Coronavirus cases in India: ದೇಶದಲ್ಲಿ 31,382 ಹೊಸ ಕೊವಿಡ್ ಪ್ರಕರಣ ಪತ್ತೆ, 318 ಸಾವು
Covid-19: ಸಕ್ರಿಯ ಪ್ರಕರಣಗಳು 3 ಲಕ್ಷಕ್ಕಿಂತ ಹೆಚ್ಚಿದ್ದು , 3.28 ಕೋಟಿ ಜನರು ಧನಾತ್ಮಕ ಪರೀಕ್ಷೆ ನಂತರ ಚೇತರಿಸಿಕೊಂಡಿದ್ದಾರೆ. ಇವುಗಳಲ್ಲಿ, ಕೇರಳವು 19,682 ಹೊಸ ಪ್ರಕರಣಗಳನ್ನು ದಾಖಲಿಸಿದೆ ಮತ್ತು ಇದು ದೇಶದಲ್ಲಿ 1 ಲಕ್ಷ ಸಕ್ರಿಯ ಪ್ರಕರಣಗಳನ್ನು ಹೊಂದಿದೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 31,382 ಹೊಸ ಕೊವಿಡ್ -19 (Covid-19) ಪ್ರಕರಣಗಳು ದಾಖಲಾಗಿವೆ. 318 ಹೊಸ ಸಾವುಗಳೊಂದಿಗೆ, ದೇಶದ ಸಾವಿನ ಸಂಖ್ಯೆ ಈಗ 4.46 ಲಕ್ಷ ದಾಟಿದೆ . ಸಕ್ರಿಯ ಪ್ರಕರಣಗಳು 3 ಲಕ್ಷಕ್ಕಿಂತ ಹೆಚ್ಚಿದ್ದು , 3.28 ಕೋಟಿ ಜನರು ಧನಾತ್ಮಕ ಪರೀಕ್ಷೆ ನಂತರ ಚೇತರಿಸಿಕೊಂಡಿದ್ದಾರೆ. ಇವುಗಳಲ್ಲಿ ಕೇರಳವು 19,682 ಹೊಸ ಪ್ರಕರಣಗಳನ್ನು ದಾಖಲಿಸಿದೆ ಮತ್ತು ಇದು ದೇಶದಲ್ಲಿ 1 ಲಕ್ಷ ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಕೊರೊನಾವೈರಸ್ ಧನಾತ್ಮಕ ಪರೀಕ್ಷೆ ಮಾಡಿದ ವ್ಯಕ್ತಿಯೊಬ್ಬ 30 ದಿನಗಳೊಳಗೆ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಕೊವಿಡ್ ಸಾವು ಎಂದು ಪರಿಗಣಿಸಲಾಗಿದೆ ಎಂದು ಕೇಂದ್ರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಗುರುವಾರ ಹೊರಡಿಸಿದ ಆದೇಶದಲ್ಲಿ ಸರ್ಕಾರವು ವಿಭಿನ್ನ ಸಾಮರ್ಥ್ಯ ಹೊಂದಿರುವ ಜನರು ಮತ್ತು ನಿರ್ಬಂಧಿತ ಚಲನಶೀಲತೆ ಹೊಂದಿರುವವರಿಗೆ ಅವರ ಮನೆಗಳಲ್ಲಿ ಕೊವಿಡ್ -19 ಲಸಿಕೆ ಪ್ರಮಾಣವನ್ನು ನೀಡಲಾಗುವುದು ಎಂದು ಘೋಷಿಸಿತು.
ಲಸಿಕೆ ವಿತರಣೆಯಲ್ಲಿ ಭಾರತದ ವಯಸ್ಕ ಜನಸಂಖ್ಯೆಯ ಸುಮಾರು 66 ಪ್ರತಿಶತದಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಕೊವಿಡ್ -19 ಲಸಿಕೆಯನ್ನು ನೀಡಲಾಗಿದೆ. ಆದರೆ 23 ಪ್ರತಿಶತ ಜನರು ಎರಡೂ ಲಸಿಕೆಗಳನ್ನು ಪಡೆದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 63 ಪ್ರತಿಶತದಷ್ಟು ಡೋಸ್‌ಗಳನ್ನು ನೀಡಲಾಗಿದ್ದು, ನಗರ ಪ್ರದೇಶಗಳಲ್ಲಿ ಸುಮಾರು 35 ಪ್ರತಿಶತದಷ್ಟು ಡೋಸ್‌ಗಳನ್ನು ನೀಡಲಾಗಿದೆ.
ಅಂಡಮಾನ್‌ನಲ್ಲಿ 1 ಹೊಸ ಕೊವಿಡ್ -19 ಪ್ರಕರಣಗಳ ಸಂಖ್ಯೆ 7,616 ಕ್ಕೆ ಏರಿಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೊವಿಡ್ ಸಂಖ್ಯೆ ಶುಕ್ರವಾರ 7,616 ಕ್ಕೆ ಏರಿಕೆಯಾಗಿದ್ದು, ಮತ್ತೊಬ್ಬ ವ್ಯಕ್ತಿ ಸೋಂಕಿಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ಆರೋಗ್ಯ ಬುಲೆಟಿನ್ ತಿಳಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈಗ 17 ಸಕ್ರಿಯ ಪ್ರಕರಣಗಳಿವೆ. 7,470 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಕೊರೊನಾವೈರಸ್ ಸಾವಿನ ಸಂಖ್ಯೆ 129 ನಲ್ಲಿ ಬದಲಾಗದೆ ಉಳಿದಿದೆ ಏಕೆಂದರೆ ಯಾವುದೇ ಹೊಸ ಸಾವು ದಾಖಲಾಗಿಲ್ಲ.
ಕೇರಳ ಮತ್ತು ಮಹಾರಾಷ್ಟ್ರಗಳು ಸಂಪೂರ್ಣ ಸಂಖ್ಯೆಯಲ್ಲಿ ಕುಸಿತವನ್ನು ತೋರಿಸುತ್ತಿದ್ದರೂ, ಅವುಗಳ ಹೆಚ್ಚಿನ ಪ್ರಕರಣಗಳ ಹೊರೆಯಿಂದಾಗಿ ಒಟ್ಟಾರೆ ಕುಸಿತದ ವೇಗವು ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿದೆ.
India reports 31,382 new COVID cases, 32,542 recoveries, and 318 deaths in the past 24 hours
Active cases: 3,00,162 Total recoveries: 3,28,48,273 Death toll: 4,46,368
Vaccination: 84,15,18,026 (72,20,642 in the last 24 hours) pic.twitter.com/GMvxUehKwc
— ANI (@ANI) September 24, 2021
ಕೇರಳವು 19,682 ಹೊಸ ಕೊರೊನಾವೈರಸ್ ಪ್ರಕರಣಗಳು, 152 ಸಾವು ಕೇರಳವು ಗುರುವಾರ 19,682 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 152 ಸಾವುಗಳನ್ನು ವರದಿ ಮಾಡಿದೆ. ಈ ಮೂಲಕ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 45,79,310 ಮತ್ತು ಸಾವಿನ ಸಂಖ್ಯೆ 24,191 ಕ್ಕೆ ತಲುಪಿಸಿದೆ. ಬುಧವಾರದಿಂದ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 20,510 ಆಗಿದ್ದು ಇದು ಒಟ್ಟು ಚೇತರಿಕೆಯನ್ನು 43,94,476 ಕ್ಕೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 1,60,046 ಆಗಿದೆ ಎಂದು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 1,21,945 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
14 ಜಿಲ್ಲೆಗಳಲ್ಲಿ ತ್ರಿಶೂರ್ 3,033 ಪ್ರಕರಣಗಳನ್ನು ದಾಖಲಿಸಿದ್ದು, ಎರ್ನಾಕುಲಂ (2,564), ಕೋಯಿಕ್ಕೋಡ್ (1,735), ತಿರುವನಂತಪುರಂ (1,734), ಕೊಲ್ಲಂ (1,593), ಕೋಟ್ಟಯಂ (1,545), ಮಲಪ್ಪುರಂ (1,401), ಪಾಲಕ್ಕಾಡ್ (1,378), ಆಲಪ್ಪುಳ (1,254) ಮತ್ತು ಕಣ್ಣೂರು (924) ಪ್ರಕರಣಗಳು ವರದಿ ಆಗಿವೆ.
ಇದನ್ನೂ ಓದಿ: ಕೊವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ವಿಚಾರ; ಅಕ್ಟೋಬರ್ 4ರಂದು ಸುಪ್ರೀಂಕೋರ್ಟ್ ಆದೇಶ
ಇದನ್ನೂ ಓದಿ: ವಿಶೇಷ ಅಗತ್ಯವಿರುವ ವ್ಯಕ್ತಿಗಳಿಗೆ ಮನೆಯಲ್ಲೇ ಕೊವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ
(India records 31,382 new covid-19 cases 318 deaths in the 24 hours as per health ministry data)