ಉಪ ರಾಷ್ಟ್ರಪತಿ ಸ್ಥಾನದಿಂದ ಜಗದೀಪ್ ಧಂಖರ್ ವಜಾಗೊಳಿಸಲು ವಿರೋಧ ಪಕ್ಷ ನೋಟಿಸ್ ಸಲ್ಲಿಸುವ ಸಾಧ್ಯತೆ

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರನ್ನು ಪ್ರತಿಪಕ್ಷಗಳ ವಿರುದ್ಧ ಪಕ್ಷಪಾತಿ ಎಂದು ಪದೇ ಪದೇ ಆರೋಪಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್, ಅವರನ್ನು ಭಾರತದ ಉಪ ರಾಷ್ಟ್ರಪತಿ ಸ್ಥಾನದಿಂದ ತೆಗೆದುಹಾಕಲು ನೋಟಿಸ್ ಸಲ್ಲಿಸುವ ಸಾಧ್ಯತೆಯಿದೆ.

ಉಪ ರಾಷ್ಟ್ರಪತಿ ಸ್ಥಾನದಿಂದ ಜಗದೀಪ್ ಧಂಖರ್ ವಜಾಗೊಳಿಸಲು ವಿರೋಧ ಪಕ್ಷ ನೋಟಿಸ್ ಸಲ್ಲಿಸುವ ಸಾಧ್ಯತೆ
ಜಗದೀಪ್ ಧಂಖರ್
Follow us
|

Updated on:Aug 09, 2024 | 10:44 PM

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಮತ್ತು ಇಂಡಿಯಾ ಬ್ಲಾಕ್ ಪಕ್ಷಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ, ಉಪರಾಷ್ಟ್ರಪತಿಯನ್ನು ಅವರ ಕಚೇರಿಯಿಂದ ಪದಚ್ಯುತಗೊಳಿಸುವ ನಿರ್ಣಯವನ್ನು ಮಂಡಿಸಲು ಪ್ರತಿಪಕ್ಷಗಳು ನೋಟಿಸ್ ಸಲ್ಲಿಸಲು ಚಿಂತನೆ ನಡೆಸಿವೆ. ನೋಟಿಸ್‌ನ ಸಮಯವನ್ನು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಂವಿಧಾನದ ಪರಿಚ್ಛೇದ 67(ಬಿ) ಪ್ರಕಾರ, “ರಾಜ್ಯಗಳ ಕೌನ್ಸಿಲ್ (ರಾಜ್ಯಸಭೆ) ನಿರ್ಣಯದ ಮೂಲಕ ಉಪರಾಷ್ಟ್ರಪತಿಯನ್ನು ಅವರ ಹುದ್ದೆಯಿಂದ ತೆಗೆದುಹಾಕಬಹುದು. ಜಗದೀಪ್ ಧಂಖರ್ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸ್ತಾವನೆಗೆ 87 ಸದಸ್ಯರು ಸಹಿ ಹಾಕಿದ್ದಾರೆ ಎಂದು ವಿರೋಧ ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ಬಿಜೆಪಿಯಿಂದ ಭಾರತದಾದ್ಯಂತ ‘ಹರ್ ಘರ್ ತಿರಂಗ’ ಅಭಿಯಾನ

ಈ ಬಗ್ಗೆ ಎರಡು ದಿನಗಳ ಹಿಂದೆ ಸದನದ ನಾಯಕ ಜೆಪಿ ನಡ್ಡಾ ಅವರಿಗೆ ಅನೌಪಚಾರಿಕವಾಗಿ ತಿಳಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ. ಪ್ರತಿಪಕ್ಷಗಳು ಸದನವನ್ನು ನಿಯಮಗಳು ಮತ್ತು ಸಂಪ್ರದಾಯಗಳ ಮೂಲಕ ನಡೆಸಬೇಕೆಂದು ಬಯಸುತ್ತವೆ ಮತ್ತು ಸದಸ್ಯರ ವಿರುದ್ಧ ವೈಯಕ್ತಿಕ ಟೀಕೆಗಳು ಸ್ವೀಕಾರಾರ್ಹವಲ್ಲ ಎಂದು ಮೂಲಗಳು ತಿಳಿಸಿವೆ.

ಇಡೀ ವಿರೋಧ ಪಕ್ಷದ ವಿರುದ್ಧ ಅಧ್ಯಕ್ಷರು “ಪಕ್ಷಪಾತ” ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿ ಜಗದೀಪ್ ಧಂಖರ್ ಮತ್ತು ಇಂಡಿಯಾ ಬ್ಲಾಕ್ ಪಕ್ಷಗಳು ಇಂದು ಮತ್ತೊಮ್ಮೆ ಕಿತ್ತಾಡಿಕೊಂಡವು.

ಇದನ್ನೂ ಓದಿ: ವಿರೋಧಪಕ್ಷದ ಸದಸ್ಯರು ಹೇಳಿದಂತೆ ಸರ್ಕಾರ ಕುಣಿಯಲಾಗಲ್ಲ: ಪ್ರಿಯಾಂಕ್ ಖರ್ಗೆ

ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶವಿಲ್ಲ. ಆಗಾಗ ಅಡ್ಡಿಪಡಿಸಲಾಗುತ್ತದೆ ಮತ್ತು ಅವರ ಮೈಕ್‌ಗಳನ್ನು ಆಗಾಗ ಆಫ್ ಮಾಡಲಾಗುತ್ತದೆ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Fri, 9 August 24