ಖಾರಿಫ್ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ್ದಕ್ಕಾಗಿ ಮೋದಿಗೆ ಧನ್ಯವಾದ ಹೇಳಿದ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ

2014 ರಿಂದ ಪ್ರಧಾನವಾಗಿ ಬೆಳೆದ ಬೆಳೆಗಳಿಗೆ ಸರಾಸರಿ ಶೇ 60 ರಿಂದ ಶೇ80 ರಷ್ಟು ಎಂಎಸ್‌ಪಿ ಹೆಚ್ಚಳದಿಂದಾಗಿ ತೆಲಂಗಾಣ ರೈತರು ಅಪಾರ ಪ್ರಯೋಜನ ಪಡೆದಿದ್ದಾರೆ.

ಖಾರಿಫ್ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದ್ದಕ್ಕಾಗಿ ಮೋದಿಗೆ ಧನ್ಯವಾದ ಹೇಳಿದ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ
ಜಿ ಕಿಶನ್ ರೆಡ್ಡಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 07, 2023 | 8:21 PM

ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ (Kharif Crops) ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದ್ದು, ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ (G Kishan Reddy) ಅವರು ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಚಿವರು ಹೇಳಿಕೆ ಬಿಡುಗಡೆ ಮಾಡಿದ್ದು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸಲು ಭಾರತ ಸರ್ಕಾರವು 2023-24 ರ ಮಾರ್ಕೆಟಿಂಗ್ ಸೀಸನ್‌ಗಾಗಿ ಖಾರಿಫ್ ಬೆಳೆಗಳ MSP ಅನ್ನು ಹೆಚ್ಚಿಸಿದೆ ಎಂದಿದ್ದಾರೆ.

2014 ರಿಂದ ತೆಲಂಗಾಣದ ರೈತರು ಎಂಎಸ್‌ಪಿ ಹೆಚ್ಚಳದಿಂದ ಅಪಾರ ಪ್ರಯೋಜನ ಪಡೆದಿದ್ದಾರೆ ಎಂದು ಸಚಿವರು ಹೇಳಿದ್ದಾರೆ. 2014 ರಿಂದ ಪ್ರಧಾನವಾಗಿ ಬೆಳೆದ ಬೆಳೆಗಳಿಗೆ ಸರಾಸರಿ ಶೇ 60 ರಿಂದ ಶೇ80 ರಷ್ಟು ಎಂಎಸ್‌ಪಿ ಹೆಚ್ಚಳದಿಂದಾಗಿ ತೆಲಂಗಾಣ ರೈತರು ಅಪಾರ ಪ್ರಯೋಜನ ಪಡೆದಿದ್ದಾರೆ. ಸೂರ್ಯಕಾಂತಿ, ಹತ್ತಿ, ಜೋಳ ಮತ್ತು ಭತ್ತದಂತಹ ಬೆಳೆಗಳಲ್ಲಿ ಕನಿಷ್ಠ ಬೆಂಬಲ ಬೆಲೆಯ ಹೆಚ್ಚಳವನ್ನು ಸಚಿವರು ಹೈಲೈಟ್ ಮಾಡಿದ್ದಾರೆ. ಸೂರ್ಯಕಾಂತಿ 2014 ರಿಂದ ಶೇ80 ಕ್ಕಿಂತ ಹೆಚ್ಚು ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಕಂಡಿದೆ. ಹತ್ತಿ ರೈತರನ್ನು ಉತ್ತೇಜಿಸಲು ಮತ್ತು ತೆಲಂಗಾಣ ಕೈಮಗ್ಗ ಮತ್ತು ಜವಳಿಗಳನ್ನು ಉತ್ತೇಜಿಸಲು ಹತ್ತಿಗೆ 2014 ರಿಂದ ಶೇ 75 ಎಂಎಸ್ ಪಿ ಹೆಚ್ಚಳ ಮಾಡಿದೆ. ಇದು ಎರಡನೇ ಅತಿ ದೊಡ್ಡ ಭತ್ತ ಉತ್ಪಾದಿಸುವ ರಾಜ್ಯವಾಗಿರುವುದರಿಂದ, 2014 ರಿಂದ ಭತ್ತ ಮತ್ತು ಮೆಕ್ಕೆಜೋಳದ ಎಂಎಸ್ ಪಿಯಲ್ಲಿ ಸರಿಸುಮಾರು ಶೇ 60 ರಷ್ಟು ಏರಿಕೆಯಾಗಿದ್ದು ಅನ್ನದಾತರಿಗೆ ಪ್ರಯೋಜನವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಬೆಳೆ: 2014-15ರ ಎಂಎಸ್‌ಪಿ;  2023-24ರ ಎಂಎಸ್‌ಪಿ; 2014ರಿಂದ ಆದ ಹೆಚ್ಚಳ(ಶೇಕಡಾವಾರು)

ಭತ್ತ -ಸಾಮಾನ್ಯ :– 1360 -2183- 61%

ಭತ್ತ-ದರ್ಜೆ A: -1400- 2203 -57%

ಮೆಕ್ಕೆಜೋಳ: 1310- 2090 -60%

ಸೂರ್ಯಕಾಂತಿ ಬೀಜ :-3750- 6760- 80%

ಹತ್ತಿ (Medium Staple):3750- 6620- 77%

ಹತ್ತಿ (Long Staple) :4050- 7020- 73%

ಇದನ್ನೂ ಓದಿ: MSP Before 2014: ರೈತರ ಬೆಳೆಗಳಿಗೆ 2014ಕ್ಕೆ ಮುಂಚೆ ಎಂಎಸ್​ಪಿ ಎಷ್ಟಿತ್ತು, ಈಗೆಷ್ಟಿದೆ? ಇಲ್ಲಿದೆ ಒಂದು ಹೋಲಿಕೆ

ಎಂಎಸ್‌ಪಿ ಹೆಚ್ಚಳವು 2018-19ರ ಕೇಂದ್ರ ಬಜೆಟ್‌ನಲ್ಲಿ ಎಂಎಸ್‌ಪಿಯನ್ನು ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ ಶೇ50ರಷ್ಟು ನಿಗದಿಪಡಿಸುವ ಘೋಷಣೆಗೆ ಅನುಗುಣವಾಗಿದೆ ಎಂದು ಸಚಿವರು ಹೇಳಿದ್ದಾರೆ. ತೆಲಂಗಾಣದಲ್ಲಿ ಬೆಳೆಯುವ ಭತ್ತ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತು ಹತ್ತಿಯಂತಹ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಮೇಲೆ ರೈತರಿಗೆ ನಿರೀಕ್ಷಿತ ಮಾರ್ಜಿನ್ ಕನಿಷ್ಠ ಶೇ50 ಎಂದು ಅಂದಾಜಿಸಲಾಗಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:09 pm, Wed, 7 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್