AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ತಿಂಗಳಿಂದ ಈ ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ಸಿಗಲ್ಲ!

ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಮಾಲಿನ್ಯವನ್ನು ನಿಯಂತ್ರಿಸಲು ಪ್ರಮುಖ ಹೆಜ್ಜೆಯನ್ನು ಇಡುತ್ತಿರುವ ಬಿಜೆಪಿ ಸರ್ಕಾರ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಮಾರ್ಚ್ 31ರಿಂದ ಪಂಪ್‌ಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂದು ಘೋಷಿಸಿದೆ. ಅಂತಹ ವಾಹನಗಳನ್ನು ಗುರುತಿಸಲು ತಂಡವನ್ನು ರಚಿಸಲಾಗುವುದು ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದರು.

ಮುಂದಿನ ತಿಂಗಳಿಂದ ಈ ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ಸಿಗಲ್ಲ!
Old Vehicles
ಸುಷ್ಮಾ ಚಕ್ರೆ
|

Updated on: Mar 01, 2025 | 6:05 PM

Share

ನವದೆಹಲಿ (ಮಾರ್ಚ್ 1): ಹಳೆಯ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನು ನಿರ್ಬಂಧಿಸುವುದರ ಜೊತೆಗೆ, ರಾಷ್ಟ್ರ ರಾಜಧಾನಿ ದೆಹಲಿಯ ಎಲ್ಲಾ ಬಹುಮಹಡಿ ಕಟ್ಟಡಗಳು, ಹೋಟೆಲ್‌ಗಳು ಮತ್ತು ಕಮರ್ಷಿಯಲ್ ಕಾಂಪ್ರೆಕ್ಸ್​ ಗಳಲ್ಲಿ ವಾಯು ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಅಳವಡಿಸಬೇಕು ಎಂದು ಪರಿಸರ ಸಚಿವ ಮಂಜಿಂದರ್ ಸಿರ್ಸಾ ಘೋಷಿಸಿದ್ದಾರೆ.

“ನಾವು ಪೆಟ್ರೋಲ್ ಪಂಪ್‌ಗಳಲ್ಲಿ ಗ್ಯಾಜೆಟ್‌ಗಳನ್ನು ಸ್ಥಾಪಿಸುತ್ತಿದ್ದೇವೆ. ಅದು 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುರುತಿಸುತ್ತದೆ. ಅವುಗಳಿಗೆ ಯಾವುದೇ ಪೆಟ್ರೋಲ್ ಅಥವಾ ಡೀಸೆಲ್ ನೀಡುವುದಿಲ್ಲ” ಎಂದು ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಎದುರಿಸಲು ಕ್ರಮಗಳನ್ನು ಚರ್ಚಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳನ್ನು ರಸ್ತೆಗಳಲ್ಲಿ ಅನುಮತಿಸದ ನೀತಿಯನ್ನು ಹೊಂದಿದೆ. 2021ರ ಆದೇಶದಲ್ಲಿ 2022ರ ಜನವರಿ 1ರ ನಂತರ ರಸ್ತೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಸ್ಕ್ರ್ಯಾಪ್‌ಯಾರ್ಡ್‌ಗೆ ಕಳುಹಿಸಲಾಗುವುದು ಎಂದು ಹೇಳಲಾಗಿತ್ತು.

ಇದನ್ನೂ ಓದಿ: ದೆಹಲಿಯ ಸೂಫಿ ಸಂಗೀತ ಉತ್ಸವ ಜಹಾನ್-ಎ-ಖುಸ್ರೌನಲ್ಲಿ ನಾಳೆ ಪ್ರಧಾನಿ ಮೋದಿ ಭಾಗಿ

ಮಾರ್ಚ್ 31ರ (ಸೋಮವಾರ) ನಂತರ ದೆಹಲಿ ಸರ್ಕಾರವು ನಗರದಾದ್ಯಂತದ ಇಂಧನ ಕೇಂದ್ರಗಳಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ನೀಡುವುದನ್ನು ನಿಲ್ಲಿಸಲಿದೆ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಇಂದು ಘೋಷಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಎದುರಿಸಲು ಕ್ರಮಗಳ ಕುರಿತು ಚರ್ಚಿಸಲು ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ, ವಾಹನ ಹೊರಸೂಸುವಿಕೆ ಮತ್ತು ಮಾಲಿನ್ಯವನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಿರ್ಸಾ ಹೇಳಿದ್ದಾರೆ.

ದೆಹಲಿಯಲ್ಲಿ ಶೇ. 90ರಷ್ಟು ಸಾರ್ವಜನಿಕ ಸಿಎನ್‌ಜಿ ಬಸ್‌ಗಳನ್ನು ಡಿಸೆಂಬರ್ 2025ರ ವೇಳೆಗೆ ಸ್ಥಗಿತಗೊಳಿಸಲಾಗುವುದು. ಅವುಗಳನ್ನು ವಿದ್ಯುತ್ ಬಸ್‌ಗಳಿಂದ ಬದಲಾಯಿಸಲಾಗುವುದು. ದೆಹಲಿ ಸರ್ಕಾರವು ಈ ನಿರ್ಧಾರದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ತಿಳಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್
ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಬೆಂಗಳೂರಿನಲ್ಲಿಲ್ಲೂ ಗನ್​ ತೋರಿಸಿ ಬಂಗಾರದ ಅಂಗಡಿ ದರೋಡೆ
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಜೈಲಿಗೆ ಕರೆದೊಯ್ಯವಾಗ ಅಡ್ಡಹಾಕಿದ ರಾಜೀವ್ ಗೌಡನ ಬೆಂಬಲಿಗರಿಗೆ ಲಾಠಿ ರುಚಿ!
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ಏಮ್ಸ್ ಆಸ್ಪತ್ರೆಯೊಳಗೆ ಲಿಫ್ಟ್​ನಲ್ಲೇ ಮಾಂಗಲ್ಯ ದೋಚಿ ಕಳ್ಳ ಪರಾರಿ
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
ವಿಜಯಪುರ ರಾಬರಿ: ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
10ನೇ ದಿನ ಉತ್ಖನನ ವೇಳೆ ಲಕ್ಕುಂಡಿಯಲ್ಲಿ ಮತ್ತೊಂದು ಪ್ರಾಚ್ಯಾವಶೇಷ ಪತ್ತೆ!
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಕಾವ್ಯಾ ಗೌಡ ಪತಿಯಿಂದ ಕೊಲೆ ಬೆದರಿಕೆ? ಎಲ್ಲವನ್ನೂ ವಿವರಿಸಿದ ಸಂಬಂಧಿ ಪ್ರೇಮಾ
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಹಲ್ಲೆ, ಅತ್ಯಾಚಾರ ಬೆದರಿಕೆ, ಕಳ್ಳತನ ಆರೋಪ: ನಟಿ ಕಾವ್ಯಾ ಗೌಡ ಹೇಳಿದ್ದೇನು?
ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ
ಶಿವಮೊಗ್ಗ: ಶಾಲೆಯಲ್ಲಿ ನೀಡಿದ ಮಾತ್ರೆ ನುಂಗಿ 59 ವಿದ್ಯಾರ್ಥಿಗಳು ಅಸ್ವಸ್ಥ
'ಮಿನಿ ಕಾಶ್ಮೀರ'ದಲ್ಲಿ ಮಕ್ಕಳ ಆಟ
'ಮಿನಿ ಕಾಶ್ಮೀರ'ದಲ್ಲಿ ಮಕ್ಕಳ ಆಟ