ಹರಿದ್ವಾರದ ಹರ್​ ಕಿ ಪೌರ್​ ಸುತ್ತ ಹಿಂದೂಯೇತರರು, ರೀಲ್ಸ್ ಮಾಡುವವರ ಪ್ರವೇಶ ನಿಷೇಧ

ಹರಿದ್ವಾರದ ಹರ್ ಕಿ ಪೌರಿಯಲ್ಲಿ ಹಿಂದೂಯೇತರರು, ರೀಲ್ ಮಾಡುವವರ ಪ್ರವೇಶ ಮತ್ತು ಡ್ರೋನ್‌ಗಳ ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹರಿದ್ವಾರದ ಹರ್ ಕಿ ಪೌರಿಯ ವಿವಿಧ ಸ್ಥಳಗಳಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುವ ಬೋರ್ಡ್​ಗಳನ್ನು ಕೂಡ ಹಾಕಲಾಗಿದೆ. ಹರ್ ಕಿ ಪೌರಿ ಮತ್ತು ಮಾಲ್ವಿಯಾ ದ್ವೀಪ ಪ್ರದೇಶಗಳಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ.

ಹರಿದ್ವಾರದ ಹರ್​ ಕಿ ಪೌರ್​ ಸುತ್ತ ಹಿಂದೂಯೇತರರು, ರೀಲ್ಸ್ ಮಾಡುವವರ ಪ್ರವೇಶ ನಿಷೇಧ
Har Ki Pauri

Updated on: Jan 16, 2026 | 6:05 PM

ಹರಿದ್ವಾರ, ಜನವರಿ 16: ಹರಿದ್ವಾರದ (Haridwar) ಅತ್ಯಂತ ಪವಿತ್ರ ಘಾಟ್ ಆಗಿರುವ ಹರ್ ಕಿ ಪೌರಿಯ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಿಂದೂಯೇತರರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುವ ಫಲಕಗಳನ್ನು ಹಾಕಲಾಗಿದೆ. ಇದರ ಜೊತೆಗೆ, ಡ್ರೋನ್ ಹಾರಾಟ ಮತ್ತು ಹಾಡುಗಳನ್ನು ಆಧರಿಸಿದ ರೀಲ್‌ಗಳು ಅಥವಾ ವಿಡಿಯೋ ಚಿತ್ರೀಕರಣವನ್ನು ಸಹ ನಿಷೇಧಿಸಲಾಗಿದೆ.

ಸಿನಿಮಾ ಗೀತೆಗಳನ್ನು ಆಧರಿಸಿ ವಿಡಿಯೋ ಚಿತ್ರೀಕರಿಸುವುದು ಮತ್ತು ರೀಲ್‌ಗಳನ್ನು ಮಾಡುವುದನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ರೀಲ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಶ್ರೀ ಗಂಗಾ ಸಭಾ ಎಚ್ಚರಿಸಿದೆ. ಕೆಲವು ದಿನಗಳ ಹಿಂದೆ, ಹರ್ ಕಿ ಪೌರಿ ಪ್ರದೇಶದಲ್ಲಿ ಚಿತ್ರೀಕರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೋಲಾಹಲಕ್ಕೆ ಕಾರಣವಾಯಿತು. ಈ ವಿಡಿಯೋದಲ್ಲಿ ದುಬೈನ ಮುಸ್ಲಿಮರ ಉಡುಪಿನಲ್ಲಿ ಇಬ್ಬರು ಯುವಕರು ಘಾಟ್‌ಗಳಲ್ಲಿ ಓಡಾಡುತ್ತಿದ್ದರು. ಇದರ ನಂತರ, ಯಾತ್ರಾಸ್ಥಳದ ಪುರೋಹಿತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಹರಿದ್ವಾರದ ಧಾರ್ಮಿಕ ಪಾವಿತ್ರ್ಯವನ್ನು ಉಲ್ಲಂಘಿಸುತ್ತದೆ, ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತವೆ ಎಂದು ಹೇಳಿದ್ದರು. ಪೊಲೀಸರು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ಹರಿದ್ವಾರದ ಘಾಟ್‌ಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧವೇ?

ಹೀಗಾಗಿ, ಇದೀಗ ಹರಿದ್ವಾರದ ಪವಿತ್ರ ಹರ್ ಕಿ ಪೌರಿಯಲ್ಲಿ ಹಿಂದೂಯೇತರರ ಪ್ರವೇಶ, ಡ್ರೋನ್ ಹಾರಾಟ ಮತ್ತು ರೀಲ್ ರೆಕಾರ್ಡ್ ನಿಷೇಧಿಸುವ ಹೊಸ ಫಲಕಗಳನ್ನು ಹಾಕಲಾಗಿದೆ.

ಹರ್ ಕಿ ಪೌರಿಯನ್ನು ಭಾರತದ ಅತ್ಯಂತ ಪವಿತ್ರ ಘಾಟ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಲ್ಲಿ ಭಕ್ತರು ಆಚರಣೆಗಳು, ಪ್ರಾರ್ಥನೆಗಳು ಮತ್ತು ಪ್ರಸಿದ್ಧ ಗಂಗಾ ಆರತಿಗಾಗಿ ಆಗಮಿಸುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us