ಬಾಲಕರ ಹಾಸ್ಟೆಲ್ ನಲ್ಲಿ ವಾರ್ಡನ್ ಕಿರುಕುಳ, ಅಶ್ಲೀಲ ವಿಡಿಯೋ ತೋರಿಸಿ ಹೆದರಿಸುತ್ತಿದ್ದಾರಂತೆ!

| Updated By: ಸಾಧು ಶ್ರೀನಾಥ್​

Updated on: Sep 12, 2022 | 2:59 PM

ವಿದ್ಯಾರ್ಥಿಗಳು ಸ್ನಾನ ಮಾಡುವಾಗ ಹಾಸ್ಟೆಲ್ ವಾರ್ಡನ್ ಸ್ನಾನಗೃಹಕ್ಕೆ ನುಗ್ಗುತ್ತಿದ್ದರು ಎಂದು ಸಂತ್ರಸ್ತ ಅಪ್ರಾಪ್ತ ಬಾಲಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬಾಲಕರ ಹಾಸ್ಟೆಲ್ ನಲ್ಲಿ ವಾರ್ಡನ್ ಕಿರುಕುಳ, ಅಶ್ಲೀಲ ವಿಡಿಯೋ ತೋರಿಸಿ ಹೆದರಿಸುತ್ತಿದ್ದಾರಂತೆ!
ಬಾಲಕರ ಹಾಸ್ಟೆಲ್ ನಲ್ಲಿ ವಾರ್ಡನ್ ನಿಂದ ಕಿರುಕುಳ, ಪಾರ್ನ್ ವಿಡಿಯೋ ತೋರಿಸಿ ಹೆದರಿಸುತ್ತಿದ್ದಾರಂತೆ!
Follow us on

Hyderabad: ಹೈದರಾಬಾದ್‌ನಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಲಕರ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ನ ದೌರ್ಜನ್ಯ ಬೆಳಕಿಗೆ ಬಂದಿದೆ. ಪೋರ್ನ್ ವಿಡಿಯೋಗಳನ್ನು ತೋರಿಸಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಾಸ್ಟೆಲ್ ವಾರ್ಡನ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಾರ್ಡನ್ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಏಳು ಮಂದಿ ವಿದ್ಯಾರ್ಥಿಗಳ ಗುಂಪು ವಾರ್ಡನ್ ವಿರುದ್ಧ ಹಯಾತ್​ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಇದೀಗ ವಾರ್ಡನ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಬಾಲಕರ ಹಾಸ್ಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ವಾರ್ಡನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಆರೋಪಿಯು ಒಂದು ತಿಂಗಳ ಹಿಂದೆಯಷ್ಟೇ ​​ವಾರ್ಡನ್‌ ಆಗಿನ ಹಾಸ್ಟೆಲ್ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಇರುತ್ತಿದ್ದ ಆತ ಆಗಾಗ ಅಪ್ರಾಪ್ತರ ಸಂಪರ್ಕಕ್ಕೆ ಬರುತ್ತಿದ್ದ ಎನ್ನಲಾಗಿದೆ.

ವಾರ್ಡನ್ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸಲು ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಿದ್ದ ಎಂದು ದೂರನ್ನು ಉಲ್ಲೇಖಿಸಿ, ಪೊಲೀಸರು ತಿಳಿಸಿದ್ದಾರೆ. ಮೇಲಾಗಿ ಆತ ಒಂಟಿಯಾಗಿದ್ದು, ಹುಡುಗರ ಬಳಿ ಹೋಗಿ ದೌರ್ಜನ್ಯ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಸ್ನಾನ ಮಾಡುವಾಗ ಸ್ನಾನಗೃಹಕ್ಕೆ ನುಗ್ಗುತ್ತಿದ್ದರು ಎಂದು ಸಂತ್ರಸ್ತ ಅಪ್ರಾಪ್ತ ಬಾಲಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಹಾಸ್ಟೆಲ್‌ನ ಏಳು ಅಪ್ರಾಪ್ತ ವಿದ್ಯಾರ್ಥಿಗಳಿಗೆ ಈ ರೀತಿ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದಲ್ಲದೆ, ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ಮಕ್ಕಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಯಾರಿಗೂ ಹೇಳಬೇಡಿ, ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ವಾರ್ಡನ್ ಬೆದರಿಕೆ ಹಾಕಿದ್ದಾರೆ.

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾರ್ಡನ್ ಪದೇ ಪದೇ ಕಿರುಕುಳ ನೀಡುತ್ತಿದ್ದು, ಬೆದರಿಕೆ ಹಾಕುತ್ತಿದ್ದ. ಈ ಕಿರುಕುಳ ಸಹಿಸಲಾಗದೆ ಅವರು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕರು ತಮ್ಮ ಪೋಷಕರಿಗೆ ಇಡೀ ವೃತ್ತಾಂತವನ್ನು ವಿವರಿಸಿ, ಹೇಳಿಕೊಂಡಿದ್ದಾರೆ. ಇದರಿಂದ ಬಾಲಕರ ಪೋಷಕರು ಪೊಲೀಸ್ ಠಾಣೆಗೆ ತೆರಳಿ, ವಾರ್ಡನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ವಾರ್ಡನ್ ಆಂಧ್ರಪ್ರದೇಶದ ನಿವಾಸಿ. ಈತನ ಹೆಸರು ಮುರ್ರಂ ಕೃಷ್ಣ ಮತ್ತು ವಯಸ್ಸು 35 ವರ್ಷ. ಆರೋಪಿ ವಾರ್ಡನ್ ವಿರುದ್ಧ ಏಳು ಮಂದಿ ಅಪ್ರಾಪ್ತರು ಪ್ರಕರಣ ದಾಖಲಿಸಿದ್ದಾರೆ. ಹಯಾತ್​ ನಗರ ಪೊಲೀಸರು ವಾರ್ಡನ್ ವಿರುದ್ಧ ಒಟ್ಟು 7 ಪ್ರಕರಣಗಳನ್ನು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

To read more in Telugu click here: