Operation Devi Shakti: ಅಫ್ಘಾನ್​​ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ಆಪರೇಶನ್​ ದೇವಿ ಶಕ್ತಿ’ ಎಂದು ನಾಮಕರಣ

Kabul Airport: ಭಾನುವಾರ ಕಾಬೂಲ್​ನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಸೋಮವಾರದಿಂದ ಭಾರತ ತಮ್ಮ ದೇಶದ ಜನರನ್ನು ಅಲ್ಲಿಂದ ಕರೆದುಕೊಂಡು ಬರಲು ಶುರು ಮಾಡಿದೆ. ಸೋಮವಾರ 40 ಭಾರತೀಯರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಏರ್​ಲಿಫ್ಟ್ ಮಾಡಲಾಗಿತ್ತು.

Operation Devi Shakti: ಅಫ್ಘಾನ್​​ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ಆಪರೇಶನ್​ ದೇವಿ ಶಕ್ತಿ’ ಎಂದು ನಾಮಕರಣ
ಸ್ಥಳಾಂತರ ಪ್ರಕ್ರಿಯೆಯ ಚಿತ್ರ
Follow us
| Updated By: Lakshmi Hegde

Updated on:Aug 24, 2021 | 2:55 PM

ಉಗ್ರರ ವಶದಲ್ಲಿರುವ ಅಫ್ಘಾನಿಸ್ತಾನ (Afghanistan)ದಿಂದ ಭಾರತೀಯರನ್ನು ಮರಳಿ ದೇಶಕ್ಕೆ ಕರುವ ಕಾರ್ಯಾಚರಣೆ ಕಳೆದ ಸೋಮವಾರದಿಂದಲೂ ನಡೆಯುತ್ತಿದೆ.  ಹೀಗೆ ಅಫ್ಘಾನ್​ನ ಕಾಬೂಲ್​ ವಿಮಾನ ನಿಲ್ದಾಣದಿಂದ ಭಾರತೀಯರು ಮತ್ತು ಅಫ್ಘಾನ್​ನ ಅಲ್ಪಸಂಖ್ಯಾತರನ್ನು ಭಾರತಕ್ಕೆ ತರುವ ಕಾರ್ಯಾಚರಣೆಗೆ ಇದೀಗ ‘ಆಪರೇಶನ್​ ದೇವಿ ಶಕ್ತಿ (Operation Devi Shakti) ’ಎಂದು ಹೆಸರು ನೀಡಲಾಗಿದೆ.  ಟ್ವೀಟ್​ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​, ಅಫ್ಘಾನ್​ನಿಂದ ಭಾರತಕ್ಕೆ ಜನರನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆಗೆ ಆಪರೇಶನ್​ ದೇವಿ ಶಕ್ತಿ ಎಂದು ಇನ್ನು ಮುಂದೆ ಕರೆಯಲಾಗುತ್ತದೆ ಎಂದಿದ್ದಾರೆ. ಹಾಗೇ, ಇಂದು 78ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಾಗಿ ಮಾಹಿತಿ ನೀಡಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರೊಂದಿಗೆ, ಅಲ್ಲಿನ ಅಲ್ಪಸಂಖ್ಯಾತ ಹಿಂದು ಮತ್ತು ಸಿಖ್​ ಸಮುದಾಯದವರನ್ನೂ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗುತ್ತಿದೆ. ಹಾಗೇ, ಇಂದು ಬೆಳಗ್ಗೆ 78 ಜನರ ಒಂದು ಬ್ಯಾಚ್​ ಕಾಬೂಲ್​ ಬಿಟ್ಟಿದ್ದು, ಅದು ತಜಕೀಸ್ತಾನದ ರಾಜಧಾನಿ ದುಶಾಂಬೆ ಮೂಲಕ ಭಾರತ ತಲುಪಲಿದೆ. ಈ ಬಗ್ಗೆ ಟ್ವೀಟ್ ಮಾಡಿದ ಎಸ್​.ಜೈಶಂಕರ್​, ಆಪರೇಶನ್​ ದೇವಿ ಶಕ್ತಿ ಮುಂದುವರಿಯುತ್ತಿದೆ. ಇಂದು 78 ಜನರ ಬ್ಯಾಚ್​ವೊಂದು ಕಾಬೂಲ್​ ಬಿಟ್ಟಿದೆ. ದುಶಾಂಬೆ ಮೂಲಕ ಆಗಮಿಸಲಿದೆ. ಸ್ಥಳಾಂತರ ಪ್ರಕ್ರಿಯೆ ನಡೆಸುತ್ತಿರುವ ಐಎಎಫ್​ ಎಂಸಿಸಿ, ಏರ್​ ಇಂಡಿಯಾ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ಜೈಶಂಕರ್ ತಮ್ಮ ಟ್ವೀಟ್​ನಲ್ಲಿ ಆಪರೇಶನ್​ ದೇವಿ ಶಕ್ತಿ ಎಂದು ಉಲ್ಲೇಖಿಸಿದಾಗಲೇ, ಭಾರತ ಸರ್ಕಾರ ಹೀಗೊಂದು ಹೆಸರಿಟ್ಟಿದೆ ಎಂಬುದು ಗೊತ್ತಾಗಿದ್ದು.

ಭಾನುವಾರ ಕಾಬೂಲ್​ನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಸೋಮವಾರದಿಂದ ಭಾರತ ತಮ್ಮ ದೇಶದ ಜನರನ್ನು ಅಲ್ಲಿಂದ ಕರೆದುಕೊಂಡು ಬರಲು ಶುರು ಮಾಡಿದೆ. ಸೋಮವಾರ 40 ಭಾರತೀಯರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಏರ್​ಲಿಫ್ಟ್ ಮಾಡಲಾಗಿತ್ತು. ಅಂದಿನಿಂದಲೂ ಕಾಬೂಲ್​ನಲ್ಲಿ ಭದ್ರತಾ ವ್ಯವಸ್ಥೆ ಹದಗೆಡುತ್ತಿದೆ. ಈ ಮಧ್ಯೆಯೂ ಭಾರತ ಇಲ್ಲಿಯವರೆಗೆ 800ಕ್ಕೂ ಹೆಚ್ಚು ಜನರನ್ನು ಅಫ್ಘಾನ್​ನಿಂದ ಕರೆದುಕೊಂಡು ಬಂದಿದೆ.

ಏರ್​ಪೋರ್ಟ್ ಹೊರಗೆ ಜನಸಂದಣಿ ಅಫ್ಘಾನಿಸ್ತಾನದಲ್ಲಿ ಇರುವ ವಿವಿಧ ದೇಶಗಳ ಜನರನ್ನು ಸ್ಥಳಾಂತರ ಮಾಡುವ ಕೆಲಸವನ್ನು ಆಯಾ ದೇಶಗಳು ಮಾಡುತ್ತಿವೆ. ಹಾಗೇ, ಅಫ್ಘಾನ್ ನಾಗರಿಕರು ಬೇರೆ ದೇಶಗಳಿಗೆ ಹೋಗಲು ಇಚ್ಛಿಸುವವರಿಗೂ ಕೈಲಾದ ಸಹಾಯ ಮಾಡುತ್ತಿವೆ. ಈ ಮಧ್ಯೆ ಉಗ್ರರ ಆಡಳಿತಕ್ಕೆ ಹೆದರಿ, ಅಫ್ಘಾನ್ ತೊರೆಯಲು ಸಾವಿರಾರು ಜನರು ಕಾಬೂಲ್​ ಏರ್​ಪೋರ್ಟ್​ ಹೊರಗೆ ಸೇರುತ್ತಿದ್ದಾರೆ. ಅನೇಕರು ಒಂದು ವಾರದಿಂದಲೂ ವಿಮಾನ ನಿಲ್ದಾಣದ ಹೊರಗಿನ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ

Bay of Bengal Earthquake: ಬಂಗಾಳ ಕೊಲ್ಲಿಯಲ್ಲಿ ಭೂಕಂಪ; ಚೆನ್ನೈ ಭಾಗದಲ್ಲಿ ಕಂಪಿಸಿದ ನೆಲ

(India gave a name as operation Devi Shakti to the evacuation drive of Indian nationals)

Published On - 2:39 pm, Tue, 24 August 21