ಅಮೆರಿಕದಲ್ಲಿರುವ ಅಕ್ರಮ ವಲಸಿಗರನ್ನು ಭಾರತ ವಾಪಾಸ್ ಪಡೆಯಲು ಸಿದ್ಧ; ಪ್ರಧಾನಿ ಮೋದಿ ಮಹತ್ವದ ಹೇಳಿಕೆ
ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಈಗಾಗಲೇ ಅಮೆರಿಕದಲ್ಲಿರುವ ಭಾರತದ ಅಕ್ರಮ ವಲಸಿಗರನ್ನು ಭಾರತಕ್ಕೆ ವಾಪಾಸ್ ಕಳಿಸಿದೆ. ಇನ್ನೂ 2 ವಿಮಾನಗಳಲ್ಲಿ ಈ ವಾರ ಅಮೆರಿಕದ ಅಕ್ರಮ ವಲಸಿಗರು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಅಮೆರಿಕದ ಈ ಕ್ರಮದ ನಡುವೆ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿದೇಶಗಳಲ್ಲಿರುವ ಅಕ್ರಮ ವಲಸಿಗರನ್ನು ಭಾರತ ಹಿಂಪಡೆಯಲು ಸಿದ್ಧವಿದೆ ಎಂದು ಹೇಳಿದ್ದಾರೆ.

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ದಾಖಲೆರಹಿತ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, ಪರಿಶೀಲಿಸಿದ ಅಕ್ರಮ ವಲಸಿಗರನ್ನು ವಾಪಾಸ್ ಪಡೆಯಲು ಭಾರತ ಸಿದ್ಧವಾಗಿದೆ ಎಂದು ಅಮೆರಿಕಕ್ಕೆ ಭರವಸೆ ನೀಡಿದ್ದಾರೆ. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಭಾರತೀಯರನ್ನು ಗಡೀಪಾರು ಮಾಡಿ ಭಾರತಕ್ಕೆ ಹಿಂದಿರುಗಿಸಿದ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮವನ್ನು ಬೆಂಬಲಿಸಿದ್ದಾರೆ. ಈ ವಿಷಯದ ಬಗ್ಗೆ ಭಾರತದ ನಿಲುವನ್ನು ಮೋದಿ ಪುನರುಚ್ಛರಿಸಿದ್ದಾರೆ. “ಜನರು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ, ಭಾರತ ಅವರನ್ನು ಮರಳಿ ಸ್ವೀಕರಿಸಲು ಸಿದ್ಧವಾಗಿದೆ” ಎಂದು ಮೋದಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ ವಿಚಾರವನ್ನು ಮೋದಿಗೆ ಬಿಟ್ಟಿದ್ದೀವಿ, ಅವರೇ ನೋಡಿಕೊಳ್ತಾರೆ ಎಂದ ಟ್ರಂಪ್
President Trump often talks about MAGA.
In India, we are working towards a Viksit Bharat, which in American context translates into MIGA.
And together, the India-USA have a MEGA partnership for prosperity!@POTUS @realDonaldTrump pic.twitter.com/i7WzVrxKtv
— Narendra Modi (@narendramodi) February 14, 2025
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಭಾರತೀಯರನ್ನು ಗಡೀಪಾರು ಮಾಡಿ ಭಾರತಕ್ಕೆ ಹಿಂತಿರುಗಿಸಿದ ಕೆಲವೇ ದಿನಗಳಲ್ಲಿ ಮೋದಿಯವರ ಈ ಹೇಳಿಕೆ ಬಂದಿದೆ. ಅಕ್ರಮ ವಲಸಿಗರು ಅಮೆರಿಕದ ಮಿಲಿಟರಿ ಸಿ -17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ಅಮೃತಸರಕ್ಕೆ ಆಗಮಿಸಿದ್ದರು. ಇದು ಟ್ರಂಪ್ ಆಡಳಿತ ವಲಸಿಗರ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮದ ಅಡಿಯಲ್ಲಿ ಗಡೀಪಾರು ಮಾಡಲಾದ ಭಾರತೀಯರ ಮೊದಲ ಬ್ಯಾಚ್ ಆಗಿದೆ. 2 ಮತ್ತು 3ನೇ ಬ್ಯಾಚ್ನ ಅಕ್ರಮ ವಲಸಿಗರು ಈ ವಾರ ಭಾರತಕ್ಕೆ ಹಿಂತಿರುಗಲಿದ್ದಾರೆ.
#WATCH | Washington, DC: On the illegal immigration issue, PM Narendra Modi says, “…Those who stay in other countries illegally do not have any legal right to be there. As far as India and the US are concerned, we have always said that those who are verified and are truly the… pic.twitter.com/Qa0JEnAjyp
— ANI (@ANI) February 13, 2025
ಇತರ ದೇಶಗಳಲ್ಲಿ ಅಕ್ರಮವಾಗಿ ವಾಸವಾಗಿರುವವರಿಗೆ ಅಲ್ಲಿರಲು ಯಾವುದೇ ಕಾನೂನುಬದ್ಧ ಹಕ್ಕಿಲ್ಲ. ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಿಶೀಲಿಸಲ್ಪಟ್ಟವರು ಮತ್ತು ನಿಜವಾಗಿಯೂ ಭಾರತದ ನಾಗರಿಕರಾದವರು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೆ ಭಾರತ ಅವರನ್ನು ಮರಳಿ ಸ್ವೀಕರಿಸಲು ಸಿದ್ಧವಾಗಿದೆ ಎಂದು ನಾವು ಈ ಹಿಂದೆಯೂ ಹೇಳಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್ ಟ್ರಂಪ್
I’ve watched Modi for a decade now. No one on the world stage can hold a candle to him. He’s respected by all other leaders and loved by Trump. They have a very strong friendship that’s going to be mutually beneficial for the coming years. Very exciting. pic.twitter.com/53OrGGYNRl
— Patrick Brauckmann 🕉️ (@vonbrauckmann) February 13, 2025
ಹಾಗೆಯೇ, ಸರ್ಕಾರಗಳು ಕುಟುಂಬಗಳನ್ನು ದಾರಿ ತಪ್ಪಿಸುವ ಮತ್ತು ಅಮೆರಿಕಕ್ಕೆ ಕರೆತರುವ ಮಾನವ ಕಳ್ಳಸಾಗಣೆ ವ್ಯವಸ್ಥೆಯ ಮೇಲೆಯೂ ದಾಳಿ ಮಾಡಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಾನವ ಕಳ್ಳಸಾಗಣೆ ವ್ಯವಸ್ಥೆಯನ್ನು ಅದರ ಬೇರುಗಳಿಂದಲೇ ನಿರ್ಮೂಲನೆ ಮಾಡಲು ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ