Haryana Results: ಹರಿಯಾಣದಲ್ಲೂ ಸಿಎಂ ಅಭ್ಯರ್ಥಿಯ ಆಯ್ಕೆಯಲ್ಲಿ ಪ್ರಯೋಗ ಮಾಡಿ ಗೆದ್ದ ಬಿಜೆಪಿ

ಹರಿಯಾಣದಲ್ಲಿ ಈ ಬಾರಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಗುಜರಾತ್, ಉತ್ತರಾಖಂಡ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಮಾಡಿದಂತೆ ಹರಿಯಾಣದಲ್ಲೂ ಖಟ್ಟರ್ ಅವರ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಯೋಗ ಯಶಸ್ವಿಯಾಗಿರುವುದರಿಂದ ಬಿಜೆಪಿಯ ಲೆಕ್ಕಾಚಾರ ಅವರ ಕೈ ಹಿಡಿದಿದೆ.

Haryana Results: ಹರಿಯಾಣದಲ್ಲೂ ಸಿಎಂ ಅಭ್ಯರ್ಥಿಯ ಆಯ್ಕೆಯಲ್ಲಿ ಪ್ರಯೋಗ ಮಾಡಿ ಗೆದ್ದ ಬಿಜೆಪಿ
ಮೋದಿ- ನಯಾಬ್ ಸಿಂಗ್ ಸೈನಿ
Follow us
ಸುಷ್ಮಾ ಚಕ್ರೆ
|

Updated on: Oct 08, 2024 | 5:40 PM

ನವದೆಹಲಿ: ಹರಿಯಾಣದ ಟ್ರೆಂಡ್‌ಗಳಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದ್ದು, ಬಿಜೆಪಿ ಬಹುಮತ ಪಡೆದಿದೆ. 90 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆದ್ದಿದೆ. ಬಹುಮತಕ್ಕೆ 46 ಸ್ಥಾನಗಳು ಬೇಕಾಗಿತ್ತು. ಈ ಮೂಲಕ ಹರಿಯಾಣದಲ್ಲಿ ಬಿಜೆಪಿ ಮೂರನೇ ಬಾರಿಗೆ ಸರ್ಕಾರವನ್ನು ರಚಿಸುತ್ತಿದೆ. ಹರಿಯಾಣದ ಫಲಿತಾಂಶದಿಂದ ಸ್ಪಷ್ಟವಾಗುವ ಒಂದು ಅಂಶವೆಂದರೆ, ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವ ಬಿಜೆಪಿಯ ಐಡಿಯಾ ಉತ್ತಮ ಫಲ ನೀಡಿದೆ.

ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಇಡೀ ಕ್ಯಾಬಿನೆಟ್ ರಾಜೀನಾಮೆ ನೀಡಿದ ನಂತರ ನಯಾಬ್ ಸಿಂಗ್ ಸೈನಿ ಅವರನ್ನು ಹೊಸ ಸಿಎಂ ಆಗಿ 2024ರ ಲೋಕಸಭೆ ಚುನಾವಣೆಗೆ ಮುನ್ನ ಘೋಷಿಸಲಾಯಿತು. ಇದು ಹರಿಯಾಣದಲ್ಲಿ ದೊಡ್ಡ ರಾಜಕೀಯ ಕ್ರಾಂತಿಯುಂಟು ಮಾಡಿತು. ಖಟ್ಟರ್ ಸಿಎಂ ಆಗಿ ನಾಲ್ಕೂವರೆ ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಜೆಪಿ ಸಮ್ಮಿಶ್ರ ಸರ್ಕಾರ ನಡೆಯುತ್ತಿತ್ತು. ಆದರೆ ಚುನಾವಣೆಗೆ ಮುನ್ನವೇ ರಾಜ್ಯಗಳ ಸಿಎಂಗಳನ್ನು ಬದಲಾಯಿಸುವುದು ಬಿಜೆಪಿಯ ಚುನಾವಣೆಗೆ ಮುನ್ನ ಆಡಳಿತ ವಿರೋಧಿಗಳನ್ನು ಸೋಲಿಸಿ ನಂತರ ಅಧಿಕಾರಕ್ಕೆ ಮರಳಲು ಒಂದು ಪ್ರವೃತ್ತಿಯಾಗಿದೆ.

ಗುಜರಾತ್‌ನಲ್ಲಿ ಕೂಡ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾಯಿಸಿತು ಮತ್ತು ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸಿದೆ ಎಂಬುದನ್ನು ಗಮನಿಸಬಹುದು. ನಂತರ ತ್ರಿಪುರಾದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಲಾಯಿತು. ಆಗಲೂ ಚುನಾವಣೆಯಲ್ಲಿ ಗೆದ್ದಿತು. ಉತ್ತರಾಖಂಡದಲ್ಲಿ ಇಬ್ಬರು ಸಿಎಂಗಳನ್ನು ಬದಲಿಸಿ ಬಿಜೆಪಿ ಗೆದ್ದಿದೆ. ಚುನಾವಣೆಗೆ ಮುನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿದ ಕರ್ನಾಟಕವನ್ನು ಹೊರತುಪಡಿಸಿ ಉಳಿದೆಡೆ ಬಿಜೆಪಿಯ ಈ ಪ್ರಯೋಗದಿಂದ ಸಕಾರಾತ್ಮಕ ಫಲಿತಾಂಶಗಳೇ ಸಿಕ್ಕಿವೆ. ಹರಿಯಾಣ ಬಿಜೆಪಿಯು ಸಿಎಂ ಅನ್ನು ಬದಲಾಯಿಸಿದ ಇತ್ತೀಚಿನ ರಾಜ್ಯವಾಗಿದೆ.

ಇದನ್ನೂ ಓದಿ: Jammu Kashmir Election Results: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸೋಲಿಗೆ ಕಾರಣವೇನು?

ಹರಿಯಾಣದಲ್ಲಿ ಬಿಜೆಪಿಯ ಅತ್ಯುತ್ತಮ ಪ್ರದರ್ಶನಕ್ಕಾಗಿ ನಯಾಬ್ ಸೈನಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಏಕೆಂದರೆ ಅವರು 6 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ನಿರ್ಧಾರಗಳು ಪಕ್ಷಕ್ಕೆ ಲಾಭದಾಯಕವಾಗಿವೆ. ಸೈನಿ ಈ ವರ್ಷದ ಮಾರ್ಚ್‌ನಲ್ಲಿ ಖಟ್ಟರ್ ಅವರ ಬದಲಾಗಿ ಸಿಎಂ ಹುದ್ದೆಗೇರಿದರು. ರೈತರು, ಕುಸ್ತಿಪಟುಗಳು ಮತ್ತು ಸೈನಿಕರ ಪ್ರಾಬಲ್ಯಗಳ ಹೊರತಾಗಿಯೂ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸ್ಥಳೀಯ ಸಮಸ್ಯೆಗಳ ಮೇಲೆ, ವಿಶೇಷವಾಗಿ ಉದ್ಯೋಗದ ವಿಷಯದ ಮೇಲೆ ಚುನಾವಣೆಗಳನ್ನು ಎದುರಿಸಿತು.

ಗುಜರಾತ್​ನಲ್ಲೂ ಇದೇ ಪ್ರಯೋಗ:

2022ರಲ್ಲಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ 15 ತಿಂಗಳ ಮೊದಲು, ಬಿಜೆಪಿ ನಾಯಕತ್ವವು ಅಂದಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಸಿಎಂ ಸ್ಥಾನದಿಂದ ದಿಢೀರನೆ ಬದಲಾಯಿಸಿತು. ರೂಪಾನಿ ನಂತರ, ಭೂಪೇಂದ್ರ ಪಟೇಲ್ ಅವರನ್ನು ಗುಜರಾತ್‌ನ ಹೊಸ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ನಂತರ 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಂಪರ್ ಗೆಲುವು ಸಾಧಿಸಿತು. ವಿಜಯ್ ರೂಪಾನಿ ಅವರ ಪದಚ್ಯುತಿಗೆ ಯಾವುದೇ ಅಧಿಕೃತ ಕಾರಣ ನೀಡಲಿಲ್ಲ.

ತ್ರಿಪುರಾದಲ್ಲೂ ಇದೇ ಪ್ಲಾನ್:

ತ್ರಿಪುರಾದಲ್ಲಿ ಬಿಜೆಪಿಯು 2018ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಎಡಪಕ್ಷಗಳ ಭದ್ರಕೋಟೆಯನ್ನು ಮುರಿಯಲು ಸಾಧ್ಯವಾಯಿತು. ಈ ಅದ್ಭುತ ವಿಜಯದ ನಂತರ, ಬಿಜೆಪಿ ಬಿಪ್ಲಬ್ ದೇಬ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. 2023ರಲ್ಲಿ ಬಿಪ್ಲಬ್ ಅವರ ಅವಧಿ ಮುಗಿಯುವ ಮೊದಲು ಅವರನ್ನು ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಬದಲಾಯಿಸಲಾಯಿತು. ಬಿಜೆಪಿ ಬಿಪ್ಲಬ್ ದೇಬ್ ಅವರನ್ನು ಸಂಘಟನೆಗೆ ಕಳುಹಿಸಿ ಮಾಣಿಕ್ ಸಹಾ ಅವರಿಗೆ ಸಿಎಂ ಕುರ್ಚಿ ನೀಡಿತು.

ಉತ್ತರಾಖಂಡದ ಲೆಕ್ಕಾಚಾರ:

ಈ ಹಿಂದೆ ಚುನಾವಣೆಗೂ ಮುನ್ನ ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿತ್ತು. ಇದು ಕೇಸರಿ ಪಕ್ಷದ ಅತ್ಯಂತ ಯಶಸ್ವಿ ಪ್ರಯೋಗ ಎಂದು ಹೇಳಲಾಗುತ್ತದೆ. ಆ ವೇಳೆ ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವುದನ್ನು ಮನಗಂಡ ಬಿಜೆಪಿ ನಾಯಕತ್ವವು ಎರಡು ಬಾರಿ ಮುಖ್ಯಮಂತ್ರಿಯನ್ನು ಬದಲಾಯಿಸಿತು. 2017ರಲ್ಲಿ ಉತ್ತರಾಖಂಡದಲ್ಲಿ ಬಿಜೆಪಿ ಗೆದ್ದಾಗ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಸಿಎಂ ಮಾಡಲಾಗಿತ್ತು.

ಇದನ್ನೂ ಓದಿ: ಹರಿಯಾಣ ಫಲಿತಾಂಶದ ಅಪ್​ಡೇಟ್​ ವಿಳಂಬ; ಕಾಂಗ್ರೆಸ್ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು

2021ರ ಹೊತ್ತಿಗೆ ರಾವತ್ ವಿರುದ್ಧದ ಶಾಸಕರ ಅಸಮಾಧಾನ ಹೆಚ್ಚಾಯಿತು. ಆದ್ದರಿಂದ ಹೈಕಮಾಂಡ್ ರಾವತ್ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿತು. ಮಾರ್ಚ್ 2021ರಲ್ಲಿ ರಾಜ್ಯದ ಅಧಿಕಾರವನ್ನು ತಿರತ್ ಸಿಂಗ್ ರಾವತ್ ಅವರಿಗೆ ಹಸ್ತಾಂತರಿಸಲಾಯಿತು. ಸರ್ಕಾರ, ಸಾರ್ವಜನಿಕ ಮತ್ತು ಆಡಳಿತದ ಮೇಲೆ ಛಾಪು ಮೂಡಿಸುವಲ್ಲಿ ತಿರತ್ ಸಿಂಗ್ ಕೂಡ ಯಶಸ್ವಿಯಾಗಲಿಲ್ಲ. 4 ತಿಂಗಳ ನಂತರ ಅವರನ್ನು ಸಿಎಂ ಸ್ಥಾನದಿಂದ ಕೈ ಬಿಡಲಾಯಿತು. ಅದರ ನಂತರ, 4 ಜುಲೈ 2021ರಂದು ಪುಷ್ಕರ್ ಸಿಂಗ್ ಧಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಮಾರ್ಚ್ 2022ರಲ್ಲಿ ಬಿಜೆಪಿಯು ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿ ಗೆದ್ದಿತು.

ಇದೀಗ ಸಿಎಂ ಅಭ್ಯರ್ಥಿಗಳನ್ನು ಬದಲಾಯಿಸುವ ಪ್ರಯೋಗವು ಇತರ ರಾಜ್ಯಗಳಲ್ಲಿ ಮಾಡಿದಂತೆ ಹರಿಯಾಣದಲ್ಲಿ ಬಿಜೆಪಿಗೆ ಸ್ಪಷ್ಟವಾಗಿ ಲಾಭದಾಯಕವಾಗಿದೆ. ಬಿಜೆಪಿಯ ಈ ಪ್ರಯೋಗ ಹರಿಯಾಣ ರಾಜ್ಯದಲ್ಲಿಯೂ ಫಲ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು