AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರ ಸುಬ್ರಮಣಿಯನ್; ಐತಿಹಾಸಿಕ ಆದಿತ್ಯ ಎಲ್ -1 ಯೋಜನೆಯ ರೂವಾರಿ ಇವರೇ ನೋಡಿ

Dr Sankarasubramanian K; ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದ ಪ್ರಮುಖ ವಿಜ್ಞಾನಿಗಳಲ್ಲಿ ಡಾ ಶಂಕರ ಸುಬ್ರಮಣಿಯನ್ ಕೆ ಒಬ್ಬರು. ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಪಿಹೆಚ್​​ಡಿ ಪದವಿಯನ್ನು ಪಡೆದುಕೊಂಡರು. ಸಂಶೋಧನಾ ಕ್ಷೇತ್ರದಲ್ಲಿ ಸೋಲಾರ್ ಮ್ಯಾಗ್ನೆಟಿಕ್ ಫೀಲ್ಡ್, ಆಪ್ಟಿಕ್ಸ್ ಹಾಗೂ ಇನ್​​ಸ್ಟ್ರುಮೆಂಟೇಶನ್ ಇವರ ಆಸಕ್ತಿ ವಿಷಯಗಳಾಗಿವೆ.

ಶಂಕರ ಸುಬ್ರಮಣಿಯನ್; ಐತಿಹಾಸಿಕ ಆದಿತ್ಯ ಎಲ್ -1 ಯೋಜನೆಯ ರೂವಾರಿ ಇವರೇ ನೋಡಿ
ಡಾ. ಶಂಕರ ಸುಬ್ರಮಣಿಯನ್ ಕೆ
TV9 Web
| Edited By: |

Updated on: Sep 02, 2023 | 4:17 PM

Share

ಬೆಂಗಳೂರು, ಸೆಪ್ಟೆಂಬರ್ 2: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ್ ಲ್ಯಾಂಡರ್’ ಅನ್ನು ಇಳಿಸುವ ಮೂಲಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿಯೇ ವಿಶೇಷ ಮೈಲಿಗಲ್ಲು ಸಾಧಿಸಿದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO). ಇದರ ಬೆನ್ನಲ್ಲೇ ಇಂದು (ಸೆಪ್ಟೆಂಬರ್ 2) ‘ಆದಿತ್ಯ ಎಲ್-1 (Aditya L1) ಬಾಹ್ಯಾಕಾಶ ನೌಕೆಯ ಉಡಾವಣೆಯೂ ಯಶಸ್ವಿಯಾಗಿದೆ. ಇದು ಸೂರ್ಯನ ಸಂಶೋಧನೆಯ ನಿಟ್ಟಿನಲ್ಲಿ ಭಾರತದ ಮೊದಲ ಹೆಜ್ಜೆಯಾಗಿದೆ. ಈ ಬಾಹ್ಯಾಕಾಶ ನೌಕೆಯು ಸೂರ್ಯನ ಬಗೆಗಿನ ಹಲವು ವಿಷಯಗಳ ಅಧ್ಯಯನ ನಡೆಸಲಿದ್ದು, ಭೂಮಿಯಲ್ಲಿ ಜೀವನಕ್ಕೆ ಪೂರಕವಾದ ಸೂರ್ಯನ ಕಿರಣಗಳ ಬಗ್ಗೆಯೂ ಸಂಶೋಧನೆ ನಡೆಸಲಿದೆ.

ಆದಿತ್ಯ ಎಲ್-1 ಯೋಜನೆಯ ನೇತೃತ್ವ ವಹಿಸಿದವರು ಯಾರು?

ಇಸ್ರೋದ ಪ್ರಮಖ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ. ಶಂಕರ ಸುಬ್ರಮಣಿಯನ್ ಕೆ ಈ ಯೋಜನೆಯ ನೇತೃತ್ವವಹಿಸಿಕೊಂಡಿದ್ದಾರೆ.

ಯಾರು ಡಾ. ಶಂಕರ ಸುಬ್ರಮಣಿಯನ್?

ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದ ಪ್ರಮುಖ ವಿಜ್ಞಾನಿಗಳಲ್ಲಿ ಡಾ ಶಂಕರ ಸುಬ್ರಮಣಿಯನ್ ಕೆ ಒಬ್ಬರು. ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಪಿಹೆಚ್​​ಡಿ ಪದವಿಯನ್ನು ಪಡೆದುಕೊಂಡರು. ಸಂಶೋಧನಾ ಕ್ಷೇತ್ರದಲ್ಲಿ ಸೋಲಾರ್ ಮ್ಯಾಗ್ನೆಟಿಕ್ ಫೀಲ್ಡ್, ಆಪ್ಟಿಕ್ಸ್ ಹಾಗೂ ಇನ್​​ಸ್ಟ್ರುಮೆಂಟೇಶನ್ ಇವರ ಆಸಕ್ತಿ ವಿಷಯಗಳಾಗಿವೆ.

ಇವರು ‘ಚಂದ್ರಯಾನ-1’, ‘ಚಂದ್ರಯಾನ -2’ ಹಾಗೂ ‘ಆಸ್ಟ್ರೋಸ್ಯಾಟ್’ ಉಪಗ್ರಹಗಳಿಗೆ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಇವರು ಯುಆರ್ ರಾವ್ ಉಪಗ್ರಹ ಕೇಂದ್ರದ ಸ್ಪೇಸ್ ಆಸ್ಟ್ರೋನಾಮಿ ಗ್ರೂಪ್ (ಎಸ್ಎಜಿ) ನ ಮುಖ್ಯಸ್ಥರೂ ಆಗಿದ್ದಾರೆ. ಆದಿತ್ಯ ಎಲ್​1 ಮಿಷನ್​​ನ ಪೇಲೋಡ್​ ಅನ್ನು ಎಸ್​​​ಎಜಿ ಅಭಿವೃದ್ಧಿಪಡಿಸಿತ್ತು ಎಂಬುದು ಗಮನಾರ್ಹ. ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ ಇವರ ನೇತೃತ್ವದಲ್ಲಿಯೇ ಅಭಿವೃದ್ಧಿಪಡಿಸಲಾಗಿದ್ದು, ಎಕ್ಸ್​​​ಪೊಸ್ಯಾಟ್ ಪೇಲೋಡ್ ಅಭಿವೃದ್ಧಿಪಡಿಸುವಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

ಶಂಕರ ಸುಬ್ರಮಣಿಯನ್ ಅವರು ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯ ಎಕ್ಸ್ ರೇ ಪೇಲೋಡ್​​ನ ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್ ಕೂಡಾ ಹೌದು. ಅಷ್ಟೇ ಅಲ್ಲದೆ ಸೌರ ವಿಜ್ಞಾನ ಸಂಶೋಧನೆಯಲ್ಲಿ ತೊಡಗಿರುವ ಪ್ರಮುಖ ಭಾರತೀಯ ಸಂಸ್ಥೆಗಳ ಸದಸ್ಯರನ್ನೊಳಗೊಂಡ ‘ಆದಿತ್ಯ ಎಲ್-1 ಸೈನ್ಸ್ ವರ್ಕಿಂಗ್ ಗ್ರೂಪ್’ನ ಮುಖ್ಯಸ್ಥರೂ ಆಗಿದ್ದಾರೆ.

ಏನಿದು ಆದಿತ್ಯ ಎಲ್ -1 ಮಿಷನ್?

ಆದಿತ್ಯ ಎಲ್ -1 ಮಿಷನ್ ಸೂರ್ಯನ ಅಧ್ಯಯನಕ್ಕೆ ತೆರಳಿದ ಮೊಟ್ಟ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಇದರಲ್ಲಿ 7 ಬಗೆಯ ಪೇಲೋಡ್​ಗಳಿವೆ. ಇವು ಕ್ರೋಮೊಸ್ಪೇರ್, ಫೋಟೋಸ್ಪೇರ್ ಹಾಗೂ ಸೂರ್ಯನ ಹೊರ ಮೇಲ್ಮೈ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿವೆ. ಇವುಗಳು ಸೂರ್ಯನಲ್ಲಿಗೆ ತೆರಳುವುದಿಲ್ಲ, ಬದಲಾಗಿ ಸೂರ್ಯನ ಸುತ್ತ ಇರುವ ಎಲ್ -1 ಹ್ಯಾಲೋ ಆರ್ಬಿಟ್​​ನಿಂದ ಸೂರ್ಯನ ಅಧ್ಯಯನ ಮಾಡುತ್ತವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ