಹಲಿಯ ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ (CGWB) ಗುರುವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ, ಇದು ದೆಹಲಿಯು ತನ್ನ ಅಂತರ್ಜಲದ 99 ಪ್ರತಿಶತವನ್ನು ಈಗಾಗಲೇ ಹೊರತೆಗೆದಿದೆ ಎಂದು ತೋರಿಸುತ್ತದೆ, ಅದರ ನೀರಿನ ಅಗತ್ಯಗಳನ್ನು ಪೂರೈಸಲು ಇತರ ರಾಜ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಇದನ್ನೂ ಓದಿ: Kallakurichi Hooch Tragedy: ಕಲ್ಲಕುರಿಚಿಯಲ್ಲಿ ಸಾವಿನ ಸಂಖ್ಯೆ 55 ಕ್ಕೆ ಏರಿಕೆ, 100 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ತಕ್ಷಣದ ಕ್ರಮ ಅಗತ್ಯ

ಪ್ರತಿಭಟನೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಲು ದೆಹಲಿ ಸರ್ಕಾರದ ಕ್ರಮವು ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಅತಿಶಿ ಅವರ ಉಪವಾಸ ಸತ್ಯಾಗ್ರಹವು ಸಮಸ್ಯೆಯ ಬಗ್ಗೆ ಗಮನ ಸೆಳೆಯುವ ಗುರಿಯನ್ನು ಹೊಂದಿದೆ. ಇದು ಅಗತ್ಯವಿರುವ ನೀರು ಸರಬರಾಜುಗಳನ್ನು ಬಿಡುಗಡೆ ಮಾಡಲು ಹರಿಯಾಣ ಸರ್ಕಾರದಿಂದ ತಕ್ಷಣದ ಕ್ರಮಕ್ಕೆ ಕರೆ ನೀಡುತ್ತದೆ. ಈ ಪರಿಸ್ಥಿತಿಯು ನೀರಿನ ನಿರ್ವಹಣೆ ಮತ್ತು ರಾಜ್ಯಗಳ ನಡುವಿನ ಸಹಕಾರದ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Sat, 22 June 24

ತಾಜಾ ಸುದ್ದಿ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್
ಮಂಗಳೂರು: ಜಲದಿಗ್ಭಂದನಕ್ಕೊಳಗಾದ ಮನೆ, ಮನೆಯಲ್ಲಿ ಒಂಟಿ ಮಹಿಳೆ ವಾಸ!
ಮಂಗಳೂರು: ಜಲದಿಗ್ಭಂದನಕ್ಕೊಳಗಾದ ಮನೆ, ಮನೆಯಲ್ಲಿ ಒಂಟಿ ಮಹಿಳೆ ವಾಸ!
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ