PFI ಸಂಘಟನೆಗೆ ಸೇರಿದ 33 ಬ್ಯಾಂಕ್ ಖಾತೆಗಳನ್ನ ಮುಟ್ಟುಗೋಲು ಹಾಕಿದ ED
ಇತ್ತೀಚೆಗೆ ನಡೆದ ಪೌರತ್ವ ವಿರೋಧಿ ಕಾಯಿದೆ ವಿರುದ್ಧ ನಡೆದ ಪ್ರತಿಭಟನೆ, ಉತ್ತರ ಪ್ರದೇಶದಲ್ಲಿ ನಡೆದ ದಲಿತ ಮಹಿಳೆ ಮೇಲಿನ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಿದ ಆರೋಪದ ಸೇರಿದಂತೆ ಇನ್ನೂ ಹಲವು ಪ್ರಕರಣಗಳಲ್ಲಿ PFI ಭಾಗಿಯಾದ ಆರೋಪದ ಮೇಲೆ ಈ ದಾಳಿಗಳು ನಡೆದಿವೆ.
ನವದೆಹಲಿ: ಹಣ ಅಕ್ರಮ ಸಾಗಣೆ ಪ್ರಕರಣದಲ್ಲಿ (Prevention of Money Laundering Act -PMLA) ಜಾರಿ ನಿರ್ದೇಶನಾಲಯವು (ED) ಪಿಎಫ್ಐ ಸಂಘಟನೆಗೆ (Popular Front of India -PFI) ಸೇರಿದ 33 ಬ್ಯಾಂಕ್ ಅಕೌಂಟ್ಗಳನ್ನು ಮುಟ್ಟುಗೋಲು ಹಾಕಿದೆ. ನಮ್ಮ ಸಂಘಟನೆಯ ಇತರೆ ಶಾಖೆಗಳ (Rehab India Foundation) ಮೇಲೂ ಇ.ಡಿ. ದಾಳಿಗಳು ನಡೆದಿವೆ. ಹಾಗಾಗಿ ಇಂದು ಪರಿಸ್ಥಿತಿಯನ್ನು ಅವಲೋಕಿಸಿ, ನಾಳೆ ಗುರುವಾರ ಇದರ ಸಂಬಂಧ ಹೇಳಿಕೆ ನೀಡುವುದಾಗಿ PFI ತಿಳಿಸಿದೆ. ಸುಮಾರು 68.62 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಖಾತೆಗಳಿಂದ ಮುಟ್ಟುಗೋಲು ಹಾಕಲಾಗಿದೆ.
ಪಾಪುಲರ್ ಫ್ರಂಟ್ ಆಫ್ ಇಂಡಿಯಾಗೆ (PFI) ಸೇರಿದ 23 ಖಾತೆಗಳಲ್ಲಿ 59,12,051 ರೂಪಾಯಿ ಮತ್ತು Rehab India Foundation (RIF)ಗೆ ಸೇರಿದ 10 ಖಾತೆಗಳಲ್ಲಿ 9,50,030 ರೂಪಾಯಿ ಮೊತ್ತವನ್ನು ಸೀಜ್ ಮಾಡಲಾಗಿದೆ. ಒಟ್ಟು 68.62 ಲಕ್ಷ ರೂ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಇತ್ತೀಚೆಗೆ ನಡೆದ ಪೌರತ್ವ ವಿರೋಧಿ (ತಿದ್ದುಪಡಿ) ಕಾಯಿದೆ anti-Citizenship (Amendment) Act ವಿರುದ್ಧ ನಡೆದ ಪ್ರತಿಭಟನೆ, ಉತ್ತರ ಪ್ರದೇಶದಲ್ಲಿ ನಡೆದ ದಲಿತ ಮಹಿಳೆ ಮೇಲಿನ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಿದ ಆರೋಪದ ಸೇರಿದಂತೆ ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಈ ದಾಳಿಗಳು ನಡೆದಿವೆ ಎನ್ನಲಾಗಿದೆ. PFI ಎಂಬ ಇಸ್ಲಾಂ ಸಂಘಟನೆ 2006ರಲ್ಲಿ ಕೇರಳದಲ್ಲಿ ಸ್ಥಾಪನೆಗೊಂಡಿದೆ. ದೆಹಲಿಯಲ್ಲಿ ಕೇಂದ್ರ ಸ್ಥಾನ ಹೋಂದಿದೆ. ಇದರ ವಿರುದ್ಧದ ಮೇಲಿನ ಆರೋಪಗಳ ಹಿನ್ನೆಲೆಯಲ್ಲಿ ಲಖ್ನೋ PMLA court ನಲ್ಲಿ ಎರಡು ಚಾರ್ಜ್ ಶೀಟ್ ಗಳನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ.
PFI ಮತ್ತು RFI ಎರಡೂ ಸಂಘಟನೆಗಳು ಪ್ರಶ್ನಾರ್ಹ ಮೂಲಗಳಿಂದ ನಗದು ಸೇರಿದಂತೆ ಭಾರಿ ಹಣ ವರ್ಗಾವಣೆಯಾಗಿದೆ. 2009ರಿಂದೀಚೆಗೆ ಈ ಖಾತೆಗಳಲ್ಲಿ ಸುಮಾರು 60 ಕೋಟಿ ರೂ ನಗದು ಜಮೆಯಾಗಿದೆ. ಆದರೆ ಇದೆಲ್ಲಾ ತಮ್ಮ ಸಂಘಟನೆಯ ಬಗ್ಗೆ ಸಹಾನುಭೂತಿ ಹೊಂದಿರುವವರು ಮತ್ತು ಸದಸ್ಯರು ನೀಡಿದ ನಗದು ಕಾಣಿಕೆಗಳು ಎಂದು ತಪ್ಪಾಗಿ ಎರಡೂ ಸಂಘಟನೆಗಳು ಹೇಳಿಕೊಂಡಿವೆ. ಮೊದಲು ಈ ನಗದನ್ನು ಅನೇಕ ವೈಯಕ್ತಿಕ ಖಾತೆಗಳಲ್ಲಿ ಹಣ ಜಮೆ ಮಾಡಿ, ಬಳಿಕ ಅದನ್ನು ಸಂಘಟನೆಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪ ಪಟ್ಟಿಯಲ್ಲಿ ನಮೂದಿಸಿದೆ.
ಅಪರಾಧ ಪಿತೂರಿಯ ಭಾಗವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಯೂರಿರುವ ವ್ಯವಸ್ಥಿತ ಜಾಲ ಮೂಲಕ ಈ ಅಕ್ರಮ ಹಣ ವರ್ಗಾವಣೆ ನಡೆದಿದೆ. ಕೃತ್ರಿಮ ಮಾರ್ಗಗಳಲ್ಲಿ ಈ ಹಣವೆಲ್ಲಾ ಎರಡೂ ಸಂಘಟನೆಗಳ ಖಾತೆಗಳಿಗೆ ಜಮೆಯಾಗುವಲ್ಲಿ ಯಶಸ್ವಿಯಾಗಿವೆ ಎಂದು ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ. ಆದರೆ ಇಂತಹ ಯಾವುದೇ ಅಕ್ರಮಗಳಲ್ಲಿ ತಾನಾಗಲಿ ತನ್ನ ಸಹ ಸಂಘಟನೆಯಾಗಲಿ ಭಾಗಿಯಾಗಿಲ್ಲ ಎಂದು PFI ಈ ಹಿಂದಿನಂತೆ ಪುನರುಚ್ಚರಿಸಿದೆ. ಇಡಿ ಮತ್ತಿತರ ಕೇಂದ್ರ ತನಿಖಾ ದಳಗಳು ತನ್ನ ವಿರುದ್ಧ ಗೂಬೆ ಕೂರಿಸುತ್ತಿದೆ. ಕಿರುಕುಳ ಕೊಡ್ತಿದೆ. ಆದರೆ ಇದರ ವಿರುದ್ಧ ಕಾನೂನಾತ್ಮಕವಾಗಿ ಮತ್ತು ಪ್ರಜಾತಾಂತ್ರಿಕ ಮಾರ್ಗದಲ್ಲಿ ಹೋರಾಡುವುದಾಗಿ PFI ಹೇಳಿಕೊಂಡಿದೆ.
To read it in English click the link here