AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಪಾರ್ಟ್ನರ್ಸ್ ಬೇಕು, ನೀತಿಪಾಠ ಹೇಳೋರಲ್ಲ: ಯೂರೋಪ್ ದೇಶಗಳಿಗೆ ಜೈಶಂಕರ್ ಸ್ಪಷ್ಟ ಸಂದೇಶ

S Jaishankar's strong message to Europe: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮತ್ತೊಮ್ಮೆ ಪಾಶ್ಚಿಮಾತ್ಯ ದೇಶಗಳ ಮೇಲೆ ಹರಿಹಾಯ್ದಿದ್ದಾರೆ. ಐರೋಪ್ಯ ದೇಶಗಳ ಇಬ್ಬಗೆ ನೀತಿಯನ್ನು ಅವರು ಟೀಕಿಸಿದ್ದಾರೆ. ಉಕ್ರೇನ್ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತಕ್ಕೆ ಈ ದೇಶಗಳು ಪಾಠ ಮಾಡುವುದನ್ನು ಟೀಕಿಸಿರುವ ಸಚಿವರು, ಭಾರತಕ್ಕೆ ಬೋಧಕರು ಬೇಕಾಗಿಲ್ಲ, ಪಾರ್ಟ್ನರ್ಸ್ ಬೇಕಾಗಿದೆ ಎಂದಿದ್ದಾರೆ.

ಭಾರತಕ್ಕೆ ಪಾರ್ಟ್ನರ್ಸ್ ಬೇಕು, ನೀತಿಪಾಠ ಹೇಳೋರಲ್ಲ: ಯೂರೋಪ್ ದೇಶಗಳಿಗೆ ಜೈಶಂಕರ್ ಸ್ಪಷ್ಟ ಸಂದೇಶ
ಎಸ್ ಜೈಶಂಕರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 04, 2025 | 7:16 PM

Share

ನವದೆಹಲಿ, ಮೇ 4: ಇದ್ದದ್ದನ್ನು ಇದ್ದಂತೆ ಯಾವ ಮುಲಾಜಿಲ್ಲದೆ ಹೇಳುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಐರೋಪ್ಯ ದೇಶಗಳ ಇಬ್ಬಗೆ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಗತಿಕ ವಿಚಾರಗಳಲ್ಲಿ ವಾಸ್ತವವನ್ನು ಆ ದೇಶಗಳು ಅರಿತುಕೊಳ್ಳುವ ಸಂದರ್ಭ ಇದು ಎಂದು ಜೈಶಂಕರ್ ಹೇಳಿದ್ದಾರೆ. ಇನ್ನೂ ಮುಂದುವರಿದ ಅವರು, ಭಾರತಕ್ಕೆ ನೀತಿ ಪಾಠ ಹೇಳುವವರು ಬೇಕಾಗಿಲ್ಲ, ಸಹವರ್ತಿಗಳು ಬೇಕು ಎಂದಿದ್ದಾರೆ.

‘ನಾವು ಜಗತ್ತಿನತ್ತ ನೋಡುತ್ತಿದ್ದೇವೆ ಎಂದರೆ ಅದು ಪಾರ್ಟ್ನರ್​​ಗಳನ್ನು ಎದುರು ನೋಡುತ್ತಿದ್ದೇವೆ ಎಂದರ್ಥ. ನಮಗೆ ಬೋಧಕರು ಬೇಕಾಗಿಲ್ಲ. ಅದರಲ್ಲೂ, ಹೊರಗೆ ಹೇಳೋದು ಒಂದು ಮನೆಯೊಳಗೆ ಮಾಡೋದು ಒಂದು ಎಂದಿರುವ ಬೋಧಕರಂತೂ ಬೇಕಾಗಿಲ್ಲ. ಕೆಲ ಯೂರೋಪ್ ಭಾಗವು ಈ ಸಮಸ್ಯೆ ಹೊಂದಿದೆ ಎಂದನಿಸುತ್ತೆ. ಕೆಲ ದೇಶಗಳು ಬದಲಾಗುತ್ತಿವೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಸಿದ್ಧತೆ? ವಾಯುಪಡೆ ಮುಖ್ಯಸ್ಥರನ್ನು ಭೇಟಿಯಾದ ಪ್ರಧಾನಿ ಮೋದಿ

ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಎ ಜೈಶಂಕರ್ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅನೇಕ ವಿಚಾರದಲ್ಲಿ ಭಾರತದ ಮೇಲೆ ಒತ್ತಡ ಹಾಕಲು ಬಂದಾಗೆಲ್ಲಾ ಆ ದೇಶಗಳಿಗೆ ಅವರು ಖಡಕ್ ತಿರುಗೇಟು ನೀಡಿದ್ದಿದೆ. ಯೂರೋಪಿಯನ್ ಯೂನಿಯನ್ ವಿರುದ್ಧವೂ ಅನೇಕ ಬಾರಿ ಕಾಠಿಣ್ಯವಾಗಿ ಮಾತನಾಡಿದ್ದಿದೆ.

ತನ್ನ ಸಮಸ್ಯೆಗಳು ಜಗತ್ತಿನ ಸಮಸ್ಯೆ. ಜಗತ್ತಿನ ಸಮಸ್ಯೆಗಳು ಯೂರೋಪ್​​ನ ಸಮಸ್ಯೆಗಳಲ್ಲ ಎನ್ನುವ ಮನಸ್ಥಿತಿಯಲ್ಲಿ ಯೂರೋಪ್ ಇದೆ ಎಂದು ಜೈಶಂಕರ್ ಅವರು ಉಕ್ರೇನ್ ವಿಚಾರದಲ್ಲಿ ಕುಟುಕಿದ್ದರು.

ಉಕ್ರೇನ್ ವಿಚಾರದಲ್ಲಿ ಭಾರತ ರಷ್ಯಾ ವಿರುದ್ಧವಾದ ನಿಲುವು ತಳೆದಿಲ್ಲ ಎಂಬುದು ಪಾಶ್ಚಿಮಾತ್ಯ ದೇಶಗಳ ತಕರಾರು. ಚೀನಾ ಜೊತೆ ಸಮಸ್ಯೆ ಹೆಚ್ಚಾದಾಗ ಭಾರತಕ್ಕೆ ಜಾಗತಿಕ ಬೆಂಬಲ ಸಿಗದೇ ಹೋಗಬಹುದು ಎನ್ನುವ ಪರೋಕ್ಷ ಎಚ್ಚರಿಕೆಯನ್ನು ಐರೋಪ್ಯ ದೇಶಗಳು ಮಾಡುತ್ತಿವೆ.

ಇದನ್ನೂ ಓದಿ: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ

ಚೀನಾ ಜೊತೆಗಿನ ನಮ್ಮ ಸಮಸ್ಯೆಗಳಿಗೂ ಉಕ್ರೇನ್​ಗೂ ಸಂಬಂಧ ಇಲ್ಲ, ರಷ್ಯಾಗೂ ಸಂಬಂಧ ಇಲ್ಲ. ಮೊದಲ ಬಿಕ್ಕಟ್ಟು ದಾಟಿದರೆ ಎರಡನೇ ಬಿಕ್ಕಟ್ಟಿಗೆ ಸಹಾಯವಾಗುತ್ತದೆ ಎನ್ನುವ ತರ್ಕ ಕೆಲಸ ಮಾಡೋದಿಲ್ಲ. ಯೂರೋಪ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್