ಅತ್ಯಾಚಾರವೆಸಗಿ ಬಾಲಕಿಯ ಗರ್ಭಪಾತ ಮಾಡಿಸಲು ಮುಂದಾಗಿದ್ದ ಅಣ್ಣ ಸೇರಿ ಇಬ್ಬರ ಬಂಧನ
ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಗರ್ಭಪಾತ ಮಾಡಿಸಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಅಣ್ಣ ಹಾಗೂ ಮತ್ತೋರ್ವ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಪಾಲ್ಘಡದಲ್ಲಿ ನಡೆದಿದೆ. 16 ವರ್ಷದ ಬಾಲಕಿಯ ದೂರಿನ ಮೇರೆಗೆ ಮೀರಾ-ಭಯಂದರ್, ವಸೈ-ವಿರಾರ್ ಪೊಲೀಸರು ಗುರುವಾರ ಆಕೆಯ 18 ವರ್ಷದ ಸಹೋದರ ಮತ್ತು ಸಂಬಂಧಿಯೊಬ್ಬರನ್ನು ಬಂಧಿಸಿದ್ದು ಅವರ ವಯಸ್ಸು ತಿಳಿದುಬಂದಿಲ್ಲ.

ಕಳೆದ ವರ್ಷ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ತನ್ನ ಸಹೋದರ ಮತ್ತು ಸಂಬಂಧಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಆಕೆ ಗರ್ಭಿಣಿಯಾದಾಗ, ಆತ ಗರ್ಭಪಾತಕ್ಕಾಗಿ ಬಾಲಕಿಯನ್ನು ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದರು.
ಆರೋಪಿಗಳ ವಿರುದ್ಧ ಅತ್ಯಾಚಾರ, ಬಾಲಕಿಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಮುಂದಾಗಿದ್ದು, ಮತ್ತು ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಚಿಕ್ಕಬಳ್ಳಾಪುರ: ಅಪ್ರಾಪ್ತೆ ಜತೆ ಲವ್, ಪ್ರೇಯಸಿಯ ಸಾಕಲು ಕಳ್ಳತನ ಮಾಡ್ತಿದ್ದ ಯುವಕ ಲಾಕ್
4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಬಂಧನ ಫರಿದಾಬಾದ್‌ನ ದಬುವಾದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಮನೆಯ ಬಳಿಯ ರಸ್ತೆ ಬದಿಯ ಗಿಡಗಂಟಿಗಳಲ್ಲಿ ಎಸೆದು ಹೋಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ 22 ವರ್ಷದ ಮೊಹಮ್ಮದ್ ಜಾವೇದ್ ಅಲಿಯಾಸ್ ಜಬೀದ್ ಈ ಪ್ರದೇಶದಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಸೋಮವಾರ ಮಧ್ಯಾಹ್ನ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದುದನ್ನು ಅವನು ಗಮನಿಸಿದ್ದಾನೆ. ಆಕೆಗೆ ಅಂಗಡಿಗೆ ತೆರಳಿ ಬಿಸ್ಕತ್ ಪ್ಯಾಕ್ ತರುವಂತೆ ಹೇಳಿ ಕಳುಹಿಸಿ ಬಳಿಕ ಆಕೆಯ ಹಿಂದೆಯೇ ಹೋಗಿ ಬೇರೆಡೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ