AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 300 ರೂಪಾಯಿ ಟಿಕೆಟ್ ಬಿಡುಗಡೆ; ದೈನಂದಿನ ಹುಂಡಿ ಆದಾಯದಲ್ಲಿಯೂ ಹೆಚ್ಚಳ

ಟಿಟಿಡಿ‌ ವೆಬ್ ಸೈಟ್‌ ಮೂಲಕ‌ ಭಕ್ತರು ಟಿಕೆಟ್‌ ಬುಕ್ ಮಾಡಲು ಕೂಡ‌ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಕೊವಿಡ್ ಎರಡನೇ ಅಲೆಯ ನಂತರ ತಿರುಪತಿಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 300 ರೂಪಾಯಿ ಟಿಕೆಟ್ ಬಿಡುಗಡೆ; ದೈನಂದಿನ ಹುಂಡಿ ಆದಾಯದಲ್ಲಿಯೂ ಹೆಚ್ಚಳ
ತಿರುಪತಿ ದೇವಾಲಯ
TV9 Web
| Edited By: |

Updated on: Aug 24, 2021 | 1:29 PM

Share

ತಿರುಪತಿ: ಆಂಧ್ರದ‌ ತಿರುಮಲದಲ್ಲಿ 300 ರೂಪಾಯಿಗೆ ದೇವರ ದರ್ಶನ‌ದ ಟಿಕೆಟ್ ಬಿಡುಗಡೆ ಮಾಡಲಾಗಿದೆ. ದಿನಕ್ಕೆ 8 ಟಿಕೆಟ್​ಗಳಂತೆ ಸಾರ್ವಜನಿಕರಿಗೆ ಸೆಪ್ಟೆಂಬರ್ ತಿಂಗಳ ಮುಂಗಡ ಟಿಕೆಟ್ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಟಿಟಿಡಿ‌ ವೆಬ್ ಸೈಟ್‌ ಮೂಲಕ‌ ಭಕ್ತರು ಟಿಕೆಟ್‌ ಬುಕ್ ಮಾಡಲು ಕೂಡ‌ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಕೊವಿಡ್ ಎರಡನೇ ಅಲೆಯ ನಂತರ ತಿರುಪತಿಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಕೊರೊನಾ ಎರಡನೇ ಅಲೆಯ ಲಾಕ್​ಡೌನ್​ ನಂತರದಲ್ಲಿ ದೇವಾಲಯದ ಪ್ರವೇಶಕ್ಕೆ ಅವಕಾಶ ದೊರೆತಿದ್ದು, ಭಕ್ತರು ದೇವರ ದರ್ಶನಕ್ಕೆ ಮುಂದಾಗಿದ್ದಾರೆ. ಇದರ ಅನುಸಾರ ಆಂಧ್ರ ಪ್ರದೇಶದಲ್ಲಿನ ತಿರುಮಲದ‌ ಬಾಲಾಜಿ ದೇವಾಲಯವೂ ಕೂಡ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಆ ಪ್ರಕಾರ ಕಳೆದ‌ 24 ಗಂಟೆಗಳಲ್ಲಿ ತಿರುಮಲದ‌ ಬಾಲಾಜಿ ದೇವಾಲಯದ ಹುಂಡಿಯಲ್ಲಿ ಅಧಿಕ ಪ್ರಮಾಣದ ಆದಾಯ‌ ಸಂಗ್ರಹವಾಗಿದೆ. ನಿನ್ನೆ (ಆಗಸ್ಟ್, 23) 2.32 ಕೋಟಿ ರೂಪಾಯಿ ಹುಂಡಿಗೆ‌ ಆದಾಯ ಸಂಗ್ರಹವಾಗಿದ್ದು, 22076 ಭಕ್ತರು ಬಾಲಾಜಿಯ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ 11250 ಭಕ್ತರು ತಿರುಮಲದ‌ ಬಾಲಾಜಿ ದೇವಾಲಯದಲ್ಲಿ ತಲೆಕೂದಲು ಸಮರ್ಪಣೆ ಮಾಡಿದ್ದಾರೆ.

ಕಳೆದ ಬಾರಿ ಅಂದರೆ ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿನ ಲಾಕ್​ಡೌನ್​ಗೂ ಮುನ್ನ ತಿರುಮಲದ ಬಾಲಾಜಿ ದೇವಸ್ಥಾನದಲ್ಲಿ 800 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗುತ್ತಿತ್ತು. ನಂತರ ಅಂದರೆ ಮೊದಲ ಕೊರೊನಾ ಅಲೆಯ ಅನ್​ಲಾಕ್​ ಬಳಿಕ (ಜೂನ್ 2020 ರಲ್ಲಿ )ಕೊವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹಲವಾರು ನಿರ್ಬಂಧಗಳೊಂದಿಗೆ ಈ ದೇವಾಲಯವನ್ನು ತೆರೆಯಲಾಯಿತು. ಅದರಂತೆ ಟಿಕೆಟ್ ಸಂಗ್ರಹಣೆ, ಪ್ರಸಾದಗಳ ಮಾರಾಟ, ವಸತಿ ಸೌಕರ್ಯಗಳು ಮತ್ತು ಹುಂಡಿ ಸಂಗ್ರಹಗಳು ಸೇರಿದಂತೆ ಒಟ್ಟಾರೆ ಆದಾಯದ ಮೇಲೆ ಪರಿಣಾಮ ಬೀರಿತು. ಆ ಪ್ರಕಾರ 100-150 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.

ಕೊವಿಡ್​ಗೂ ಮುನ್ನ60,000ದಿಂದ ಒಂದು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಸರಾಸರಿ ಹುಂಡಿ ಸಂಗ್ರಹವು ಪ್ರತಿದಿನ ಸುಮಾರು 3.5 ರಿಂದ 5 ಕೋಟಿ ರೂಪಾಯಿವರೆಗೆ ಸಂಗ್ರಹವಾಗುತ್ತಿತ್ತು. ಮೊದಲನೇ ಅಲೆಯ ಲಾಕ್​ಡೌನ್​ ಮುಗಿದ ನಂತರ ಹಂತ ಹಂತವಾಗಿ ಹುಂಡಿ ಆದಾಯ ಹೆಚ್ಚಾಗಿದ್ದು, ಜೂನ್‌ನಲ್ಲಿ ದೇವಾಲಯಕ್ಕೆ 1.1 ಕೋಟಿ ರೂಪಾಯಿ, ಜುಲೈ 16.69 ಕೋಟಿ ರೂಪಾಯಿ, ಆಗಸ್ಟ್ 18.43 ಕೋಟಿ ರೂಪಾಯಿ, ಸೆಪ್ಟೆಂಬರ್ 32.04 ಕೋಟಿ ರೂಪಾಯಿ, ಅಕ್ಟೋಬರ್ 47.52 ಕೋಟಿ ರೂಪಾಯಿ, ನವೆಂಬರ್ 61.29 ಕೋಟಿ ರೂಪಾಯಿ, ಡಿಸೆಂಬರ್ 79.64 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಇದನ್ನೂ ಓದಿ: ತಿರುಪತಿ ದೇವಾಲಯದ ಹುಂಡಿ ಹಣ ಎಣಿಕೆ; 24 ಗಂಟೆಗಳಲ್ಲಿ 2.55 ಕೋಟಿ ರೂ. ಸಂಗ್ರಹ

ಮಂತ್ರಾಲಯದಲ್ಲಿ ಮಧ್ಯರಾಧನೆ: ತಿರುಪತಿ ತಿರುಮಲದಿಂದ ಬಂದ ಶೇಷವಸ್ತ್ರ ರಾಯರ ಬೃಂದಾವನಕ್ಕೆ ಸಮರ್ಪಣೆ

Follow Us
TV9 Web
TV9 Web

TV9 Kannada

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ