AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಒಬಿಸಿ ಎಂದಲ್ಲ, ಓವೈಸಿ ಎಂದು ಹೇಳಿದ್ದು: ವಿವಾದಿತ ವೈರಲ್ ವಿಡಿಯೊ ಬಗ್ಗೆ ರಾಮ್‌ದೇವ್

ರಾಮ್‌ದೇವ್ ಅವರು ತಮ್ಮ ಬ್ರಾಹ್ಮಣ ಗುರುತನ್ನು ಪ್ರತಿಪಾದಿಸುವ ಮೂಲಕ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಹಳೇ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಮ್‌ದೇವ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ

ನಾನು ಒಬಿಸಿ ಎಂದಲ್ಲ, ಓವೈಸಿ ಎಂದು ಹೇಳಿದ್ದು: ವಿವಾದಿತ ವೈರಲ್ ವಿಡಿಯೊ ಬಗ್ಗೆ ರಾಮ್‌ದೇವ್
ಬಾಬಾ ರಾಮ್​​ದೇವ್
ರಶ್ಮಿ ಕಲ್ಲಕಟ್ಟ
|

Updated on: Jan 14, 2024 | 12:54 PM

Share

ದೆಹಲಿ ಜನವರಿ 14: ಯೋಗ ಗುರು ರಾಮ್‌ದೇವ್ (Yoga guru Ramdev) ಅವರು ಇತರ ಹಿಂದುಳಿದ ವರ್ಗಗಳ (OBC) ವಿರುದ್ಧ ಟೀಕೆ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಬಾಬಾ ರಾಮ್ ದೇವ್ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ , ಯೋಗ ಗುರು ನಾನು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ (Asaduddin Owaisi)ಅವರನ್ನು ಉದ್ದೇಶಿಸಿ ಓವೈಸಿ ಎಂದು ಹೇಳಿದ್ದೇನೆ. ಆದರೆ ಒಬಿಸಿ ಸಮುದಾಯವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ ಎಂದಿದ್ದಾರೆ.

ರಾಮ್‌ದೇವ್ ಅವರು ತಮ್ಮ ಬ್ರಾಹ್ಮಣ ಗುರುತನ್ನು ಪ್ರತಿಪಾದಿಸುವ ಮೂಲಕ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಹಳೇ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಮ್‌ದೇವ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

“ನಾನು ‘ಓವೈಸಿ’ ಎಂದು ಹೇಳಿದ್ದೇನೆ. ‘ಒಬಿಸಿ’ ಎಂದಲ್ಲ. ಓವೈಸಿ ಅವರ ಪೂರ್ವಜರು ದೇಶ ವಿರೋಧಿಗಳು, ನಾನು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ರಾಮ್‌ದೇವ್ ಹೇಳಿದ್ದಾರೆ.

ಅವರ ಹೇಳಿಕೆಯ ನಂತರ, ಅಸಾದುದ್ದೀನ್ ಓವೈಸಿ ಈ ರೀತಿ ‘ಯು-ಟರ್ನ್’ ಮಾಡಿದ್ದಕ್ಕಾಗಿ ಬಾಬಾ ರಾಮ್‌ದೇವ್ ಅವರನ್ನು ಟೀಕಿಸುವ ಪೋಸ್ಟ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಒಬಿಸಿವಾಲೇ ಅಪ್ನೀ ತೈಸೀ ಕರಾಯೇ ಎಂದು ಹೇಳಿ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಕ್ಕಾಗಿ ವಂಚಕ ರಾಮ್‌ದೇವ್ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ?” ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಸಂಯೋಜಕರೊಬ್ಬರು ವೈರಲ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲೇನಿದೆ? ವೈರಲ್ ವಿಡಿಯೊದಲ್ಲಿ ಬಾಬಾ ರಾಮ್‌ದೇವ್, ನನ್ನ ಮೂಲ ಗೋತ್ರ ಬ್ರಹ್ಮ ಗೋತ್ರ. ನಾನು ಅಗ್ನಿಹೋತ್ರಿ ಬ್ರಾಹ್ಮಣ. ಜನರು ಬಾಬಾಜಿ ಒಬಿಸಿ ಎಂದು ಹೇಳುತ್ತಾರೆ. ನಾನು ವೇದಿ ಬ್ರಾಹ್ಮಣ, ದ್ವಿವೇದಿ ಬ್ರಾಹ್ಮಣ, ತ್ರಿವೇದಿ ಬ್ರಾಹ್ಮಣ, ಚತುರ್ವೇದಿ ಬ್ರಾಹ್ಮಣ – ನಾನು ನಾಲ್ಕು ವೇದಗಳನ್ನು ಓದಿದ್ದೇನೆ ಎನ್ನುತ್ತಾರೆ. ಇದರಲ್ಲಿ ಬಾಬಾ ಒಬಿಸಿವಾಲೇ ಅಪ್ನೀ ಐಸೀ ತೈಸೀ ಕರಾಯೇ ಎಂಬ ವಾಕ್ಯ ಪ್ರಯೋಗ ಮಾಡಿದ್ದು, ಐಸೀ ತೈಸೀ ಎಂಬ ಪದವನ್ನು ಹಿಂದಿಯಲ್ಲಿ ಬೈಗುಳ ಅಥವಾ ಮತ್ತೊಬ್ಬರನ್ನು ಅವಮಾನಿಸಲು ಬಳಸಲಾಗುತ್ತದೆ.

ಇದನ್ನೂ ಓದಿ: Baba Ramdev: ಮೊದಲು ನಮಾಜ್ ಓದುವುದು, ನಂತರ ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸುವುದು, ಭಯೋತ್ಪಾದನೆ ಸೃಷ್ಟಿಸುವುದು: ಬಾಬಾ ರಾಮ್​ದೇವ್

ವಿಡಿಯೊ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು #boycottpatanjali ಎಂದು ಪ್ರತಿಭಟಿಸಿದ್ದು, ಹಿಂದುಳಿದ ಸಮುದಾಯಕ್ಕೆ ಮಾಡಿದ ಅವಮಾನಕ್ಕಾಗಿ ರಾಮ್‌ದೇವ್ ಅವರನ್ನು ಟೀಕಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ