ಅರ್ಹರು ಕೊವಿಡ್-19 ಲಸಿಕೆ ಪಡೆಯುವಂತೆ ಸಹಕರಿಸಿ: ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ
ಜನಸಾಮಾನ್ಯರು ಲಸಿಕಾ ಕೇಂದ್ರಗಳಿಗೆ ತಲುಪಲು ಸಹಾಯ ಒದಗಿಸಬೇಕು. ಆ ನಿಟ್ಟಿನಲ್ಲಿ ಎಂಪಿಗಳು ಮತ್ತು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮೋದಿ ತಿಳಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದರು.
ದೆಹಲಿ: ದೇಶದ ಎಲ್ಲಾ ಲೋಕಸಭಾ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು, ಕೊರೊನಾ ಲಸಿಕೆ ಪಡೆಯಲು ಅರ್ಹತೆ ಹೊಂದಿರುವವರು ಕೊವಿಡ್-19 ಲಸಿಕೆ ಪಡೆಯುವಂತೆ ಸಹಕಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಸಂಸತ್ನಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಜನಸಾಮಾನ್ಯರು ಲಸಿಕಾ ಕೇಂದ್ರಗಳಿಗೆ ತಲುಪಲು ಸಹಾಯ ಒದಗಿಸಬೇಕು. ಆ ನಿಟ್ಟಿನಲ್ಲಿ ಎಂಪಿಗಳು ಮತ್ತು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮೋದಿ ತಿಳಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದರು.
ಸ್ವಾತಂತ್ರ್ಯ ಪಡೆದು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ 75 ವಾರಗಳ ಕಾಲ, 75 ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮಾರ್ಚ್ 12ರಿಂದಲೇ ಸಮಾರಂಭ ಆರಂಭಿಸಲಾಗುವುದು. ಇದರಲ್ಲೂ ಲೋಕಸಭಾ ಸದಸ್ಯರು ಪಾಲ್ಗೊಳ್ಳುವಂತೆ ಲೋಕಸಭಾ ಸದಸ್ಯರಿಗೆ ಮೋದಿ ಕರೆ ನೀಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಕೇಂದ್ರ ಸಚಿವರುಗಳಾದ ರಾಜ್ನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಡಾ. ಎಸ್. ಜೈಶಂಕರ್, ಪ್ರಹ್ಲಾದ್ ಪಟೇಲ್ ಮತ್ತಿತರರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು.
BJP parliament party meeting concludes at the Parliament. pic.twitter.com/hKW3fyh4nv
— ANI (@ANI) March 10, 2021
ಸದನದಲ್ಲಿ ಗದ್ದಲ, ಕಲಾಪ ಮುಂದೂಡಿಕೆ ರಾಜ್ಯ ಸಭೆ ಹಾಗೂ ಲೋಕ ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣ ಗದ್ದಲ ಉಂಟಾಗಿದೆ. ಹೀಗಾಗಿ, ಉಭಯ ಸದನಗಳಲ್ಲಿ ಕಲಾಪವನ್ನು ಮುಂದೂಡಲಾಗಿದೆ. ರಾಜ್ಯ ಸಭೆ ಕಲಾಪವು ಮಧ್ಯಾಹ್ನ 2ಗಂಟೆಯ ವರೆಗೆ ಮತ್ತು ಲೋಕಸಭೆ ಕಲಾಪವು ಮಧ್ಯಾಹ್ನ 12.30ರ ವರೆಗೆ ಮುಂದೂಡಲ್ಪಟ್ಟಿದೆ.
ನೂತನ ಕೃಷಿ ಕಾಯ್ದೆಗಳ ಕುರಿತಾಗಿ ಚರ್ಚೆ ನಡೆಸಬೇಕು ಎಂದೂ ಉಭಯ ಸದನಗಳಲ್ಲಿ ವಿಪಕ್ಷಗಳು ಆಗ್ರಹ ಮುಂದಿಟ್ಟಿವೆ. ಕಾಂಗ್ರೆಸ್, ಆರ್ಜೆಡಿ ಮತ್ತು ಡಿಎಂಕೆ ಪಕ್ಷಗಳು ರಾಜ್ಯ ಸಭೆಯಲ್ಲಿ ಸಸ್ಪೆನ್ಶನ್ ಆಫ್ ಬ್ಯುಸಿನೆಸ್ ನೊಟೀಸ್ ನೀಡಿದೆ. ಬಿಎಸ್ಪಿ ಲೋಕಸಭಾ ಸದಸ್ಯ ಅಶೋಕ್ ಸಿದ್ಧಾರ್ಥ್ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರದ ಬಗ್ಗೆ ರಾಜ್ಯಸಭೆಯಲ್ಲಿ ಸಸ್ಪೆನ್ಶನ್ ಆಫ್ ಬ್ಯುಸಿನೆಸ್ ನೊಟೀಸ್ ನೀಡಿದ್ದಾರೆ.
Lok Sabha Speaker Om Birla holds an all-party meeting in his chamber as the uproar over farmers’ protest continues in the House. pic.twitter.com/CnhYy6yUS7
— ANI (@ANI) March 10, 2021
ರೈತ ಹೋರಾಟ, ನೂತನ ಕೃಷಿ ಕಾಯ್ದೆಗಳ ಬಗ್ಗೆ ನಮ್ಮ ಪಕ್ಷದ ಇಬ್ಬರು ನಾಯಕರು ರಾಜ್ಯಸಭೆಯಲ್ಲಿ ಸಸ್ಪೆನ್ಶನ್ ಆಫ್ ಬ್ಯುಸಿನೆಸ್ ನೊಟೀಸ್ ನೀಡಿದ್ದಾರೆ. ನಾವು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ವಾಂಸರ ವ್ಯಾಖ್ಯಾನವಿರುವ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
75ನೇ ಸ್ವಾತಂತ್ರ್ಯ ದಿನಾಚರಣೆಗೆ ಮೆರುಗು ತುಂಬಲಿದೆ ಮೋದಿ ನೇತೃತ್ವದ 259 ಸದಸ್ಯರ ಸಮಿತಿ
Published On - 12:50 pm, Wed, 10 March 21