ಯುದ್ಧ ಪೀಡಿತ ಪ್ಯಾಲೆಸ್ತೀನ್ಗೆ ಭಾರತ ನೆರವು, 30 ಟನ್ ಔಷಧ, ಆಹಾರ ಪದಾರ್ಥಗಳ ರವಾನೆ
ಇಸ್ರೇಲ್-ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ, ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ನೀಡುವಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ.
ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಭಾರತವು ಪ್ಯಾಲೆಸ್ತೀನ್ಗೆ ನೆರವು ಒದಗಿಸಿದೆ. ಪ್ಯಾಲೆಸ್ತೀನ್ ಸಮಸ್ಯೆಯನ್ನು ಶಾಂತಿಯುತ ವಿಧಾನಗಳ ಮೂಲಕ ಪರಿಹರಿಸಲು ಭಾರತವು ತನ್ನ ದೃಢವಾದ ಮತ್ತು ನಿರಂತರ ಬದ್ಧತೆಯನ್ನು ಪುನರುಚ್ಚರಿಸಿದೆ.
30 ಟನ್ ಔಷಧ, ಆಹಾರ ಪದಾರ್ಥಗಳನ್ನು ರವಾನಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಯ ಮೂಲಕ ಪ್ಯಾಲೆಸ್ಟೈನ್‌ಗೆ ಒಟ್ಟು 30 ಟನ್ ಔಷಧ ಸಾಮಗ್ರಿಗಳು, ಆಹಾರಗಳನ್ನು ಕಳುಹಿಸಿದೆ.
ಇದರಲ್ಲಿ ಅಗತ್ಯ ಔಷಧಗಳು, ಶಸ್ತ್ರಚಿಕಿತ್ಸಾ ಸರಬರಾಜುಗಳು ಮತ್ತು ಬಿಸ್ಕತ್ತುಗಳು ಸೇರಿವೆ. ಭಾರತವು ಯುಎನ್‌ಆರ್‌ಡಬ್ಲ್ಯೂಎ ಮೂಲಕ ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವು ನೀಡುತ್ತಿದೆ. 30 ಟನ್ ಔಷಧಿ ಮತ್ತು ಆಹಾರ ಪದಾರ್ಥಗಳನ್ನು ಒಳಗೊಂಡ ಮೊದಲ ಹಂತದ ನೆರವು ನೀಡಲಾಗಿದೆ.
ಗಾಜಾ ಪಟ್ಟಿಯಲ್ಲಿರುವ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪಿನ ಬಂದೂಕುಧಾರಿಗಳು ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ಗೆ ನುಗ್ಗಿ 1,200 ಜನರನ್ನು ಕೊಂದು 253 ಒತ್ತೆಯಾಳುಗಳನ್ನು ಇಸ್ರೇಲಿ ಟ್ಯಾಲಿಗಳಿಂದ ವಶಪಡಿಸಿಕೊಂಡ ನಂತರ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ.
ಮತ್ತಷ್ಟು ಓದಿ: ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 73 ಮಂದಿ ಸಾವು
ಗಾಜಾ ಯುದ್ಧವು ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನ್ ನಡುವಿನ ಸುದೀರ್ಘ ಸಂಘರ್ಷ ಇನ್ನೂ ರಕ್ತಸಿಕ್ತವಾಗಿಯೇ ಇದೆ. ಇಸ್ರೇಲ್ ಹಾಗೂ ಗಾಜಾ ಪಟ್ಟಿ ನಡುವೆ 1 ವರ್ಷದಿಂದ ಕೂಡ ಭೀಕರ ಕದನ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆ ಕೂಡ ಶುರುವಾಗಿದೆ.
ಅದು ಅಕ್ಟೋಬರ್ 7, 2023 ಯಾರೂ ಊಹಿಸದ ಘಟನೆ ನಡೆದಿತ್ತು. ಎರಡು ದೇಶಗಳ ಮಧ್ಯೆ ಇದೇ ದಿನ ಭೀಕರ ಯುದ್ಧ ಶುರುವಾಗಿತ್ತು. ಇಸ್ರೇಲ್ ಹಾಗೂ ಹಮಾಸ್ ದಿಢೀರ್ ಯುದ್ಧ ಬೆಂಕಿ ಹೊತ್ತಿಕೊಂಡಿತ್ತು. ಬಡಿದಾಟವು ಕೂಡ ಶುರುವಾಗಿತ್ತು. ಹೀಗೆ ಅಲ್ಲಿ ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 1 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ ಈ ಯುದ್ಧಕ್ಕೆ ಕಾರಣವಾಗಿದ್ದವನ ಹತ್ಯೆ ಮಾಡಿರುವ ಇಸ್ರೇಲ್ ಯುದ್ಧ ನಿಲ್ಲಿಸುತ್ತಾ? ಎಂಬ ಕುತೂಹಲ ಮೂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ