Tamil Nadu | ತಮಿಳುನಾಡಿನ ಮಾಜಿ ಸಚಿವೆ ಇಂದಿರಾ ಕುಮಾರಿಗೆ 5 ವರ್ಷ ಜೈಲು ಶಿಕ್ಷೆ ಪ್ರಕಟ
1991ರಿಂದ 1996ರ ಅವಧಿಯಲ್ಲಿ ಎಐಎಡಿಎಂಕೆ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದ ಇಂದಿರಾ ಕುಮಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಚೆನ್ನೈ: ತಮಿಳುನಾಡಿನ ಮಾಜಿ ಸಚಿವೆ ಆರ್. ಇಂದಿರಾ ಕುಮಾರಿ ಹಾಗೂ ಆಕೆಯ ಗಂಡನಿಗೆ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇಂದು ಈ ಬಗ್ಗೆ ವಿಚಾರಣೆ ನಡೆಸಿದ ತಮಿಳುನಾಡಿನ ಸಂಸದ/ ಶಾಸಕರ ವಿಶೇಷ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಇವರ ಜೊತೆಗೆ ಮಾಜಿ ಐಎಎಸ್ ಅಧಿಕಾರಿ ಷಣ್ಮುಗಂ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ.
1991ರಿಂದ 1996ರ ಅವಧಿಯಲ್ಲಿ ಎಐಎಡಿಎಂಕೆ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದ ಇಂದಿರಾ ಕುಮಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಅವರಿಗೆ 5 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಹಾಗೇ, ಅವರ ಗಂಡ ಬಾಬು ಅವರಿಗೂ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆ ಅವಧಿಯಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಷಣ್ಮುಗಂ ಅವರಿಗೆ 3 ವರ್ಷ ಜೈಲು ಶಿಕ್ಷೆ, ಇಂದಿರಾ ಕುಮಾರಿ ಅವರ ವೈಯಕ್ತಿಕ ಸಹಾಯಕರಾಗಿದ್ದ ವೆಂಕಟಕೃಷ್ಣನ್ ಅವರಿಗೆ 10,000 ರೂ. ದಂಡ ವಿಧಿಸಲಾಗಿದೆ.
#DMK Senior Leader Smt.Indira Kumari & her husband convicted of Corruption & sentenced to 5 years jail.
In 2014, DMK Rajya Sabha MP Selvaganapathy resigned after getting convicted by CBI Court for corruption.
2G Scam Appeal to make way for more DMK MPs’ resignations & arrests??
— SG Suryah (@SuryahSG) September 29, 2021
ಮಾಜಿ ಸಚಿವೆ ಇಂದಿರಾ ಕುಮಾರಿ ವಿಕಲಚೇತನರಿಗಾಗಿ ಶಾಲೆ ಸ್ಥಾಪಿಸಲು ಇಂದಿರಾ ಕುಮಾರಿಯವರ ಪತಿ ಬಾಬು ನಡೆಸುತ್ತಿರುವ ಟ್ರಸ್ಟ್‌ಗೆ ನೀಡಲಾದ 15.45 ಲಕ್ಷ ರೂ. ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು. ಜಯಲಲಿತಾ ಅವರ ಸರ್ಕಾರದಲ್ಲಿ ಸಮಾಜಕಲ್ಯಾಣ ಸಚಿವೆಯಾಗಿದ್ದ ಇಂದಿರಾ ಕುಮಾರಿ ಬಳಿಕ ಎಐಎಡಿಎಂಕೆ ತೊರೆದು ಡಿಎಂಕೆ ಪಕ್ಷ ಸೇರಿದ್ದರು.
ಇಂದು ಅವರಿಗೆ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ತೀವ್ರವಾಗಿ ಅಸ್ವಸ್ಥಗೊಂಡ ಇಂದಿರಾ ಕುಮಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಇಂದಿರಾ ಕುಮಾರಿ ಪೂರ್ತಿಯಾಗಿ ಗುಣವಾದ ಬಳಿಕ ಆಸ್ಪತ್ರೆಯಿಂದ ಜೈಲಿಗೆ ಕರೆದುಕೊಂಡು ಹೋಗಲಾಗುವುದು.
ಇದನ್ನೂ ಓದಿ: ಕುಳಿತುಕೊಳ್ಳುವ ಹಕ್ಕುಗಳಿಗಾಗಿ ದನಿಯೆತ್ತಿದ ಕೇರಳ, ತಮಿಳುನಾಡಿನ ಕಾರ್ಮಿಕರು; ಏನಿದು ಕುಳಿತುಕೊಳ್ಳುವ ಹಕ್ಕು?
9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೈಲು ಶಿಕ್ಷೆಗೊಳಗಾಗಿದ್ದ ಅಪರಾಧಿ ಬಂಧನ