ಅತ್ಯಾಚಾರ ಆರೋಪದಿಂದ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಖುಲಾಸೆ
ಕೋರ್ಟ್ನಲ್ಲಿ ವಿಚಾರಣೆ ಬಳಿಕ ಅಂತಿಮವಾಗಿ ಈಗ ಅತ್ಯಾಚಾರ ಮತ್ತು ಜೀವ ಬೇದರಿಕೆ ಆರೋಪಿ ಸ್ವಾಮಿ ಚಿನ್ಮಯಾನಂದ ಅವರು ಆರೋಪ ಮುಕ್ತರಾಗಿದ್ದಾರೆ. ಇನ್ನು ಸ್ವಾಮಿ ಚಿನ್ಮಯಾನಂದ ಅವರ ಈ ಪ್ರಕರಣ ಕರ್ನಾಟಕದ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಾಮ್ಯತೆ ಹೊಂದಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.
ದೆಹಲಿ: ಅತ್ಯಾಚಾರ ಮತ್ತು ಜೀವ ಬೆದರಿಕೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಬಿಡುಗಡೆಯಾಗಿದ್ದಾರೆ. ಸ್ವಾಮಿ ಚಿನ್ಮಯಾನಂದ ಅವರ ಟ್ರಸ್ಟ್ನ ಶಹಜಾನ್ಪುರ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಮಾಡಲಾಗಿತ್ತು. ಈ ನಿಟ್ಟಿನಲ್ಲಿ 2019 ರ ಸೆಪ್ಟೆಂಬರ್ನಲ್ಲಿ ಸ್ವಾಮಿ ಚಿನ್ಮಯಾನಂದರನ್ನು ಬಂಧಿಸಲಾಗಿತ್ತು. ಆದರೆ ಮೂರು ವರ್ಷಗಳ ನಂತರ ಲಕ್ನೋದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸ್ವಾಮಿ ಚಿನ್ಮಯಾನಂದರನ್ನು ಖುಲಾಸೆಗೊಳಿಸಿದೆ.
ಐಪಿಸಿ ಸೆಕ್ಷನ್ 376C, ಐಪಿಸಿ ಸೆಕ್ಷನ್ 506, ಐಪಿಸಿ ಸೆಕ್ಷನ್ 354D, ಐಪಿಸಿ ಸೆಕ್ಷನ್ 342 ಗಳ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಇದಾದ ಬಳಿಕ ತಮ್ಮಿಂದ ಐದು ಕೋಟಿ ರೂಪಾಯಿ ಹಣಕ್ಕೆ ಯುವತಿ ಬ್ಲಾಕ್ ಮೇಲ್ ಮಾಡಿದ್ದಾಳೆ ಎಂದು ಸ್ವಾಮಿ ಚಿನ್ಮಯಾನಂದ ದೂರು ನೀಡಿದ್ದರು. ಸ್ವಾಮಿ ಚಿನ್ಮಯಾನಂದ ಅವರ ದೂರಿನ ಮೇಲೆ ಯುವತಿಯನ್ನು ಬಂಧಿಸಲಾಗಿತ್ತು.
ಕೋರ್ಟ್ನಲ್ಲಿ ವಿಚಾರಣೆ ಬಳಿಕ ಅಂತಿಮವಾಗಿ ಈಗ ಅತ್ಯಾಚಾರ ಮತ್ತು ಜೀವ ಬೇದರಿಕೆ ಆರೋಪಿ ಸ್ವಾಮಿ ಚಿನ್ಮಯಾನಂದ ಅವರು ಆರೋಪ ಮುಕ್ತರಾಗಿದ್ದಾರೆ. ಇನ್ನು ಸ್ವಾಮಿ ಚಿನ್ಮಯಾನಂದ ಅವರ ಈ ಪ್ರಕರಣ ಕರ್ನಾಟಕದ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಾಮ್ಯತೆ ಹೊಂದಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ರಮೇಶ್ ಜಾರಕಿಹೊಳಿ ಪ್ರಕರಣದಂತೆಯೇ ಸ್ವಾಮಿ ಚಿನ್ಮಯಾನಂದ ಕೇಸ್ನಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿತ್ತು. ಅಂತಿಮವಾಗಿ ಕೋರ್ಟ್ ಈಗ ಅತ್ಯಾಚಾರ ಆರೋಪದಿಂದ ಸ್ವಾಮಿ ಚಿನ್ಮಯಾನಂದ ಅವರನ್ನು ಖುಲಾಸೆ ಮಾಡಿದೆ.
ಇದನ್ನೂ ಓದಿ:
ಅತ್ಯಾಚಾರದ ಕೇಸ್ ದಾಖಲಿಸಿಕೊಂಡು ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿ: ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್