ರಕ್ಷಣಾ ಕಾರ್ಯಾಚರಣೆಗಾಗಿ ಉತ್ತರಾಖಂಡ ಸರ್ಕಾರಕ್ಕೆ 200 ಕೋಟಿ ರೂ. ಬಿಲ್ ಕಳುಹಿಸಿದ ಐಎಎಫ್

2000ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದಾಗಿನಿಂದ ಉತ್ತರಾಖಂಡ ಸರ್ಕಾರಕ್ಕೆ ಭಾರತೀಯ ವಾಯುಪಡೆ (ಐಎಎಫ್) ಸುಮಾರು 207 ಕೋಟಿ ರೂ.ಗಳ ಬಿಲ್ ನೀಡಿದೆ. ವಾಯುಪಡೆ ನೀಡಿರುವ 200 ಕೋಟಿ ರೂ. ಬಿಲ್‌ನಲ್ಲಿ 67 ಕೋಟಿ ರೂ.ಗಳು ಕೇವಲ ವಿಪತ್ತು ನಿರ್ವಹಣೆಗೆ ಸಂಬಂಧಿಸಿದೆ.

ರಕ್ಷಣಾ ಕಾರ್ಯಾಚರಣೆಗಾಗಿ ಉತ್ತರಾಖಂಡ ಸರ್ಕಾರಕ್ಕೆ 200 ಕೋಟಿ ರೂ. ಬಿಲ್ ಕಳುಹಿಸಿದ ಐಎಎಫ್
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Nov 19, 2024 | 3:29 PM

ಡೆಹ್ರಾಡೂನ್: 2000ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ನಂತರ ವಿಪತ್ತುಗಳ ಸಂದರ್ಭದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ವಾಯುಪಡೆಯ ಸೇವೆಗಳನ್ನು ಪಡೆಯಲಾಗಿದೆ. ಇದಕ್ಕೆ ಪ್ರತಿಯಾಗಿ 200 ಕೋಟಿ ರೂ. ನೀಡುವಂತೆ ಉತ್ತರಾಖಂಡ ಸರ್ಕಾರಕ್ಕೆ ಭಾರತೀಯ ವಾಯುಪಡೆ ಪತ್ರ ಬರೆದಿದೆ.

ಉತ್ತರಾಖಂಡ ಸರ್ಕಾರದಿಂದ ವಾಯುಪಡೆಯ ಸೇವೆಗಳನ್ನು ವಿವಿಧ ಸಮಯಗಳಲ್ಲಿ ತೆಗೆದುಕೊಳ್ಳಲಾಗಿದೆ. ಈ ಸೇವೆಗಳಿಗೆ ಹಣ ಪಾವತಿಸಬೇಕೆಂದು ಪತ್ರ ಬರೆಯಲಾಗಿದೆ ಎಂದು ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಹೇಳಿದ್ದಾರೆ.

ವಾಯುಪಡೆ ನೀಡಿರುವ 200 ಕೋಟಿ ರೂ. ಬಿಲ್‌ನಲ್ಲಿ 67 ಕೋಟಿ ರೂ.ಗಳು ಕೇವಲ ವಿಪತ್ತು ನಿರ್ವಹಣೆಗೆ ಸಂಬಂಧಿಸಿದೆ. ಇದರಲ್ಲಿ 24 ಕೋಟಿ ರೂಪಾಯಿಗಳನ್ನು ಈಗಾಗಲೇ ಪಾವತಿಸಲಾಗಿದೆ ಮತ್ತು 28 ಕೋಟಿ ರೂಪಾಯಿಗಳ ಇತರ ಬಿಲ್‌ಗಳನ್ನು ಪರಿಶೀಲಿಸಲಾಗಿದೆ. ಮುಂದಿನ ಪಾವತಿ ಪ್ರಕ್ರಿಯೆಗಳು ನಡೆಯುತ್ತಿವೆ. ಭಾರತೀಯ ವಾಯುಪಡೆಯು (IAF) ಪ್ರವಾಸೋದ್ಯಮ, ಲೋಕೋಪಯೋಗಿ, ಸೈನಿಕ ಕಲ್ಯಾಣ, ಸಾಮಾನ್ಯ ಆಡಳಿತ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಇಲಾಖೆಗಳೊಂದಿಗೆ 200 ಕೋಟಿ ಮೊತ್ತದ ತನ್ನ ಬಾಕಿಯನ್ನು ಪಾವತಿಸಲು ಉತ್ತರಾಖಂಡ ಸರ್ಕಾರಕ್ಕೆ ಮನವಿ ಮಾಡಿದೆ.

ಇದನ್ನೂ ಓದಿ: ಉತ್ತರಾಖಂಡ: ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಮಗುವನ್ನು ಎಳೆದೊಯ್ದ ಚಿರತೆ

ಸಮಸ್ಯೆಯನ್ನು ಪರಿಹರಿಸಲು ವಿಪತ್ತು ನಿರ್ವಹಣಾ ಇಲಾಖೆಯು (DMD) ಪ್ರವಾಸೋದ್ಯಮ ಮತ್ತು ಅರಣ್ಯದಂತಹ ಇತರ ಇಲಾಖೆಗಳನ್ನು ತಲುಪಿದೆ. ಕೆಲವು ಭಾರತೀಯ ವಾಯುಪಡೆಯ ಬಿಲ್‌ಗಳು ಸುಮಾರು 20 ವರ್ಷಗಳಷ್ಟು ಹಿಂದಿನವು. ಪ್ರಸ್ತುತ ಅವುಗಳನ್ನು ಪರಿಶೀಲಿಸಲಾಗುತ್ತಿದೆ. IAF ರಾಜ್ಯ ಸರ್ಕಾರಕ್ಕೆ ಇದುವರೆಗೂ 3 ಪತ್ರಗಳನ್ನು ಕಳುಹಿಸಿದೆ. ಅವುಗಳಲ್ಲಿ ಮೊದಲನೆಯದು ಆಗಸ್ಟ್ 27ರಂದು ವಾಯುಪಡೆಯ ಪ್ರಧಾನ ಕಛೇರಿಯಿಂದ, ನಂತರ ಸೆಪ್ಟೆಂಬರ್ 18 ಮತ್ತು 19ರಂದು ರಿಮೈಂಡರ್​ ಕಳುಹಿಸಲಾಗಿದೆ.

ಆದರೆ, ನಿರಂತರ ರಿಮೈಂಡರ್​ಗಳನ್ನು ಕಳುಹಿಸಿದರೂ ಮಿಲಿಟರಿ ಪ್ರಾಬಲ್ಯದ ಉತ್ತರಾಖಂಡ ರಾಜ್ಯವು IAFಗೆ ಒಂದು ಪೈಸೆಯನ್ನು ಕೂಡ ಹಿಂದಿರುಗಿಸಲು ವಿಫಲವಾಗಿದೆ. ಈ ಆರ್ಥಿಕ ಒತ್ತಡದ ಭಾರವನ್ನು ಸಹಿಸಲಾಗದ ಉತ್ತರಾಖಂಡ ರಾಜ್ಯ ಸರ್ಕಾರವು ಅಕ್ಟೋಬರ್ 22ರಂದು ಎಸಿಇಒ ವಿಪತ್ತು ನಿರ್ವಹಣೆಗೆ ಪತ್ರ ಬರೆದು, ವಾಯುಪಡೆಯ ಪತ್ರಗಳ ಬಗ್ಗೆ ತಿಳಿಸಿ ಮತ್ತು ಕ್ರಮ ಕೈಗೊಳ್ಳಲು ಸೂಚಿಸಿದೆ. ವಿಪತ್ತು ನಿರ್ವಹಣಾ ಇಲಾಖೆಯು ತಮ್ಮ ಬಾಕಿ ಮೊತ್ತವನ್ನು ಪಾವತಿಸುವಂತೆ ಇತರ ಇಲಾಖೆಗಳಿಗೆ ಪತ್ರಗಳನ್ನು ಬರೆದಿದೆ.

ಇದನ್ನೂ ಓದಿ: Breaking: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್, 36 ಮಂದಿ ಸಾವು, ಕೇಂದ್ರದಿಂದ ಪರಿಹಾರ

ಉತ್ತರಾಖಂಡದಲ್ಲಿ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ವಾಯುಪಡೆಯ ಹೆಲಿಕಾಪ್ಟರ್‌ಗಳು ಆಗಾಗ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿತ್ತು. ಉತ್ತರಾಖಂಡವು 2020ರ ಕಾಡಿನ ಬೆಂಕಿ, 2013ರ ಕೇದಾರನಾಥ ದುರಂತ, 1999ರ ಚಮೋಲಿ ಭೂಕಂಪ, 1998ರ ಮಾಲ್ಪಾ ಭೂಕುಸಿತ ಮತ್ತು 1991ರ ಉತ್ತರಕಾಶಿ ಭೂಕಂಪದಂತಹ ಪ್ರವಾಹಗಳು, ಭೂಕುಸಿತಗಳು ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳ ಇತಿಹಾಸವನ್ನು ಹೊಂದಿದೆ.

ಪ್ರಸ್ತುತ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ 67 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದು, ಅದರಲ್ಲಿ 24 ಕೋಟಿ ರೂ.ಗಳನ್ನು ಪಾವತಿಸಲಾಗಿದೆ, ಇನ್ನೂ 43 ಕೋಟಿ ರೂ. ಬಾಕಿ ಇದೆ. ಐಎಎಫ್ ಕಳುಹಿಸಿದ 200 ಕೋಟಿ ರೂಪಾಯಿ ಮೌಲ್ಯದ ಬಿಲ್‌ಗಳು ಸುಮಾರು 20 ವರ್ಷ ಹಳೆಯದಾಗಿರುವ ಕಾರಣ ಪರಿಶೀಲನೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ