ಪ್ರೇಮಿಗಳ ದಿನದಂದು ಪತ್ನಿಯನ್ನು ಊಟಕ್ಕೆ ಕರೆದು ಕತ್ತು ಕೊಯ್ದ ಚಾರ್ಟರ್ಡ್​ ಅಕೌಂಟೆಂಟ್

ಹರಿಯಾಣದಲ್ಲಿ ಪ್ರೇಮಿಗಳ ದಿನದಂದು ಚಾರ್ಟರ್ಡ್ ಅಕೌಂಟೆಂಟ್ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಊಟಕ್ಕೆ ಆಹ್ವಾನಿಸಿ ಕತ್ತು ಕೊಯ್ದಿದ್ದು, ದರೋಡೆಯ ನಾಟಕವಾಡಿ ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದ. ಪತ್ನಿಯ ನಡತೆ ಬಗ್ಗೆ ಅನುಮಾನವೇ ಕೊಲೆಗೆ ಕಾರಣವೆಂದು ತನಿಖೆಯಿಂದ ಬಯಲಾಗಿದೆ. ಝಜ್ಜರ್ ಪೊಲೀಸರು 18 ಗಂಟೆಗಳಲ್ಲಿ ಈ ನಿಗೂಢ ಕೊಲೆಯನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರೇಮಿಗಳ ದಿನದಂದು ಪತ್ನಿಯನ್ನು ಊಟಕ್ಕೆ ಕರೆದು ಕತ್ತು ಕೊಯ್ದ ಚಾರ್ಟರ್ಡ್​ ಅಕೌಂಟೆಂಟ್
ಕೊಲೆ

Updated on: Feb 18, 2026 | 7:25 AM

ಹರಿಯಾಣ, ಫೆಬ್ರವರಿ 18: ಪ್ರೇಮಿಗಳ ದಿನದಂದೇ ಪತಿ ತನ್ನ ಪತ್ನಿಯನ್ನು ಕತ್ತು ಸೀಳಿ ಕೊಲೆ(Murder) ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಅಂದು ರಾತ್ರಿ ಊಟಕ್ಕೆ ಆಕೆಯನ್ನು ಕರೆದು ಬಳಿಕ ಕೊಲೆ ಮಾಡಿದ್ದಾನೆ. ಆತ ವೃತ್ತಿಯಲ್ಲಿ ಚಾರ್ಟರ್ಡ್​ ಅಕೌಂಟೆಂಟ್ ಆಗಿದ್ದಾನೆ. ಪ್ರೇಮಿಗಳ ದಿನ ಗಂಡ ಹೊರಗೆ ಊಟ ಕೊಡಿಸ್ತಾನೆ ಎಂದು ಖುಷಿಯಿಂದ ಕುಣಿದಾಡುತ್ತಾ ಹೋಗಿದ್ದ ಪತ್ನಿ ಶವವಾಗಿದ್ದಾಳೆ.

ಆಕೆಯನ್ನು ಕೊಲೆ ಮಾಡಿ ಬಳಿಕ ದರೋಡೆ ಕಥೆ ಕಟ್ಟಿ ಪೊಲೀಸರ ದಾರಿ ತಪ್ಪಿಸಲು ಆತ ಯತ್ನಿಸಿದ್ದ, ಹರಿಯಾಣದ ಬಹದ್ದೂರ್‌ಗಢದಲ್ಲಿ, ಬ್ಯಾಂಕ್ ಉದ್ಯೋಗಿ ಮೆಹೆಕ್ ಹತ್ಯೆಯ ಹಿಂದಿನ ನಿಗೂಢತೆಯನ್ನು ಝಜ್ಜರ್ ಪೊಲೀಸರು ಕೇವಲ 18 ಗಂಟೆಗಳಲ್ಲಿ ಭೇದಿಸಿದ್ದಾರೆ. ಮೊದಲು ದರೋಡೆ ಪ್ರಕರಣ ಎಂದು ತೋರುತ್ತಿದ್ದ ಪ್ರಕರಣವು ಶೀಘ್ರದಲ್ಲೇ ಆಕೆಯ ಪತಿ, ಚಾರ್ಟರ್ಡ್ ಅಕೌಂಟೆಂಟ್ ಅನ್ಶುಲ್ ಧವನ್ ಹೂಡಿದ್ದ ಯೋಜನೆ ಎಂಬುದು ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ 11 ಗಮಟೆ ಸುಮಾರಿಗೆ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಅನ್ಶುಲ್ ಪೊಲೀಸರಿಗೆ ಕರೆ ಮಾಡಿ, ಅಪರಿಚಿತ ದಾಳಿಕೋರರು ತಮ್ಮ ಮನೆಯನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಅವರ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದರು.

ಮತ್ತಷ್ಟು ಓದಿ: ಗರ್ಲ್​ಫ್ರೆಂಡ್ ಎದೆಯ ಮೇಲೆ ಹತ್ತಿ ಕುಳಿತು ಚಾಕು ಮುರಿಯುವವರೆಗೂ ಇರಿದು ಕೊಂದು, ಧೂಪ ಬೆಳಗಿ ಆಕೆಯ ಆತ್ಮ ಕರೆದ ವ್ಯಕ್ತಿ

ಆದರೆ ತನಿಖೆ ಆರಂಭವಾದ ಬಳಿಕ ಅಧಿಕಾರಿಗಳಿಗೆ ಆತನ ಹೇಳಿಕೆ ಮೇಲೆ ಅನುಮಾನ ಬಂದಿತ್ತು, ಅನ್ಶುಲ್ ಆಗಾಗ ಕಥೆಯನ್ನು ಬದಲಾಯಿಸುತ್ತಲೇ ಇದ್ದ. ದಾಳಿಕೋರರ ಬಗ್ಗೆ ವಿವರಣೆ ಕೊಡಲು ಆತನಿಗೆ ಸಾಧ್ಯವಾಗಲಿಲ್ಲ. ಇದು ಪೊಲೀಸರಿಗೆ ಇನ್ನಷ್ಟು ಅನುಮಾನ ಹುಟ್ಟುಹಾಕಿತ್ತು.

ಆದರೆ ಮತ್ತಷ್ಟು ಪ್ರಶ್ನೆಗಳನ್ನು ಪೊಲೀಸರು ಕೇಳಿದಾಗ, ಅನ್ಶುಲ್ ಕೊನೆಗೂ ಪತ್ನಿಯನ್ನು ತಾನೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಗುರುಗ್ರಾಮದ ಎಚ್​ಡಿಎಫ್​ಸಿ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಬಗ್ಗೆ ಮೊದಲಿನಿಂದಲೂ ಆತನಿಗೆ ಅನುಮಾನವಿತ್ತು. ಅವರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಈ ಅನುಮಾನವು ಅಂತಿಮವಾಗಿ ಅವರನ್ನು ಅಪರಾಧದತ್ತ ದೂಡಿತ್ತು. ಮೆಹೆಕ್ ತಂದೆ ಕಥುರಿಯಾ ಮೊದಲಿನಿಂದಲೂ ತನ್ನ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಕೊಲೆಯ ಸಮಯದಲ್ಲಿ, ಅನ್ಶುಲ್ ಯಾವುದೇ ಬೆರಳಚ್ಚುಗಳನ್ನು ಬಿಡದಂತೆ ಕೈಗವಸುಗಳನ್ನು ಧರಿಸಿದ್ದ. ಮೊದಲು ಮೆಹೆಕ್​​ಳ ಕತ್ತು ಹಿಸುಕಿ ಕೊಂದು ನಂತರ ಕತ್ತರಿ ಬಳಸಿ ಆಕೆಯ ಗಂಟಲು ಸೀಳಿದ್ದ. ಹಿಸಾರ್ ನಿವಾಸಿ ಅನ್ಶುಲ್ ಮತ್ತು ಹನ್ಸಿಯ ಮೆಹೆಕ್ ಇಬ್ಬರೂ ಕಳೆದ ವರ್ಷ ಸೆಪ್ಟೆಂಬರ್ 25 ರಂದು ವಿವಾಹವಾಗಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us