ತಮಿಳುನಾಡಿನ ರೈತನ ಮಗಳು ಈಗ ಆದಿತ್ಯ L1 ಮಿಷನ್ ನಿರ್ದೇಶಕಿ; ನಿಗರ್ ಶಾಜಿ ಸ್ಫೂರ್ತಿ ಕತೆ!
Nigar Shaji, ISRO Scientist: ಚಂದ್ರಯಾನ-3 ಯಶಸ್ವಿ ನಂತರ ಶನಿವಾರ (ಸೆಪ್ಟೆಂಬರ್ 2) ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌ನೊಂದಿಗೆ ಭಾರತವು ತನ್ನ ಮೊದಲ ಸೌರ ಅನ್ವೇಷಣೆಯಾದ ಆದಿತ್ಯ ಎಲ್ 1 ಮಿಷನ್ ಅನ್ನು ಪ್ರಾರಂಭಿಸಿದೆ. ನಿಗರ್ ಶಾಜಿ ಅವರು ಪ್ರಸ್ತುತ ಇಸ್ರೋದ ಆದಿತ್ಯ L1 ಬಾಹ್ಯಾಕಾಶ ನೌಕೆಯ ಕಾರ್ಯಕ್ರಮ ನಿರ್ದೇಶಕಿಯಾಗಿ (ಪ್ರಾಜೆಕ್ಟ್ ಮ್ಯಾನೇಜರ್) ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ (Aditya L1) ತಮಿಳುನಾಡು ಪ್ರಬಲ ಅಸ್ತಿತ್ವವನ್ನು ಹೊಂದಿದೆ. ತಮಿಳುನಾಡಿನ ಮಾಯಿಲ್‌ಸಾಮಿ ಅಣ್ಣಾದೊರೈ ಮತ್ತು ಎಂ ವನಿತಾ ಚಂದ್ರಯಾನ 1 ಮತ್ತು 2 ನೇತೃತ್ವ ವಹಿಸಿದ್ದರು. ವಿಲ್ಲುಪುರಂ ಮೂಲದ ಪಿ ವೀರಮುತ್ತುವೇಲ್ ಚಂದ್ರನ ಮೇಲೆ ರೋವರ್ ಇಳಿಸುವ ಚಂದ್ರಯಾನ 3 ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡರು. ಈಗ, ತಮಿಳುನಾಡಿನ ದಕ್ಷಿಣ ಜಿಲ್ಲೆ ತೆಂಕಶಿಯ ಮಹಿಳಾ ವಿಜ್ಞಾನಿ ನಿಗರ್ ಶಾಜಿ (Nigar Shaji) ಅವರು ಆದಿತ್ಯ ಎಲ್ 1 ಮಿಷನ್‌ನ ಯೋಜನಾ ನಿರ್ದೇಶಕರಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಬಾಹ್ಯಾಕಾಶದಿಂದ ಸೂರ್ಯನನ್ನು ಅಧ್ಯಯನ ಮಾಡಿದ ಭಾರತದ ಮೊದಲ ಮಿಷನ್.
ಇವರ ಹಿನ್ನೆಲೆಯು ಎಂತವರಿಗೂ ಸ್ಪೂರ್ತಿದಾಯಕವಾಗಿದೆ. ನಿಗರ್ ಶಾಜಿ ಬಡ ಕುಟುಂಬದಿಂದ ಬಂದವರು. ಶಾಜಿ ಅವರ ತಂದೆ ಕೃಷಿಕನಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಸೆಂಗೋಟ್ಟೈನಲ್ಲಿರುವ SRM ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಾಡಿದರು. ನಂತರ ತಿರುನಲ್ವೇಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿ, 1987 ರಲ್ಲಿ, ISRO ಸೇರಿದರು.
ನಿಗರ್ ಶಾಜಿ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಪತಿ ವಿದೇಶದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮಗಳು ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ, ಮಗ ವಿದೇಶದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾನೆ. ಪ್ರಸ್ತುತ, ಅವರು ಇಸ್ರೋದ ಆದಿತ್ಯ L1 ಬಾಹ್ಯಾಕಾಶ ನೌಕೆಯ ಕಾರ್ಯಕ್ರಮ ನಿರ್ದೇಶಕಿಯಾಗಿ (ಪ್ರಾಜೆಕ್ಟ್ ಮ್ಯಾನೇಜರ್) ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಆದಿತ್ಯ L1 ಯಶಸ್ವಿ ಉಡಾವಣೆ ಬೆನ್ನಲ್ಲೇ ಪ್ರಗ್ಯಾನ್ ರೋವರ್ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಇಸ್ರೋ ಅಧ್ಯಕ್ಷ
ಮೈಲಸ್ವಾಮಿ ಅಣ್ಣಾದೊರೈ ಅವರಿಂದ ಹಿಡಿದು ಶಿವನ್, ವನಿತಾ ಮುತ್ತಯ್ಯ ಮತ್ತು ವೀರಮುತ್ತುವೇಲ್, ನಿಗರ್ ಶಾಜಿ ಅವರು ಈಗ ಇಸ್ರೋದ ಮಿಷನ್‌ಗಳ ಯಶಸ್ಸಿಗೆ ಕೊಡುಗೆ ನೀಡಿದ ತಮಿಳುನಾಡಿನ ಪ್ರತಿಭಾವಂತ ವಿಜ್ಞಾನಿಗಳ ಪಟ್ಟಿಗೆ ಸೇರಿದ್ದಾರೆ.
ಪಿಎಸ್‌ಎಲ್‌ವಿ-ಸಿ57 ಮೂಲಕ ಆದಿತ್ಯ-ಎಲ್1 ಉಡಾವಣೆ ಯಶಸ್ವಿಯಾಗಿ ನೆರವೇರಿದೆ ಎಂದು ಇಸ್ರೋ ಪ್ರಕಟಿಸಿದೆ. ವಾಹನವು ಉಪಗ್ರಹವನ್ನು ಅದರ ಉದ್ದೇಶಿತ ಕಕ್ಷೆಗೆ ನಿಖರವಾಗಿ ಇರಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯವು ಸೂರ್ಯ-ಭೂಮಿಯ L1 ಪಾಯಿಂಟ್‌ನ ಗಮ್ಯಸ್ಥಾನಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Sat, 2 September 23